ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪಗೆ ಚಿತ್ರ ನಟ ದುನಿಯಾ ವಿಜಯ್​ ಧನ್ಯವಾದ

ಬೆಂಗಳೂರು: ಮಾಹಾಮಾರಿ ಕೊರೊನಾ ವೈರಸ್​ ಸೋಂಕಿನಿಂದಾಗಿ ದೇಶದ್ಯಂತ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ ಇದರಿಂದಾಗಿ ಸಾರ್ವಜನಿಕರಿಗೆ ವ್ಯಾಪಾರಸ್ಥರಿಗೆ, ಕೂಲಿ ಕಾರ್ಮಿಕರಿಗೆ, ಜೀಮ್​ ಟ್ರೈನರ್​​ಗಳಿಗೆ ಹೀಗೆ ಇತ್ಯಾದಿ ಕ್ಷೇತ್ರಗಳ ಮಂದಿಗಳೆಲ್ಲ ಜೀವನ ನಡೆಸಲು ಸಾಕಷ್ಟು ಸವಾಲ್​ಗಳು ಎದುರಾಗಿರುವುದು ಸುಳ್ಳಲ್ಲ.

ಸದ್ಯ ಈ ಸ್ಯಾಂಡಲ್​ವುಡ್ ನಟ ದುನಿಯಾ ವಿಜಯ್ ಅವರು ಇತ್ತೀಚಿಗೆ ಕರ್ನಾಟಕ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರಿಗೆ ಮನವಿಯೊಂದನ್ನು ಮಾಡಿಕೊಂಡಿದ್ದರು. ಜೀಮ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ರೈನರ್​ಗಳಿಗೆ ಲಾಕ್​ಡೌನ್​ನಿಂದ ಅಧಿಕ ತೊಂದ್ರೆ ಎದುರಾಗಿದೆ ಜೀಮ್​ ಮಾಡಲು ಸರ್ಕಾರ ಅವಕಾಶ ಮಾಡಿಕೊಂಡಬೇಕು ಎಂದು ಕೇಳಿಕೊಂಡಿದ್ದರು.

ಈ ಮನವಿ ಸ್ಪಂದಿಸಿರುವ ಯಡಿಯೂರಪ್ಪ ಸರ್ಕಾರ ಸಕರಾತ್ಮಕವಾಗಿ ನಿರ್ಧಾರ ತೆಗೆದುಕೊಂಡಿರುವುದಕ್ಕೆ ದುನಿಯಾ ವಿಜಯ್ ಅವರು ಸಿಎಂ ಧನ್ಯವಾದಗಳನ್ನು ಟ್ವಟಿರ್​ನಲ್ಲಿ ತಿಳಿಸಿದ್ದಾರೆ.​

ಮೇ 18 ರಂದು ಜಿಮ್ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *