Top

ಹೊರ ರಾಜ್ಯದಿಂದ ಕನ್ನಡಿಗರು ಮರಳಿರುವುದಕ್ಕೆ ಡಿ.ಸಿ.ತಮ್ಮಣ್ಣ ಹೇಳಿದ್ದೇನು..?

ಹೊರ ರಾಜ್ಯದಿಂದ ಕನ್ನಡಿಗರು ಮರಳಿರುವುದಕ್ಕೆ ಡಿ.ಸಿ.ತಮ್ಮಣ್ಣ ಹೇಳಿದ್ದೇನು..?
X

ಮಂಡ್ಯ: ಮಂಡ್ಯದಲ್ಲಿ ಮಾತನಾಡಿದ ಶಾಸಕ ಡಿ.ಸಿ.ತಮ್ಮಣ್ಣ, ಕೆ.ಆರ್.ಪೇಟೆಗೆ ಬಂದಿರುವವರು ಮಂಡ್ಯದವರೆ. ಅವರನ್ನ ಬರಬೇಡಿ ಎಂದು ಹೇಳುವುದಕ್ಕೆ ಆಗಲ್ಲಾ ಎಂದಿದ್ದಾರೆ.

ವಿದೇಶದಿಂದ ಬಂದಿರುವವರಿಂದ ಈ ಕೊರೋನಾ ಹರಡಿರುವುದು. ಭಾರತ ಸರ್ಕಾರ ಇವತ್ತು ೧ಲಕ್ಷ ೭೦ ಸಾವಿರ ಜನರನ್ನ ಏರ್ ಲಿಫ್ಟ್ ಮಾಡ್ತಿದೆ. ಬರುವುದಕ್ಕೆ ಮೊದಲೇ ತಿಳಿಸಬೇಕು ಕ್ರಮ ಕೈಗೊಳ್ಳಬೇಕು. ಬಂದವರನ್ನ ಕ್ವಾರಂಟೈನ್ ಮಾಡಬೇಕು. ಪರೀಕ್ಷೆ ಮಾಡಿ ನೆಗೆಟಿವ್ ವರದಿ ಬಂದಮೇಲೆ ಒಳಗಡೆ ಬಿಡಬೇಕು. ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ರೆ ತೊಂದರೆಯಾಗಲ್ಲಾ. ಜನಪ್ರತಿನಿಧಿಗಳು ಜನರಿಗೆ ತಿಳುವಳಿಕೆ ಮೂಡಿಸಲು ಕೆಲಸ ಮಾಡಬೇಕು ಎಂದಿದ್ದಾರೆ.

ಹೊರ ರಾಜ್ಯದ ಕನ್ನಡಿಗರು ಬರ್ತಿದ್ದಾರೆ. ಅವರನ್ನ ನಮ್ಮ ಜಿಲ್ಲೆಗೆ ಬರಬೇಡಿ ಎನ್ನುವುದಕ್ಕೆ ಆಗಲ್ಲಾ. ಅವರನ್ನ ಗಡಿಯಲ್ಲೆ ತಪಾಸಣೆ ಮಾಡಿ ಕಳುಹಿಸಲಿ ಎಂದು ತಮ್ಮಣ್ಣ ಆಗ್ರಹಿಸಿದ್ದಾರೆ.

ಸರ್ಕಾರ ಮತ್ತು ಜಿಲ್ಲಾಡಳಿತ ಕೈಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತಮ್ಮಣ್ಣ, ಸದ್ಯಕ್ಕೆ ಎಲ್ಲಾ ಸರಿ ಇದೆ ಅಂತಾ ಹೇಳುವುದಕ್ಕೆ ಆಗಲ್ಲಾ. ಕಟ್ಟಡ ಕಾರ್ಮಿಕರಿಗೆ, ಮಡಿವಾಳರಿಗೆ,ಆಟೋ ಚಾಲಕರಿಗೆ ನೆರವು ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳ ಕಾರ್ಮಿಕರನ್ನ ಕೈಬಿಟ್ಟಿದ್ದಾರೆ. ರೈತ ದೇಶದ ಬೆನ್ನೆಲುಬು ಅಂತಾರೆ. ದೇಶದ ಆರ್ಥಿಕತೆ ಸುಧಾರಣೆಯಾಗಬೇಕಾದರೆ ಕೃಷಿ ಮೂಲಕವೇ. ಸರ್ಕಾರ ಎಲ್ಲಾರಿಗೂ ಸಹಾಯ ಮಾಡಬೇಕು. ಕಬ್ಬಿನಗದ್ದೆಯಲ್ಲಿ ಕಬ್ಬು ಕಡಿಯುವವ ಬಿಸಿಲಿನಲ್ಲಿ ನಿಂತು ಕೆಲಸ ಮಾಡ್ತಾನೆ. ಅಷ್ಟು ಕಷ್ಟ ಪಟ್ಟರು ಬರಿ 400 ಸಿಗುತ್ತದೆ. ಅಂತವರನ್ನ ಗುರ್ತಿಸಿ ಸಹಾಯ ಮಾಡಬೇಕು ಎಂದು ತಮ್ಮಣ್ಣ ಎಂದು ಒತ್ತಾಯ ಮಾಡಿದ್ದಾರೆ.

Next Story

RELATED STORIES