Top

ಮುದ್ದಿನ ಮಗಳಿಗಾಗಿ ಕವಿಯಾದ ಬಾದ್​ಶಾ ಕಿಚ್ಚ ಸುದೀಪ್..!

ಮುದ್ದಿನ ಮಗಳಿಗಾಗಿ ಕವಿಯಾದ ಬಾದ್​ಶಾ ಕಿಚ್ಚ ಸುದೀಪ್..!
X

ಸ್ಯಾಂಡಲ್​ವುಡ್​ ಬಾದ್ಶಾ ಕಿಚ್ಚ ಸುದೀಪ್​ ಆ್ಯಕ್ಟರ್, ಡೈರೆಕ್ಟರ್, ಸಿಂಗರ್​ ಅಂತ ಗೊತ್ತೇಯಿದೆ. ಆದ್ರೀಗ ಮಗಳು ಸಾನ್ವಿಗಾಗಿ ಕವಿ ಕೂಡ ಆಗಿದ್ದಾರೆ. ಮಗಳ 16ನೇ ವರ್ಷದ ಹುಟ್ಟುಹಬ್ಬಕ್ಕೆ ಎಂದೆಂದೂ ನೆನಪಿನಲ್ಲಿ ಉಳಿಯುವಂತಹ ಉಡುಗೊರೆ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್​, ಏನೇ ಮಾಡಿದರು ಸ್ಪೆಷಲ್ಲಾಗಿ ಇರುತ್ತೆ. ಹಾಗೇ ಅವರಿಗೆ ಅಷ್ಟೇ ಸ್ಪೆಷಲ್​ ಡೇ ಮೇ 20. ಯಾಕಂದ್ರೆ ಆ ದಿನ ಪ್ರೀತಿಯ, ಮುದ್ದಿನ ಮಗಳು ಸಾನ್ವಿ ಹುಟ್ಟಿದ ದಿನ. ಪ್ರತಿ ಬಾರಿಯೂ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡ್ತಿದ್ದ ಕಿಚ್ಚ, ಈ ಬಾರಿ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ.

ಅಂಬೆಗಾಲಿಡುತ್ತಾ, ತಂದೆಯ ಹೆಗಲ ಮೇಲೆ ಬೆಳೆದ ಮಗಳು, ನೋಡುನೋಡುತ್ತಲೇ ಎದೆಯೆತ್ತರಕ್ಕೆ ಬೆಳೆದು ನಿಂತಿದ್ದಾಳೆ. ಮೇ 20ಕ್ಕೆ 16ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ ಕಿಚ್ಚನ ಮಗಳು ಸಾನ್ವಿ. ಈ ಸಂಭ್ರಮವನ್ನ ಕಿಚ್ಚ ಸುದೀಪ್​ ವಿಶೇಷವಾಗಿ ಹಂಚಿಕೊಂಡಿದ್ದು, ಮಗಳಿಗೆ ಸ್ವತಃ ವಿಶೇಷ ಹಾಡೊಂದನ್ನು ಡೆಡಿಕೇಟ್ ಮಾಡಿದ್ದಾರೆ.

ಸಾನ್ವಿ ಹುಟ್ಟುಹಬ್ಬಕ್ಕೆ ಸ್ವತಃ ಕಿಚ್ಚ ಹಾಡೊಂದನ್ನು ರೆಡಿಮಾಡಿ, ಸ್ವತಃ ಹಾಡಿದ್ದಾರೆ. ಈ ಹಾಡಿಗೆ ಕಿಚ್ಚನ ಜೊತೆಗೆ ಪತ್ನಿ ಪ್ರಿಯಾ ಸುದೀಪ್​ ಕೂಡ ದನಿಗೂಡಿಸಿದ್ದಾರೆ. ನಿನ್ನೆ ಮೊನ್ನೆ ಇದ್ದ ಆಗಿದೆ. ಹೇಗಪ್ಪಾ ನಂಬೋದು ಅಂತ ಶುರುವಾಗೀ ಈ ಹಾಡಿನ ಸಾಹಿತ್ಯದಲ್ಲಿ, ಅಪ್ಪ-ಮಗಳ ಬಾಂಧವ್ಯ ಎಂತದ್ದು ಅನ್ನೋದನ್ನ ಹೇಳಲಾಗಿದೆ. ಲಿರಿಕ್ಸ್​ಗೆ ತಕ್ಕಂತೆ ಸಾನ್ವಿಯ ಹಳೆಯ ಪೋಟೊಗಳು, ಮೊದಲ ವರ್ಷದ ಬರ್ತ್​ಡೇ ಮೆಮೋರಿಯನ್ನ ಒಟ್ಟುಗೂಡಿಸಿ, ಬ್ಯೂಟಿಫುಲ್ಲಾದ ವಿಡಿಯೋವೊಂದನ್ನ ರೆಡಿಮಾಡಿದ್ದಾರೆ.

ಅಂದ್ಹಾಗೇ ಈ ವಿಡಿಯೋವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ, ಸ್ವತಃ ಕಿಚ್ಚ ಅಪ್​ಲೋಡ್ ಮಾಡಿದ್ದು, ಈ ಮೂಲಕ ಮಗಳಿಗೆ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲಾ ಈ ವಿಡಿಯೊ ರೆಡಿಮಾಡಲು ಸಾಥ್​ ಕೊಟ್ಟ ಮೂವರಿಗೆ ಕಿಚ್ಚ ಧನ್ಯವಾದ ಕೂಡ ತಿಳಿಸಿದ್ದಾರೆ. ಈ ಹಾಡಿಗೆ ಮ್ಯೂಸಿಕ್​ ಮಾಡಿರೋ ವಾಸುಕಿ ವೈಭವ್, ವಿಡಿಯೋ ಎಡಿಟ್ ಮಾಡಿರೋ ನಿರ್ದೇಶಕ ಅನೂಪ್​ ಭಂಡಾರಿ, ಹಾಡನ್ನು ರೆಕಾರ್ಡ್​ ಮಾಡಲು ಸಹಕರಿಸಿದ ವಿಜಯ್​ ಎಂಬೋರಿಗೆ ಥ್ಯಾಂಕ್ಸ್​ ಹೇಳಿದ್ದಾರೆ ಕಿಚ್ಚ.

ಮೊದಲಿಂದಲೂ ಕಿಚ್ಚನಿಗೆ ಮಗಳು ಅಂದ್ರೆ ಪ್ರೀತಿ. ಎಂಥಾ ಹೆಕ್ಟಿಕ್​ ಶೆಡ್ಯೂಲ್​ ಇದ್ರೂ ಕೂಡ, ಸಾನ್ವಿ ಜೊತೆ ಕಾಲ ಕಳೆಯೊಕ್ಕಂತ್ಲೇ ಒಂದಷ್ಟು ಸಮಯವಿಡ್ತಾರೆ. ಒಟ್ನಲ್ಲಿ ಅಪ್ಪನ ಪ್ರೀತಿಯ ಉಡುಗೊರೆ ಮಗಳಿಗೆ ಖುಷಿ ತಂದಿದೆ. ಲಾಕ್​ಡೌನ್​ ಟೈಮ್​ನಲ್ಲೂ ಮಗಳ ಬರ್ತ್​ಡೇಯನ್ನು ವಿಶೇಷವನ್ನಾಗಿಸಿದ್ದಾರೆ ಕಿಚ್ಚ ಸುದೀಪ್.

Next Story

RELATED STORIES