Top

ಹಾಸನ-ಶಿವಮೊಗ್ಗದಲ್ಲಿ ಕೊರೊನಾ ಭೀತಿ ಹಿನ್ನೆಲೆ: ಕಾಫಿನಾಡಿನ ಕೆಲ ಮಾರ್ಗಗಳು ಬಂದ್..!

ಹಾಸನ-ಶಿವಮೊಗ್ಗದಲ್ಲಿ ಕೊರೊನಾ ಭೀತಿ ಹಿನ್ನೆಲೆ: ಕಾಫಿನಾಡಿನ ಕೆಲ ಮಾರ್ಗಗಳು ಬಂದ್..!
X

ಮೊನ್ನೆ ಶಿವಮೊಗ್ಗ ಇವತ್ತು ಹಾಸನದಲ್ಲಿ ಕೊರೋನಾ ಪಾಸಿಟಿವ್ ಕೇಸ್ ಕಾಣಿಸಿಕೊಳ್ಳುತ್ತಿದ್ದಂತೆ ಕಾಫಿನಾಡು ಚಿಕ್ಕಮಗಳೂರಿಗರ ನಿದ್ದೆಗೆಡಿಸಿದೆ. ಇಂದು ಹಾಸನದಲ್ಲಿ ಐದು ಪಾಸಿಟಿವ್ ಕೇಸ್ ಬರ್ತಿದ್ದಂತೆ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಹಾಸನಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನ ಮತ್ತೆ ಬಂದ್ ಮಾಡುತ್ತಿದ್ದಾರೆ.

ಇಂದು ಕೂಡ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಗ್ರಾಮೀಣ ಭಾಗದಿಂದ ಸಕಲೇಶಪುರ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಮರಗುಂದ-ದೇವಾಲಕೆರೆಯ ಜಪಾವತಿ ಸೇತುವೆ ಮೇಲೆ ಬೃಹತ್ ಬಂಡೆಕಲ್ಲುಗಳನ್ನ ರಸ್ತೆಗೆ ಅಡ್ಡಲಾಗಿ ಹಾಕಿ ಸಂಚಾರವನ್ನ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ಈ ಮಾರ್ಗವಾಗಿ ಯಾರೂ ಹೋಗುವಂತಿಲ್ಲ. ಬರುವಂತಿಲ್ಲ.

ಕಳೆದ ಒಂದೂವರೆ ತಿಂಗಳಿಂದ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪಾಸಿಟೀವ್ ಕೇಸಿಲ್ಲ. ಗ್ರೀನ್ ಜೋನ್ ಕಾಫಿನಾಡು ಹಸಿರು ಜಿಲ್ಲೆಯಾಗೇ ಉಳಿಸಿಕೊಳ್ಳಲಿ ಎಂದು ಹಳ್ಳಿಗರು ಈ ನಿರ್ಧಾಕ್ಕೆ ಮುಂದಾಗಿದ್ದಾರೆ. ಈಗಾಗಲೇ ಸರ್ಕಾರ ಕೂಡ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ಮಾಡಿರೋದ್ರಿಂದ ಹೊರಜಿಲ್ಲೆಗಳಿಗೆ ಹೋಗಿ ಬರ್ತಿರೋರ ಸಂಖ್ಯೆ ಕೂಡ ಗಣನಿಯವಾಗಿ ಹೆಚ್ಚಾಗಿದೆ. ಹಾಗಾಗಿ, ಮಲೆನಾಡಿಗರೇ ಸ್ವಯಂ ಪ್ರೇರಿತರಾಗಿ ರಸ್ತೆಗಳನ್ನ ಬಂದ್ ಮಾಡಿ ಕೊರೋನಾ ಮುಕ್ತ ಜಿಲ್ಲೆಯನ್ನಾಗಿಸಲು ಮುಂದಾಗಿದ್ದಾರೆ.

Next Story

RELATED STORIES