‘ನೆರವು ಘೋಷಿಸಿದ ರಾಜ್ಯಗಳಲ್ಲಿ ನಮ್ಮ ಸಿಎಂ ಮೊದಲು’ – ಎಂಎಲ್​ಸಿ ರವಿಕುಮಾರ್​

ಬೆಂಗಳೂರು: ನಿನ್ನೆ ಸಿಎಂ ಹಲವು ವರ್ಗಕ್ಕೆ ನೆರವು ಘೋಷಿಸಿದ್ದಾರೆ, ನೆರವು ಘೋಷಿಸಿದ ರಾಜ್ಯಗಳಲ್ಲಿ ನಮ್ಮ ಸಿಎಂ ಮೊದಲು ಎಂದು ಎಂಎಲ್​ಸಿ ರವಿಕುಮಾರ್ ಅವರು ಗುರುವಾರ ಹೇಳಿದ್ದಾರೆ.

ನಿನ್ನೆ ಸಿಎಂ ವಿವಿಧ ವರ್ಗಗಳಿಗೆ 1,610 ಕೋಟಿ ರೂ. ವಿಶೇಷ ಪ್ಯಾಕೇಜ್​ ಘೋಷಣೆ ಹಿನ್ನೆಲೆ ಇಂದು ಸಿಎಂ ನಿವಾಸ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮ ಸರ್ಕಾರ ಎಲ್ಲರಿಗೂ ನ್ಯಾಯವನ್ನು ಒದಗಿಸಿದೆ. ಇನ್ನು ಕೆಲವು ವರ್ಗಗಳನ್ನು ನೆರವಿನಡಿ ಬಿಡಲಾಗಿದೆ. ಹೀಗಾಗಿ ಇಂದು ಸಿಎಂ ಭೇಟಿ ಮಾಡಿ ನೆರವು ಘೋಷಿಸುವಂತೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಇನ್ನು ಕಮ್ಮಾರ, ಕೊರಚ, ಮೇದಾರ, ಕುಂಬಾರ, ಚಮ್ಮಾರ, ದರ್ಜಿ, ಅಡಿಗೆ ಕೆಲಸ ಮಾಡುವವರಿಗೂ ಪ್ಯಾಕೇಜ್ ಘೋಷಣೆಗೆ ಮನವಿ ಮಾಡಿದ್ದೇವೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ನುಡಿದರು.

ವಿಶೇಷ ಪ್ಯಾಕೇಜ್​ ಘೋಷಣೆಯಲ್ಲಿ ಇನ್ನೂ ಕೆಲ ವರ್ಗಕ್ಕೆ ಅವಕಾಶ ಸಿಕ್ಕಿಲ್ಲ, ಹೀಗಾಗಿ ಅಂತಹ ವರ್ಗಗಳನ್ನೂ ಗಮನಿಸಬೇಕು. ಆ ವರ್ಗಕ್ಕೂ ನೆರವು ಘೋಷಿಸಿ ಎಂದು ಬಿಜೆಪಿ ಶಾಸಕರ ನಿಯೋಗ ಸಿಎಂ ನಿವಾಸಕ್ಕೆ ಭೇಟಿ ನೀಡಿತ್ತು.

ಗ್ರಾಮ ಪಂಚಾಯತಿ ಚುನಾವಣೆಗಳು ಹತ್ತಿರ ಬರುತ್ತಿವೆ. ಲಾಕ್​ಡೌನ್ ಸಂದರ್ಭದಲ್ಲಿ ಚುನಾವಣೆ ಕಷ್ಟ. ಹೀಗಾಗಿ ಗ್ರಾ.ಪಂ, ಸೇರಿದಂತೆ ಇತರೆ ಚುನಾವಣೆ ಮುಂದೂಡಿ ಎಂದು ಚುನಾವಣೆ ಆಯೋಗಕ್ಕೆ ಎಂಎಲ್​ಸಿ ರವಿಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ.

 

Recommended For You

About the Author: user

Leave a Reply

Your email address will not be published. Required fields are marked *