ಸಿಎಂ ಬಿಎಸ್​ವೈ ಪ್ಯಾಕೇಜ್​ ಘೋಷಣೆ ಸಿದ್ದರಾಮಯ್ಯಗೆ ಸಮಾಧಾನ ತಂದಿಲ್ವಾ?

ಆನೇಕಲ್: ಲಕ್ಷಾಂತರ ರೂಪಾಯಿ ಖರ್ಚು ರೈತರು ಹೂಗಳನ್ನು ಬೆಳೆದಿದ್ದಾರೆ. ಜರ್ಬೇರಾ ಹೂ ಬೆಲೆಗೆ ಸಾಕಷ್ಟು ಹಣ ಬೇಕಾಗತ್ತೆ, ಸರ್ಕಾರ ಇದೀಗ ಒಂದು ಎಕ್ಟೇರ್​ಗೆ 25 ಸಾವಿರ ಕೊಡುವುದಾಗಿ ಹೇಳಿದೆ. ಆದರೆ, ಒಂದು ಎಕರೆ ಹೂ ಬೆಳೆಯುವುದಕ್ಕೆ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗತ್ತೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.

ಆನೇಕಲ್​ನಲ್ಲಿ ರೈತರ ಹೂವಿನ ತೋಟಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಒಂದು ಎಕ್ಟೇರ್ ಅಂದರೆ ಅದು ಎರಡುವರೆ ಎಕರೆಗೆ ಸಮ. ಸರ್ಕಾರದ ದೃಷ್ಟಿಯಲ್ಲಿ ಒಂದು ಎಕರೆಗೆ ಹತ್ತು ಸಾವಿರ ಬೀಳಲಿದೆ. ಇದರಿಂದ ಸಾಕಷ್ಟು ನಷ್ಟವಾಗಲಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.

ಇನ್ನು ಈ ಹೂವು ಒಂದು ಹೂವಿಗೆ ಹತ್ತು ರೂಪಾಯಿ ಬೀಳಲಿದೆ. ಹತ್ತು ಹೂವುಗಳಾದರೆ ಅದಕ್ಕೆ ನೂರು ರೂಪಾಯಿ ಬೀಳಲಿದೆ. ಇದೀಗ ಯಾರು ಕೊಳ್ಳುವವರಿಲ್ಲ, ಸರ್ಕಾರ ಹೂವಿನ ಬೆಳೆಗಾರರಿಗೆ ಮಾತ್ರ ನೆರವಿಗೆ ಬಂದಿದೆ. ಆದರೆ, ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವ ರೈತರ ನೆರವಿಗು ಬರಬೇಕು ಎಂದು ಅವರು ತಿಳಿಸಿದರು.

ಇನ್ನು ಈ ಬೆಳೆ ಬೆಳೆಯಲು ಒಂದು ಎಕರೆಗೆ ಐವತ್ತು ಲಕ್ಷ ಖರ್ಚಾಗತ್ತೆ. ಹೊಸದಾಗಿ ಹಾಕಬೇಕಾದರೆ. ಪಾಲಿ ಹೌಸ್ ಎಲ್ಲಾ ಸೇರಿ ಲಕ್ಷಾಂತರ ಆಗಲಿದೆ. ಸ‘ಸರ್ಕಾರ ನೀಡುತ್ತಿರುವ ಈ ಹಣಕ್ಕೆ ಒಂದು ಕೋಟ ಔಷಧಿ ಹೊಡೆಯೋದು ಕಷ್ಟ. ಆದರಿಂದ ನಷ್ಟ ಎಷ್ಟಾಗಿದೆ ಅಂತ ಸರ್ವೇ ಮಾಡಬೇಕಿದೆ. ನಷ್ಟ ಆದವರಿಗೆ 50 ಪರ್ಸೆಂಟ್ ಆದರು ನೆರವು ನೀಡಬೇಕಿದೆ. ಇಲ್ದೆ ಹೋದರೆ ಇನ್ವೆಸ್ಟ್ ಮಾಡಿರೋರು ಸಾಲ ಕಟ್ಟೋದಕ್ಕೂ ಕಷ್ಟ ಎಂದು ಅವರು ರೈತರಿಗೆ ಆಗುವ ಕಷ್ಟಗಳ ಬಗ್ಗೆ ವಿವರಿಸಿದರು.

ಅಂತೆಯೇ, ಡಿ.ಕೆ ಸುರೇಶ್ ರೈತರ ತರಕಾರಿ ಕೊಳ್ಳಲು ಪ್ರಾರಂಭ ಮಾಡಿದೆ. ಎಲ್ಲಾ ರೈತರ ತರಕಾರಿ ಅವರೇ ಕೊಳ್ಳಲು ಆಗಲ್ಲ, ಹೀಗಾಗಿ ಬೇರೆಯವರು ಇದರಿಂದ ಒಳ್ಳೆಯದನ್ನು ಮಾಡಿ ಅವರು ಸರ ರೈತರಿಗೆ ನೆರವು ಮಾಡಿಲಿ ಎಂಬುದು ಇದರ ಉದ್ದೇಶ. ಹಣ್ಣು ತರಕಾರಿಯನ್ನು ಸರ್ಕಾರವೇ ನೇರವಾಗಿ ಕೊಂಡುಕೊಳ್ಳಬೇಕು. ಮಾರುಕಟ್ಟೆಗೆ ನೀಡಬೇಕು, ಟ್ರಾನ್ಸ್ಪೇರ್ಟ್ ವ್ಯವಸ್ಥೆ ಮಾಡಬೇಕು. ಇದನೆಲ್ಲ ಹೇಳಿದ್ವಿ ಆದರೆ ಅದನ್ನು ಯಾರು ಮಾಡ್ತಿಲ್ಲ ಎಂದರು.

ಸರ್ಕಾದ ಕೊರೊನಾ ಪ್ಯಾಕೇಜ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾದ ಪ್ಯಾಕೇಜ್ ಬೇರೆಯವರಿಗು ನೀಡಬೇಕು. ಕೆಲವರಿಗೆ ಸೀಮಿತ ಮಾಡೋದು ಸರಿಯಲ್ಲ, ವ್ಯಾಪಾರ ಮಾಡುವವರಿಗೆ, ನೇಕಾರರಿಗೆ, ಕಾರ್ಮಿಕರಿಗೆ, ಕಮ್ಮಾರರಿಗೆ, ಜಮ್ಮಾರರು, ಬಡಗಿಗಳು, ಇವರೆಲ್ಲಾರಿಗೂ ನೀಡಬೇಕು. ಅವರು ಲೀಸ್ಟ್​​ನಲ್ಲಿ ಇರವವರಿಗೂ ಕೊಡ್ಳಿ ಸಂತೋಷ. ನಾವು ಹತ್ತು ಸಾವಿರ ಕೊಡುವುದಕ್ಕೆ ಹೇಳಿದ್ವಿ. ಅವರು ಐದು ಸಾವಿರಕ್ಕೆ ಹೇಳಿದ್ದಾರೆ. ಅದು ಮಡಿವಾಳರಿಗೆ ಮತ್ತು ಶೌರ್ರಿಕರಿಗೆ, ಐದು ಸಾವಿರ ಹೇಳಿದ್ದಾರೆ. ಸರ್ಕಾರ ರೈತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *