‘ನಾಳೆ ಬಸ್​ ವ್ಯವಸ್ಥೆ ಅಂತ್ಯ’ – ಸಿಎಂ ಬಿಎಸ್​ ಯಡಿಯೂರಪ್ಪ

ಬೆಂಗಳೂರು: ಕಳೆದ ಒಂದೂವರೆ ತಿಂಗಳಿನಿಂದ ನಿರ್ಬಂಧ ಹೇರಲಾಗಿತ್ತು, ಅನೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಬುಧವಾರ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ದಿನಗಳ ಕೆಳಗೆ ಲಾಕ್​ಡೌನ್​ ಸಡಿಲಿಕೆ ಮಾಡಿದ್ದೇವೆ. ಆದರೆ, ಲಾಕ್​ಡೌನ್​ ನಿಂತಿದೆ ಎಂದರ್ಥ ಅಲ್ಲ, 1 ಲಕ್ಷ ಕಾರ್ಮಿಕರು ತಮ್ಮ ರಾಜ್ಯಗಳು, ಊರುಗಳಿಗೆ ಕಳಿಸಿದ್ದೇವೆ. ನಾಳೆಗೆ ಬಸ್ ವ್ಯವಸ್ಥೆ ಅಂತ್ಯವಾಗುತ್ತದೆ ಎಂದರು.

ಇನ್ನು ಕಾರ್ಮಿಕರಿಗೆ ನಾನು ಮನವಿ ಮಾಡಿದ್ದೇನೆ. ಇಲ್ಲಿ ಕಟ್ಟಡ ಕೆಲಸ ಆರಂಭವಾಗಿವೆ. ಇಲ್ಲಿಯೇ ಇದ್ದು ಕೆಲಸ ಮುಂದುವರಿಸಬಹುದು. ಎಲ್ಲ ರೀತಿಯ ಕೈಗಾರಿಕೆಗಳನ್ನ ಮರು ಆರಂಭಿಸಬೇಕು. ಹಣಕಾಸು ಇಲಾಖೆ ಜೊತೆ ಚರ್ಚೆ ಮಾಡಿದ್ದೇನೆ ಎಂದು ಸಿಎಂ ಕಾರ್ಮಿಕರಿಗೆ ಭರವಸೆ ನೀಡಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ 1,610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ. ಲಾಕ್ಡೌನ್ ಕಾರಣ ದೇವಸ್ಥಾನ ಮುಚ್ಚಿದ್ದವು. ಹೀಗಾಗಿ ಬೆಳೆದ 11,687 ಹೆಕ್ಟೇರ್ ಭೂಮಿಯಲ್ಲಿ ಬೆಳೆದಿದ್ದ ಹೂವು ನಷ್ಟವಾಗಿದೆ. ಹೀಗಾಗಿ ಒಂದು ಹೆಕ್ಟೇರ್​ಗೆ 25 ಸಾವಿರ ರೂ.ಗಳ ಪರಿಹಾರ ಕೊಡುತ್ತೇವೆ ಎಂದರು.

ತರಕಾರಿ ಮತ್ತು ಹಣ್ಣು ಇಳುವರಿ ಉತ್ತಮವಾಗಿತ್ತು. ಆದರೆ, ಲಾಕ್​ಡೌನ್​ ಕಾರಣ ತರಕಾರಿ ಹಣ್ಣಿಗೆ ದರ ಸಿಗಲಿಲ್ಲ, ಹಣ್ಣು ಬೆಳೆಗಾರರಿಗೆ ಕೂಡ ಪ್ಯಾಕೇಜ್ ಘೋಷಣೆ ಮಾಡುತ್ತೇವೆ. ರೈತರು ಮಾತ್ರವಲ್ಲ ಅಗಸರು, ಕ್ಷೌರಿಕರು ಆದಾಯ ಕಳೆದುಕೊಂಡಿದ್ದಾರೆ. 60 ಸಾವಿರ ಅಗಸರು ಹಾಗೂ 2.30 ಲಕ್ಷ ಕ್ಷೌರಿಕರಿಗೆ 5 ಸಾವಿರ ರೂ.ಗಳು ಪರಿಹಾರ. ಆಟೋ ಚಾಲಕರಿಗೂ 5 ಸಾವಿರ ಪರಿಹಾರ. ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ವಿದ್ಯುತ್ ಬಿಲ್​ನಲ್ಲಿ ಎರಡು ತಿಂಗಳ ಮಿನಿಮಮ್ ಮನ್ನಾ ಆಗಲಿದೆ ಎಂದು ಅವರು ತಿಳಿಸಿದರು.

