Top

'ಉಚಿತವಾಗಿ ಕರೆತರಬೇಕಿದ್ದ ಕಾರ್ಮಿಕರಿಗೆ ಟಿಕೇಟ್ ದರ ವಿಧಿಸ್ತಿರೋದು ವಿಪರ್ಯಾಸ'

ಉಚಿತವಾಗಿ ಕರೆತರಬೇಕಿದ್ದ ಕಾರ್ಮಿಕರಿಗೆ ಟಿಕೇಟ್ ದರ ವಿಧಿಸ್ತಿರೋದು ವಿಪರ್ಯಾಸ
X

ಕೊಪ್ಪಳ: ಕೊಪ್ಪಳದಲ್ಲಿ ಸರ್ಕಾರದ ವಿರುದ್ದ ಶಾಸಕ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳದ ಕುಷ್ಟಗಿ ಶಾಸಕ ಅಮರೆಗೌಡ ಬಯ್ಯಾಪುರ ನಿವಾಸದಲ್ಲಿ ಮಾತನಾಡಿದ ಸತೀಶ್, ಸರ್ಕಾರ ತಮ್ಮ ಮೂಲ ಆದಾಯ ಹೆಚ್ಚಿಸಿಕೊಳ್ಳಲು ಬಾರ್ ಓಪನ್ ಮಾಡಿಸಿದೆ. ಮದ್ಯ ಮಾರಾಟ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷದ ವಿರೋಧ ಇದೆ ಎಂದು ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ವಲಸೆ ಕಾರ್ಮಿಕರನ್ನು ಉಚಿತವಾಗಿ ಕರೆದುಕೊಂಡು ಬರಬೇಕಿತ್ತು. ಅವರಿಗೆ ಟಿಕೆಟ್ ದರ ವಿಧಿಸಿಸ್ತಾ ಇರೋದು ವಿಪರ್ಯಾಸ. 1 ಲಕ್ಷದಿಂದ 2 ಲಕ್ಷ ವಲಸೆ ಕಾರ್ಮಿಕರನ್ನು ಕರೆದುಕೊಂಡು ಬರೋದು ಸರ್ಕಾರಕ್ಕೆ ದೊಡ್ಡ ವಿಷಯವಲ್ಲ ಎಂದಿದ್ದಾರೆ.

Next Story

RELATED STORIES