‘ಸಾರಾ ಮಹೇಶ್​ ತರಹ ಅಧಿಕಾರ ನಡೆಸುವುದಕ್ಕೆ ಯಾರಿಗೂ ಬರೋಲ್ಲ’ – ಶಾಸಕ ಜಿ.ಟಿ ದೇವೇಗೌಡ

ಮೈಸೂರು: ಹಿಂದೆಯಿದ್ದು ಮಾಡಿಸ್ತಾರೆ ಮುಂದೆ ಬಂದು ಕೆಲಸ ಮಾಡಿಸೋದಕ್ಕೆ ಸಾ.ರಾ.ಮಹೇಶ್​​ಗೆ ಒಳ್ಳೆ ವಿದ್ವತ್ ಇದೆ. ಅವರಿಗೆ ಮೈಮುಲ್ ಬಗ್ಗೆ ಎಲ್ಲವು ಗೊತ್ತಿದೆ, ಅವರ ತರಹ ಅಧಿಕಾರ ನಡೆಸೋದಕ್ಕೆ ಯಾರಿಗೂ ಬರಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ಅವರು ಸಾರಾ ಮಹೇಶ್​ಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

ಗುರುವಾರ ಮೈಸೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮಲ್ಲಿ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ಟಚ್ ಮಾಡಲ್ಲ, ಅವರವರ ಕೆಲಸ ಅವರರವೇ ಮಾಡುವುದಕ್ಕೆ ಬಿಡುತ್ತೇವೆ. ಅವರ ಥರ ಎಲ್ಲಾ ನಾನೇ ಮಾಡಬೇಕು ಅಂತ ಹೋಗಲ್ಲ ಎಂದು ಅವರು ತಿಳಿಸಿದರು.

ಇನ್ನು ಕಾಗದ ಪತ್ರ ಸಮಿತಿಗೂ ಅವರು ಹೋಗಿದ್ದಾರೆ ಎಂಬ ಮಾಹಿತಿಯಿದೆ. ಮೈಮುಲ್, ಡಿಸಿಸಿ ಬ್ಯಾಂಕ್ ಮುಂತಾದವು ಸ್ವಾಯತ್ತ ಸಂಸ್ಥೆಗಳು ಅದರ ನಿರ್ವಹಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಮೈಮುಲ್ ಬಗ್ಗೆ ನಾನು ಮಾತಾಡಲ್ಲ, ನಾನು ಯಾಕೆ ಮೈಮುಲ್ ಬಗ್ಗೆ ಮಾತಾಡಲಿ ಎಂದು ಸ್ವಪಕ್ಷದ ಶಾಸಕನ ವಿರುದ್ದವೇ ಜಿ.ಟಿ ದೇವೇಗೌಡ ಅವರು ಮಾತನಾಡಿದ್ದಾರೆ.

ಮಾಜಿ ಸಚಿವ ಸಾ.ರಾ ಮಹೇಶ್ ಅವರು ಎರಡು ದಿನಗಳ ಹಿಂದೆ ಮೈಮುಲ್​ನಲ್ಲಿ ಅಕ್ರಮ ನೇಮಕಾರಿ ನಡೆದಿದೆ ಎಂದು ಆರೋಪ ಮಾಡಿ ಅದಕ್ಕೆ ಸಂಬಂಧಿಸಿದ ಆಡಿಯೋ ಟೆಪ್​ಗಳನ್ನು ಸಹ ಬಿಡುಗಡೆ ಮಾಡಿದರು. ಅದುವಲ್ಲದೇ ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಇಲ್ಲವಾದ್ರೆ ಹೋರಾಟ ಮಾಡುತ್ತೇವೆ ಎಂದು ಸಾರಾ ಮಹೇಶ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

Recommended For You

About the Author: user

Leave a Reply

Your email address will not be published. Required fields are marked *