Top

ಕಾರ್ಮಿಕರನ್ನು ತಮ್ಮೂರಿಗೆ ಸ್ಥಳಾಂತರಿಸುವ ಉಚಿತ ಬಸ್ ವ್ಯವಸ್ಥೆ ಇಂದಿಗೆ ಅಂತ್ಯ..!

ಕಾರ್ಮಿಕರನ್ನು ತಮ್ಮೂರಿಗೆ ಸ್ಥಳಾಂತರಿಸುವ ಉಚಿತ ಬಸ್ ವ್ಯವಸ್ಥೆ ಇಂದಿಗೆ ಅಂತ್ಯ..!
X

ಕಳೆದ ಐದು ದಿನಗಳಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ವಿಭಾಗಗಳಿಂದ ಅಂದಾಜು 1,‌08,300 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ. 3,610 ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗಿದೆ. ಬೆಂಗಳೂರು ನಗರದಿಂದಲೇ ಕಳೆದ ಆರು ದಿನಗಳಿಂದ ಒಟ್ಟು 2288 ಬಸ್ಸುಗಳನ್ನು ಕಾರ್ಯಚರಣೆ ಮಾಡಿ 69,515 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ.

ಇಂದು ಸಹ ಬೆಳಗ್ಗೆ 8 ಕ್ಕೆ ಬಸ್ಸುಗಳ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಬೆಳಗ್ಗೆ 8 ರಿಂದ 6.40 ರವರೆಗೆ ಗಂಟೆಯವರೆಗೆ ಇಂದು ಒಟ್ಟು 185 ಬಸ್ಸುಗಳನ್ನು , ರಾಜ್ಯದ 43 ಸ್ಥಳಗಳಿಗೆ ಕಾರ್ಯಾಚರಣೆ ಮಾಡಲಾಗಿರುತ್ತದೆ. ಕಾರ್ಮಿಕರಿಗಾಗಿ‌ ಉಚಿತ ಬಸ್‌ ವ್ಯವಸ್ಥೆ ಇಂದಿಗೆ ಕೊನೆಗೊಂಡಿದೆ.

ಬೆಂಗಳೂರು ಕೆಂಪು ವಲಯದಲ್ಲಿರುವುದರಿಂದ ನಾಳೆಯಿಂದ ಯಾವುದೇ ಬಸ್ಸುಗಳು ಬೆಂಗಳೂರಿನಿಂದ ಯಾವುದೇ ಬೇರೆ ಸ್ಥಳಗಳಿಗೆ ಕಾರ್ಯಚರಣೆಯಾಗುವುದಿಲ್ಲ. ದರ ವಿಧಿಸಿ ಸಹ ಬಸ್‌ಗಳ ಸಂಚಾರ ಎಲ್ಲ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.

Next Story

RELATED STORIES