ಬೃಹತ್ ಕೈಗಾರಿಕೆಗಳಿಗೆ ನಿಗದಿತ ವಿದ್ಯುತ್ ಬಿಲ್ ಕಟ್ಟಲು ಕಾಲವಕಾಶ ನೀಡಲಾಗುತ್ತದೆ. ವಿದ್ಯುತ್ ಬಿಲ್ ಮೇಲಿನ ಬಡ್ಡಿಯನ್ನು ಕಡಿಮೆ ಮಾಡುತ್ತೇವೆ. ಕಂದಾಯ ಬಾಕಿ ಕಟ್ಟಲು ಮೂರು ತಿಂಗಳ ಅವಕಾಶವಿರುತ್ತದೆ. ಮನೆ ಕಂದಾಯ ಪಾವತಿ ಮಾಡದಿದ್ದರೂ ವಿದ್ಯುತ್ ಕಡಿತ ಇಲ್ಲ, ನೇಕಾರರಿಗೆ 1 ಲಕ್ಷ ರೂ.ಗಳ ಒಳಗಿನ ಸಾಲ ಪಾವತಿ ಮಾಡಿದ್ದರೆ ಅದನ್ನು ಅವರಿಗೆ ವಾಪಸ್ ಮಾಡಲಾಗುವುದು. ನೇಕಾರ್ ಸಮ್ಮಾನ್ ಯೋಜನೆಯಡಿ 54 ಸಾವಿರ ನೇಕಾರರಿಗೆ ಪ್ರತಿ ವರ್ಷ 2 ಸಾವಿರ ರೂ.ಗಳ ಪರಿಹಾರ ಘೋಷಣೆ ಎಂದು ಸಿಎಂ ತಿಳಿಸಿದರು.

ವಲಸೆ ಹೋಗುವುದನ್ನು ತಡೆಯಲು ನಿರ್ಧಾರ ಮಾಡಲಾಗಿದ್ದು, ಕಟ್ಟಡ ಕಾರ್ಮಿಕರಿಗೆ 5 ಸಾವಿರ ರೂ.ನೀಡಲಾಗುತ್ತದೆ. ಇದರಿಂದ ಕಾರ್ಮಿಕರು ಹೋಗುವುದನ್ನು ತಡೆಯಬಹುದು. ಕೊರೊನಾ ಇನ್ನೂ ನಿರ್ಮೂಲನೆ ಆಗಿಲ್ಲ, ಹೀಗಾಗಿ ಯಾರೂ ಕೂಡ ನಿಯಮ ಮೀರಬಾರದು. ಮುನ್ನೆಚ್ಚರಿಕೆ ವಹಿಸಿ ಕೆಲಸ ಮಾಡಬೇಕು. ಒಂದು ಕಡೆ ಕೋವಿಡ್ ವಿರುದ್ಧದ ಹೋರಾಟ, ಇನ್ನೊಂದು ಕಡೆ ಆರ್ಥಿಕ ಪುನಶ್ಚೇತನದ ಜವಾಬ್ದಾರಿವಿದೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

 

Recommended For You

About the Author: user

Leave a Reply

Your email address will not be published. Required fields are marked *