‘ಮುಚ್ಚು ಬಾಯಿ ರಾಸ್ಕಲ್​’ ಪದ ಬಳಕೆ ಹಿಂದಿನ ಪ್ರಸಂಗ ಬಿಚ್ಚಿಟ್ಟ ಸಚಿವ ಜೆ.ಸಿ ಮಾಧುಸ್ವಾಮಿ

ತುಮಕೂರು: ರೈತ ಮಹಿಳೆಗೆ ಮುಚ್ಚು ಬಾಯಿ ರಾಸ್ಕಲ್​ ಎಂದು ಅವಹೇಳನಕಾರಿ ಪದ ಬಳಕೆ ಮಾಡಿರುವ ಬಗ್ಗೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಆ ಭಾಗಕ್ಕೆ ನೀರು ಸಿಕ್ತಿಲ್ಲ ಎಂಬ ಕಾರಣಕ್ಕೆ ಪರಿಶೀಲನೆ ನಡೆಸಲು ಅಲ್ಲಿಗೆ ಹೋಗಿದ್ವಿ ಎಂದು ಅವರು ತಿಳಿಸಿದರು.

ನಗರದಲ್ಲಿಂದು ನಿನ್ನೆ ಕೋಲಾರದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದಕ್ಕೆ ಸ್ಪಷ್ಟೀಕರಣ ನೀಡಿದ ಅವರು, ಅವರು ರೈತರ ಸಂಘದವರೆಂದು ಗೊತ್ತಿರಲಿಲ್ಲ. ಕಾರ್ಯದರ್ಶಿಗೆ ಉತ್ತರ ಹೇಳಿ ಎಂದು ಹೇಳಿದ್ದೆ. 130 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಮಾತನಾಡಿದರು. ಏನಮ್ಮ ಈ ಪ್ರಶ್ನೆ ನನ್ನ ಕೇಳ್ತಿಯಾ ಅಂತ ನಾನು ಕೇಳ್ದೆ ಎಂದು ಅವರು ಪದಬಳಕೆ ಮುಂಚಿನ ಪ್ರಸಂಗ ಬಿಡಿಸಿ ಹೇಳಿದರು.

ಬಳಿಕ ಏನ್ರಿ ಮಾಡ್ತಿದಿರಿ ಅಂತ ನನ್ನನ್ನೇ ಕೇಳಿದರು, ನನಗೂ ಸ್ವಾಭಿಮಾನವಿದೆ. ನೋಡಮ್ಮ ನಾನು ಕೆಟ್ಟವನ್ನು ನೀನು ಸ್ವಲ್ಪ ರಿಕ್ವೆಸ್ಟ್ ಮಾಡಿಕೊಬೇಕು. ಈ ರೀತಿ ಆದೇಶ ಕೊಡಲಿ ಅಂತ ಬಂದಿಲ್ಲ ಎಂದೆ ಅವರು ಏರುಧ್ವನಿಯಲ್ಲಿ ಏನ್ರಿ ಮಾಡ್ತಿದ್ದೀರಾ… ಏನ್ರಿ ಮಾಡ್ತಿದ್ದೀರಾ ಅಂತ ಹೇಳಿದ್ದರು ಆಗ ನಾನು ಮುಚ್ಚಮ್ಮ ಬಾಯಿ ರಾಸ್ಕಲ್ ಅಂತ ಹೇಳ್ದೆ. ಆದೇಶ ಕೊಡಲಿಕ್ಕೆ ಬರಬೇಡ ರಿಕ್ವೆಸ್ಟ್ ಮಾಡಿ ಎಂದೆ ಎಂದು ಜೆ.ಸಿ ಮಾಧುಸ್ವಾಮಿ ಅವರು ತಿಳಿಸಿದರು.

ಆ ಊರಿಗೆ ಹೋಗಿ ಬಾಯಿಗೆ ಬಂದ್ಹಾಗೇ ಬೈಸಿಕೊಳ್ಳಲಿಕ್ಕೆ ಹೋಗಿದ್ವಾ. ಅವರು ಏರುಧ್ವನಿಯಲ್ಲಿ ಮಾತನಾಡಿದರು. ಪ್ರತಿ ಸರಿಯೂ ಈ ಯಮ್ಮನದು ಅದೇ ಕೆಲಸವಂತೆ. ಪ್ರತಿಯೊಬ್ಬ ರಾಜಕೀಯ ನಾಯಕರಿಗೂ ಇದೇ ರೀತಿ ಮಾಡ್ತಾರೆ. ಈ ಗಲಾಟೆ ನಡೆಯಬಾರದಿತ್ತು. ಆಯಮ್ಮ ಅದೇ ರೀತಿ ನಡೆದುಕೊಂಡು ಬಂದಿದ್ದಾರೆ ಎಂದರು.

ಸದ್ಯ ಸ್ಥಳೀಯರು ಹೇಳಿದ್ರು ಆಯಮ್ಮನ ನೇಚರ್ ಅಂತಹದ್ದು ಎಂದು. ನನಗೇನು ಕೆಟ್ಟಪದ ಎಂದು ತಿಳಿದುಕೊಂಡಿಲ್ಲ. ಒಂದು ಮನುಷ್ಯನಿಗೆ ಹೇಳಿದ್ರೆ ಜಾತಿಗೆ, ಲಿಂಗಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಅವರು ಮಾತನಾಡಿದ್ದಾರೆ.

ಸಿದ್ದರಾಮಯ್ಯ ಹೇಳಿದಂತೆ ರಾಜೀನಾಮೆ ಕೊಡಲು ನನ್ನನ್ನ ಯಾರೂ ತಬ್ಬಿಕೊಂಡು ಮುತ್ತೂ ಕೊಟ್ಟಿಲ್ಲ, ನಾನು ರಾಜೀನಾಮೆ ಕೊಡುವ ಸ್ಥಿತಿ ನಿರ್ಮಾಣ ಆಗಲ್ಲ ಅಂತ ಸಿದ್ದರಾಮಯ್ಯಗೆ ಹೇಳಿ. ನಾನು ಸ್ವಾಭಿಮಾನಿ. ನನ್ನ ನಾಯಕರು ಕರೆದು ರಾಜೀನಾಮೆ ಕೇಳಿದ್ರೆ ಒಂದು ಕ್ಷಣವೂ ಸುಮ್ಮನಿರೋದಿಲ್ಲ, ಹೆಣ್ಣು ಮಕ್ಕಳ ಮನಸ್ಸಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದು ಅವರು ನುಡಿದರು.

 

Recommended For You

About the Author: user

Leave a Reply

Your email address will not be published. Required fields are marked *