Top

ನರ್ಸ್ ಡೇ ದಿನವೇ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗಿಳಿದ ದಾದಿಯರು..!

ನರ್ಸ್ ಡೇ ದಿನವೇ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗಿಳಿದ ದಾದಿಯರು..!
X

ಕೊರೊನಾ ನಡುವೆಯೂ ವೈದ್ಯಕೀಯ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಳ ಹಾಗೂ ಹೊರ ಗುತ್ತಿಗೆ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಕೋರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಅಂದಹಾಗೇ ಇಂದು ವಿಶ್ವ ಶುಶ್ರೂಷಕರ ದಿನ. ಈ‌ ದಿನದಂತೆ ವಿವಿಧ ಬೇಡಿಕೆ ಈಡೇರಿಕೆಗೆ ನಿರ್ಲಕ್ಷ್ಯ ತೋರಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುತ್ತಿದ್ದಾರೆ.

ಈಗಾಗಲೇ ಕಳೆದ ಎರಡು ವರ್ಷಗಳಿಂದ ಹೊರ ಹಾಗೂ ಒಳ ಗುತ್ತಿಗೆ ನೌಕರರ ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡುತ್ತಲೇ ಬರುತ್ತಿರುವ ಸರ್ಕಾರಗಳು ನೌಕರರಿಂದ ಕೆಲಸ ಮಾತ್ರ ಸರಿಯಾಗಿ ತೆಗೆದುಕೊಳ್ಳುತ್ತಿವೆ ಆದರೆ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ. ಕಳೆದೆರಡು ತಿಂಗಳ ಹಿಂದೆಯೇ ಎಲ್ಲವೂ ಅಂತಿಮ ಹಂತಕ್ಕೆ ಬಂದಿದೆ ಇನ್ನು ತಕ್ಷಣ ಬೇಡಿಕೆ ಈಡೇರಿಸಲಾಗುವುದು ಎಂದು ತಿಳಿಸಿದ್ದ ಇಲಾಖೆ ನಂತರ ಕೋವಿಡ್ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಬೀಗಮುದ್ರೆ ಹಾಕಿದ ಕಾರಣ ಕೊರೋನಾ ಸಮಸ್ಯೆ ಇತ್ಯರ್ಥವಾಗುತ್ತಿದ್ದಂತೆಯೇ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಕೊರೋನಾ ಹೋರಾಟದಲ್ಲಿ ಗುತ್ತಿಗೆ ನೌಕರರು ಪ್ರಾಣ ಪಣಕ್ಕಿಟ್ಟು ಸರ್ಕಾರದ ಮಾತಿಗೆ ಹಾಗೂ ಜನರ ಆರೋಗ್ಯ ಹಿತಾಸಕ್ತಿಯ ಕಾರಣ ಕಾರ್ಯ ನಿರ್ವಹಿಸಿತು. ಆದರೆ ಏಪ್ರಿಲ್ 30 ರಂದು ನಡೆದ ಸಂಪುಟ ಸಭೆಯಲ್ಲಿ ಅಂತಿಮಗೊಳಿಸಿ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆಯನ್ನೂ ನೀಡಲಾಗಿತ್ತು. ಆದರೆ ಇದೂ ಸಹ ಹುಸಿಯಾಗಿರುವುದರಿಂದ ಈದೀಗ ಒಳ ಹೊರ ಗುತ್ತಿಗೆ ನೌಕರರು ಅನಿವಾರ್ಯವಾಗಿ ಹೋರಾಟ ತೀವ್ರ ಗೊಳಿಸುವ ಅನಿವಾರ್ಯತೆಗೆ ಬಂದಿರುವುದಾಗಿ ತಿಳಿಸಿದ್ದಾರೆ.

ಹೀಗಾಗಿ ಇಂದಿನಿಂದ ಮೇ 21ರವರೆಗೆ ಕೋರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕರ್ತವ್ಯನಿರ್ವಹಿಸುತ್ತಾ, ಸ್ಥಳದಲ್ಲಿಯೇ ಕಪ್ಪು ಪಟ್ಟಿ ಧರಿಸಿ ಜೊತೆಗೆ ವಿಶಿಷ್ಟ ರೀತಿಯಲ್ಲಿ ಸೇವೆಗೆ ಚ್ಯುತಿ ಬಾರದಂತೆ, ಬಿಡುವಿನ ವೇಳೆಯಲ್ಲಿ ಪ್ರತಿಭಟನಾ ಫಲಕಗಳ ಪ್ರದರ್ಶನಗಳ ಮೂಲಕ ಸರಕಾರದ ಗಮನ ಸೆಳೆಯುತ್ತಿದ್ದಾರೆ. ಇದರ ನಂತರವೂ ಇಲಾಖೆ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಅನಿವಾರ್ಯವಾಗಿ ಎರಡನೇ ಹಂತದಲ್ಲಿ ಮುಷ್ಕರವನ್ನು ಅನಿರ್ದಿಷ್ಟ ಅವಧಿಯವರೆಗೆ ಆರಂಭಿಸಲು ತೀರ್ಮಾನಿಸಲಾಗಿದೆ.

Next Story

RELATED STORIES