‘ಅಧಿಕಾರಿಗಳನ್ನು ಬೇಕಂತಲೇ ವರ್ಗಾವಣೆ ಮಾಡಿದ್ರೆ ಖಂಡಿಸುತ್ತೇನೆ’ – ಶಾಸಕ ಡಿ.ಸಿ ಗೌರಿಶಂಕರ್​

ತುಮಕೂರು: ಬಿಜೆಪಿ ಸರ್ಕಾರದಿಂದ ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳೇ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಅವರು ಪ್ರತಿಕ್ರಿಯೆ ನೀಡಿದ್ದು, ಒಂದು ವೇಳೆ ದಲಿತ ಅಧಿಕಾರಿಗಳನ್ನು ಬೇಕಂತಲೇ ವರ್ಗಾವಣೆ ಮಾಡಿದ್ರೆ ಖಂಡಿಸುತ್ತೇನೆ ಎಂದಿದ್ದಾರೆ.

ಶನಿವಾರ ತುಮಕೂರು ತಾಲೂಕಿನ ಹೆಗ್ಗೆರೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಯಾಕಂದ್ರೆ ಸಾಮಾಜಿಕ ನ್ಯಾಯ ಕೊಡಬೇಕಾಗುತ್ತದೆ. ಅಧಿಕಾರಿಗಳ ಮೇಲೆ ಯಾರೋ ಆರೋಪ ಮಾಡಿದರು ಅಂತಾ ವರ್ಗಾವಣೆ ಮಾಡಬಾರದು. ತನಿಖೆ ಮಾಡಿ ತಪ್ಪಿತಸ್ಥರು ಅಂತ ಸಾಬೀತು ಆಗದೆ ವರ್ಗಾವಣೆ ಸರಿಯಲ್ಲ, ಒಂದು ವೇಳೆ ಹಾಗಾಗಿದ್ರೆ ನಾವು ಅಂತಹ ಅಧಿಕಾರಿಗಳ ಜೊತೆಗೆ ಇರುತ್ತೇವೆ ಎಂದು ಅವರು ದಲಿತ ಅಧಿಕಾರಗಳ ಪರ ಮಾತನಾಡಿದ್ದಾರೆ.

ಸದ್ಯ ನಾನು ಕೆಲವು ಮಾಧ್ಯಮದಲ್ಲಿ ದಲಿತ ಪರ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಅನ್ನೋದನ್ನು ನೋಡಿದ್ದೇನೆ. ಡಿಎಚ್ಒ ಆಗಿದ್ದವರ ಟಿಎಚ್ಒ ಆಗಿ ಡಿ ಪ್ರಮೋಟ್ ಮಾಡ್ತಾರೆ. ಬೇಕಂತಲೇ ಅಧಿಕಾರಿಗಳನ್ನು ವರ್ಗಾವಣೆ ಮಾಡೋದು. ಇದು ಎಲ್ಲೋ ಒಂದು ಕಡೆ ಅಧಿಕಾರಿಗಳಿಗೆ ಅವಮಾನ ಮಾಡುವಂತ ವಿಚಾರವಾಗಿದೆ ಎಂದು ಅವರು ಹೇಳಿದರು.

ಸದ್ಯ ಈ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿಯವರ ಗಮನಕ್ಕೆ ತಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ​ ಪತ್ರ ಬರೆಸುತ್ತೇನೆ. ಜೊತೆಗೆ ಪಂಚಾಯತ್​ ರಾಜ್ ಇಲಾಖೆಯಲ್ಲಿ ಕೆಲಸ ಮಾಡೋ ಅಂತಾ ಸ್ವೀಪರ್ಸ್, ಕಂಪ್ಯೂಟರ್ ಆಪರೇಟರ್ಗಳು, ವಾಟರ್ ಮನ್​ಗಳು, ಬಿಲ್ ಕಲೆಕ್ಟರ್ಗಳಿಗೆ ಸಂಬಳ ಹಾಕಿಲ್ಲ. ಇಂತಹ ಕಷ್ಟದ ಪರಿಸ್ಥಿಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ನೀಡುವ ಸಂಬಳವನ್ನು ನೀಡಿದ್ರೆ ಅವರ ಜೀವನಕ್ಕೆ ದಾರಿಯಾಗುತ್ತೆ. ಪಂಚಾಯತ್ ರಾಜ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ ಎಂದು ಡಿ.ಸಿ ಗೌರಿಶಂಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *