ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು: ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಕೆಲವರು ತಪ್ಪು ಅಭಿಪ್ರಾಯ ಕೆಲವರಿಂದ ಕೇಳಿ ಬಂದಿದೆ, ನಾನು ರೈತ ಪರ ಬಜೆಟ್ ಮಂಡಿಸಿದವನು, ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕಾರ ಮಾಡಿದವನು, ನನ್ನಿಂದ ರೈತರಿಗೆ ಅನ್ಯಾಯ ಆಗೋಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶುಕ್ರವಾರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಪರವಾಗಿ ಅವರ ಕೃಷಿ ಉತ್ಪನ್ನಗಳ ಬೆಲೆ ದುಪ್ಪಟ್ಟು ಆಗಬೇಕೆಂದು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಸುಮಾರು 45 ವರ್ಷಗಳ ಹಿಂದೆ ಎಪಿಎಂಸಿ ಮುಂದೆ ಸತ್ಯಾಗ್ರಹ ಮಾಡಿದ್ದೆ. ಎಪಿಎಂಸಿನಲ್ಲೇ ರೈತನ ಬೆಳೆ ಮಾರಬೇಕು. ಬೇರೆ ಕಡೆ ಮಾರಾಟ ಮಾಡೋ ಆಗಿಲ್ಲ ಎಂಬ ನಿರ್ಬಂಧದ ವಿರುದ್ಧ ಹೋರಾಟ ಮಾಡಿದ್ದೆ ಎಂದರು.

ರೈತ ತನ್ನ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣ ಅಥವಾ ನೇರವಾಗಿ ಮಾರಾಟ ಮಾಡುವ ಅವಕಾಶ ಹೊಂದಿದ್ದಾನೆ. ರೈತನಿಗೆ ಯೋಗ್ಯ ಧಾರಣೆ ದೊರೆಯುವ ಅವಕಾಶ ದೊರೆಯುತ್ತೆ. ಎಪಿಎಂಸಿ ಕಮಿಟಿಗಳಿಗೆ ಇದರಿಂದ ಯಾವುದೇ ಧಕ್ಕೆ ಆಗಲ್ಲ ಎಂದು ಮುಖ್ಯಮಂತ್ರಿ ಬಿಎಸ್​ವೈ ಅವರು ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಈ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿ ಕಮಿಟಿಗಳನ್ನು ಮಾರುಕಟ್ಟೆ ಪ್ರಾಂಗಣಕ್ಕೆ ಸೀಮಿತವಾಗಿದೆ. ರೈತರಿಗೆ ಅವರ ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡಲಾಗುತ್ತೆ. ನಿನ್ನೆಯೇ ಈ ಬಗ್ಗೆ ವಿರೋಧ ಪಕ್ಷದ ನಾಯಕರ ಜೊತೆ ಮಾತಮಾಡಿದ್ದೇನೆ. ಈ ತಿದ್ದುಪಡಿ ಬಗ್ಗೆ ತಪ್ಪು ಕಲ್ಪನೆ ಬೇಡ, ಬೇರೆ ರಾಜ್ಯದಲ್ಲಿ ಈ ಕಾಯ್ದೆ ತಿದ್ದುಪಡಿ ಆಗಿದೆ. ಅದರಂತೆ ಈ ತಿದ್ದುಪಡಿ ಮಾಡಿ ಕಾಯ್ದೆ ಜಾರಿಗೆ ತರುತ್ತಿದ್ದೇವೆ ಎಂದು ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *