‘ಎಪಿಎಂಸಿ ಕಾಯ್ದೆಗೆ ಎಲ್ಲೂ ವಿರೋಧವಿಲ್ಲ ಮಾಡಬೇಕು ಅಂತ ಅವರು ಮಾಡುತ್ತಿದ್ದಾರೆ ಅಷ್ಟೇ’

ಬೆಂಗಳೂರು: ಸಹಕಾರ ಇಲಾಖೆಗೆ ನಾಲ್ಕು ವಿಭಾಗ ಬರಲಿವೆ, ಮೈಸೂರು ವಿಭಾಗದ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಬೆಂಗಳೂರು ವಿಭಾಗದ ಸಭೆ ನಡೆಯುತ್ತಿದೆ ಎಂದು ಸಹಕಾರ ಸಚಿವ ಎಸ್​.ಟಿ ಸೋಮಶೇಖರ್ ಅವರು ಬುಧವಾರ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಪ್ರಾರಂಭವಾಗಿದೆ. ಹೀಗಾಗಿ ಕೃಷಿ ಸಾಲ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದ್ದೇವೆ. ಕಳೆದ ಬಾರಿ 94,241 ರೈತರಿಗೆ 712  ಕೋಟಿ ಸಾಲ ನೀಡಿದ್ದೆವು. ಈ ವರ್ಷ 13,5977 ಜನರಿಗೆ 916 ಕೋಟಿ ನೀಡಿದ್ದೇವೆ ಎಂದು ಅವರು ತಿಳಿಸಿದರು.

ರೈತರಿಗೆ ಬೆಳೆಸಾಲ ಸೌಲಭ್ಯ ನೀಡಿದ್ದೇವೆ. ಈ ವರ್ಷ 14 ಸಾವಿರ ಕೋಟಿ ಸಾಲ ಸೌಲಭ್ಯ ನೀಡಲು ಚಿಂತನೆ ನಡೆಸಲಾಗಿದೆ. ತಾಲೂಕು ಕಚೇರಿಗಳು ಕೋವಿಡ್​-19ನಲ್ಲಿ ಬ್ಯುಸಿಯಾಗಿವೆ. ಹೀಗಾಗಿ ತಹಸೀಲ್ದಾರ್​ಗೆ ಸೂಚನೆ ನೀಡುವಂತೆ ಕಂದಾಯ ಇಲಾಖೆಗೆ ತಿಳಿಸಿದ್ದೇವೆ ಎಂದರು.

ದಲಿತ ಸಮುದಾಯಕ್ಕೆ ಹೆಚ್ಚಿನ ಪ್ರೋಗ್ರಾಂ ಮಾಡಿದ್ದೇವೆ. ಅವರಿಗೆ ಸಾಲ ಸೌಲಭ್ಯ ನೀಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರು ವಿಭಾಗದಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ. ಎಸ್ಸಿ/ಎಸ್ಟಿ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುತ್ತಿದ್ದೇವೆ. ಬೇರೆ ಜಿಲ್ಲೆಗಳಲ್ಲೂ ಅವರಿಗೆ ಸಾಲ ಸೌಲಭ್ಯ ನೀಡಲು ತೀರ್ಮಾನ ಮಾಡಲಾಗಿದೆ. ಅವರಿಗೆ ತಿಳುವಳಿಕೆ ಇಲ್ಲವಾದರೆ ತಿಳಿಸುತ್ತೇವೆ. ಅಂದುಕೊಂಡಿರುವ ಟಾರ್ಗೆಟ್ ರೀಚ್ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಲಇನ್ನು ಸ್ತ್ರೀ ಶಕ್ತಿ ಗುಂಪುಗಳಿಗೆ ಕಾಯಕ ಯೋಜನೆಯಡಿ ಅನುದಾನ ನೀಡುತ್ತಿದ್ದೇವೆ. ಕೋವಿಡ್​-19 ಸಂದರ್ಭದಲ್ಲಿ ಅವರು ನೆರವಾಗಿದ್ದಾರೆ. ಮಾಸ್ಕ್ ಸ್ಯಾನಿಟೈಸರ್ ತಯಾರಿಸಿ ನೀಡುತ್ತಿದ್ದಾರೆ. ಹೀಗಾಗಿ ಅವರಿಗೆ ಜೀರೋ ಬಡ್ಡಿದರದಲ್ಲಿ ಸಾಲ ನೀಡುತ್ತೇವೆ. ಇವರಿಗೆ ಸಾಲ ನೀಡಿದರೆ ರಿಕವರಿ ಮಾಡೋಕೆ ಅವಕಾಶವಿದೆ. ಈ ಬಗ್ಗೆ ಡಿಸಿಸಿ ಬ್ಯಾಂಕುಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದರು.

