‘ಸಚಿವರಾಗಿ ಮಹಿಳೆಗೆ ಈ ರೀತಿ ಮಾತಾಡೋದು ತಪ್ಪು ಇದನ್ನುಸಹಿಸಿಕೊಳ್ಳೋಕೆ ಆಗಲ್ಲ’

ಚಿಕ್ಕಬಳ್ಳಾಪುರ: ರೈತ ಮಹಿಳೆಯಗೆ ಮುಚ್ಚು ಬಾಯಿ ರಾಸ್ಕಲ್​ ಎಂದು ಅವಹೇಳನಕಾರಿ ಪದ ಬಳಕೆ ಮಾಡಿರುವ ಕಾನೂನು ಹಾಗೂ ಹಾಸನ ಜಿಲ್ಲೆ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು 200 ಹಾಸಿಗೆ ಸಾಮರ್ಥ್ಯವುಳ್ಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರೈತ ಮಹಿಳೆಯನ್ನು ಕರೆದು ಮಾತಾಡುತ್ತೇನೆ. ಜೆ.ಸಿ ಮಾಧುಸ್ವಾಮಿ ಮಾತು ಶೋಭೆ ತರಲ್ಲ, ಪತ್ರಿಕೆಲಿ ನೋಡಿ ತಿಳಿದುಕೊಂಡಿದ್ದೇನೆ ಎಂದರು.

ಇನ್ನು ಸಚಿವರಾಗಿ ಮಹಿಳೆಗೆ ಈ ರೀತಿ ಮಾತಾಡೋದು ತಪ್ಪು ಇದನ್ನು ಸಹಿಸಿಕೊಳ್ಳೊಕೆ ಆಗಲ್ಲ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *