Top

'ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸ್ತೇನೆ ಎಂಬುವುದು ಸುಳ್ಳು'

ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸ್ತೇನೆ ಎಂಬುವುದು ಸುಳ್ಳು
X

ಮಂಡ್ಯ: ಮಂಡ್ಯದಲ್ಲಿ ಆಹಾರದ ಕಿಟ್ ನೀಡಿ ಮಾತನಾಡಿದ ಅಭಿಷೇಕ್ ಅಂಬರೀಷ್, ರಾಜಕೀಯ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮಂಡ್ಯದ ಗೆಜ್ಜಲಗೆರೆಯಲ್ಲಿ ಮಾತನಾಡಿದ ಅಭೀಷೇಕ್, ಸದ್ಯಕ್ಕೆ ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ. ನಾನು ರಾಜಕೀಯಕ್ಕೆ ಬರಬೇಕೆಂದು ಯಾರು ಆಹ್ವಾನಿಸಿಲ್ಲ. ನಾನು ಮತ್ತಷ್ಟು ಸಿನಿಮಾದಲ್ಲಿ ನಟಿಸಬೇಕೆಂಬುದು ತಂದೆ ಮತ್ತು ನನ್ನ ಅಭಿಮಾನಿಗಳ ಆಸೆ. ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸ್ತೇನೆ ಎಂಬುವುದು ಸಹ ಸುಳ್ಳು ಎಂದಿದ್ದಾರೆ.

ಸದ್ಯ ಕೊರೋನಾ ವೈರಸ್‌ನಿಂದ ಆರೋಗ್ಯ ಕಾಪಾಡಿಕೊಳ್ಳೋಣ. ನನಗೆ ಸಿನಿಮಾ ಬಗ್ಗೆ ಕೇಳಿ ರಾಜಕೀಯದ ಬಗ್ಗೆ ನನ್ನ ತಾಯಿ, ನಿಮ್ಮ ಜಿಲ್ಲೆಯ ಸಂಸದರನ್ನ ಕೇಳಿ. ಸದ್ಯಕ್ಕೆ ನಾನು ರಾಜಕೀಯದಿಂದ ದೂರ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೊರೋನಾ ತಡೆಯುವಲ್ಲಿ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದಿದ್ದಾರೆ.

Next Story

RELATED STORIES