ಸದ್ಯ 1,466 ಕೋಟಿ ಸಾಲ ಸೌಲಭ್ಯ ನೀಡಲಾಗಿದ್ದು, ಇದನ್ನು ರಿಕವರಿ ಮಾಡಬೇಕಾಗಿದೆ. ಜೂನ್ ವರೆಗೆ ರಿಕವರಿ ತಟಸ್ಥಗೊಳಿಸಿದ್ದೆವು. ಜೂನ್ ವರೆಗೆ ವಿಸ್ತರಿಸಿದರೆ ನಮಗೆ ಸಮಸ್ಯೆಯಾಗಲಿದೆ. ಹೀಗಾಗಿ ಮೇ 31ರ ವರೆಗೆ ಡೆಡ್ ಲೈನ್ ನೀಡಲಾಗುತ್ತೆ. ಜೂನ್​ನಿಂದ ರೈತರಿಂದ ಸಾಲ ವಸೂಲಾತಿ ನಡೆಯಲಿದೆ ಎಂದು ಸಾಲ ಮರುಪಾವತಿ ಮಾಡಿಸಿಕೊಳ್ಳುವ ಬಗೆ ಮಾತನಾಡಿದ್ದಾರೆ.

ಎಪಿಎಂಸಿ ಕಾಯ್ದೆಗೆ ಕಾಂಗ್ರೆಸ್ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಮಾನಾಡಿದ ಎಸ್​.ಟಿ ಸೋಮಶೇಖರ್ ಅವರು, ಈಗಾಗಲೇ 68 ಸಂಸ್ಥೆಗಳಿಗೆ ಅವಕಾಶ ಕೊಟ್ಟಿದ್ದಾರೆ. ರೈತರಿಂದ ಬೆಳೆ ನೇರ ಖರೀದಿಗೆ ಅವಕಾಶ ಕೊಟ್ಟಿದ್ದಾರೆ. ಈಗ ಮತ್ತಷ್ಟು ಖಾಸಗಿಯವರಿಗೆ ಅವಕಾಶ ಸಿಗಲಿದೆ. ಇದರಿಂದ ರೈತರ ತನ್ನ ಬೆಳೆ ನೇರ ಮಾರಾಟಕ್ಕೆ ಅವಕಾಶವಿದೆ. ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆ ಮಾರಿಕೊಳ್ಳಬಹುದು. ಎಪಿಎಂಸಿ ಕಾಯ್ದೆಗೆ ಎಲ್ಲೂ ವಿರೋಧವಿಲ್ಲ, ಮಾಡಬೇಕು ಅಂತ ಅವರು ಮಾಡುತ್ತಿದ್ದಾರೆ ಅಷ್ಟೇ ಎಂದು ಅವರು ಆರೋಪ ಮಾಡಿದರು.

ಸದ್ಯ 157 ಎಪಿಎಂಸಿಗಳಲ್ಲಿ ಬೇರೆ ಬೇರೆ ಮಾರಾಟವಿದೆ. ಕಾಯ್ದೆಯನ್ನು ಈಗಷ್ಟೇ ತಂದಿದ್ದೇವೆ. ನೊಡೋಣ ಮುಂದೆ ಇನ್ನೂ ಸಮಯವಿದೆ ಎಂದು ಸಹಕಾರ ಸಚಿವ ಎಷ್​.ಟಿ ಸೋಮಶೇಖರ್ ಅವರು ಸ್ಪಷ್ಟನೆ ನೀಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *