‘ನಾನು ಭಿಕ್ಷೆ ಎತ್ತಿ ಜನರನ್ನು ಅವರ ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ’ – ಡಿಕೆಶಿ

ಬೆಂಗಳೂರು: ಸರ್ಕಾರಕ್ಕೆ ಕೆಲಸ ಮಾಡಲು ಬರುತ್ತಿಲ್ಲ, ಬಸ್ ಈಗ 5 ಗಂಟೆಯಿಂದ ಕ್ಯಾನ್ಸಲ್ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶನಿವಾರ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಈಗಾಗಲೇ ಪಿಜಿ ಹಾಸ್ಟೆಲ್ ಖಾಲಿ ಮಾಡಿ ಬಂದಿದ್ದಾರೆ. ನಮ್ಮ ರಾಜ್ಯದಲ್ಲಿ 26 ಸಂಸದರು ಇದ್ದಾರೆ. ಬೇರೆ ರಾಜ್ಯಗಳಲ್ಲಿ ಫ್ರೀ ರೈಲು ವ್ಯವಸ್ಥೆ ಮಾಡಿದ್ದಾರೆ. ಉಚಿತವಾಗಿ ಜನರನ್ನು ಕಳುಹಿಸಲು ಸರ್ಕಾರದಿಂದ ಸಾಧ್ಯವಿಲ್ವಾ ಮುಖ್ಯಮಂತ್ರಿಗಳೇ(?) ನಿಮ್ಮ ಕೈಯಲ್ಲಿ ಆಗಲಿಲ್ಲ ಅಂದ್ರೆ ಹೇಳಿ(!) ನಾನು ಭಿಕ್ಷೆ ಎತ್ತಿ ಜನರನ್ನು ಅವರ ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಅವರು ರಾಜ್ಯ ಸರ್ಕಾರಕ್ಕೆ ತಿಳಿಸಿದರು.

ಇನ್ನು ದಯವಿಟ್ಟು ನಾನು ಸಾರಿಗೆ ಸಚಿವರಲ್ಲಿ ಮನವಿ ಮಾಡುತ್ತೇನೆ. ಎಷ್ಟು ಹಣ ಕಟ್ಟಬೇಕು ಹೇಳಿ(?) ಕೆಪಿಸಿಸಿಯಿಂದ ಹಣ ಪಾವತಿ ಮಾಡುತ್ತೇವೆ. ನಮಗೆ ಜನ ದುಡ್ಡು ಕೊಟ್ಟಿದ್ದಾರೆ. ಇಲ್ಲಿ ಬಂದಿರುವ ಜನರಿಗೆ ಊಟ ತಿಂಡಿ ಇಲ್ಲ, ಬೇರೆ ಯಾರು ಮಂತ್ರಿಗಳು ಇಲ್ವಾ(?) ಇಲ್ಲಿಗೆ ಬಂದು ಅವರ ಸಾಂತ್ವನ ಕೇಳಿ(!) ನಗರದ ಬೇರೆ ಬೇರೆ ಭಾಗಗಳಿಂದ ಜನರು ಇಲ್ಲಿಗೆ ನಡೆದುಕೊಂಡು ಬಂದಿದ್ದಾರೆ ಎಂದು ಸರ್ಕಾರದ ಕಾಲುಳೆದಿದ್ದಾರೆ.

ಸದ್ಯ ಇಡೀ ಪೊಲೀಸ್ ವ್ಯವಸ್ಥೆ ಹೆಣ್ಣು ಮಕ್ಕಳಿಗೆ ಕಾವಲು ಕಾಯಬೇಕು. ಸಂಘ ಸಂಸ್ಥೆಗಳು ಬಸ್ ನಿಲ್ದಾಣಕ್ಕೆ ಬಂದು ಇಲ್ಲಿನ ಜನಕ್ಕೆ ಊಟ ವಿತರಣೆ ಮಾಡಬೇಕು. ಸರ್ಕಾರ ಯಾವುದೇ ತರ ಪ್ಲ್ಯಾನಿಂಗ್​ ಇಲ್ಲ, ನನಗೆ ಸಾಕಷ್ಟು ಪೋನ್ ಕರೆಗಳು ಬರ್ತಾ ಇವೆ. ಅವರಾರು ಇಲ್ಲಿಂದ ವಾಪಸ್ ಹೋಗ್ತಾ ಇಲ್ಲ ಎಂದು ಹೇಳಿದರು.

ಅಷ್ಟೇ ಅಲ್ಲದೆ, ಬಾರ್ ಓಪನ್ ನಿಧಾನವಾಗಿ ಮಾಡಿ, ಮೊದಲು ಇವರ ಕಷ್ಟಗಳನ್ನ ಕೇಳಿ. ಸರ್ಕಾರ ಯಾವ ರೀತಿ ನಿರ್ವಹಣೆ ಮಾಡಬೇಕೆಂದು ಅನುಭವ ಇಲ್ಲ, ಬಸ್ ಯಾವ ರೀತಿ ಮಾಡಬೇಕೆಂದು ತಿಳಿದಿಲ್ಲ, ಹಾಸ್ಟೇಲ್ ಪಿಜಿ, ವೆಕೆಟ್ ಮಾಡಿ ಬಂದಿರುವುದಾಗಿ ಹೆಣ್ಣು ಮಕ್ಕಳು ಅಳಲು ತೋಡಿಕೊಳ್ತಿದ್ದಾರೆ. ಆದರೆ, 30 ಜನ ಪ್ರಯಾಣಿಕರು ಮಾತ್ರ ತೆರಳಿ ಅಂತ ಹೇಳ್ತಿದ್ದಾರೆ. ನಮ್ಮಲ್ಲಿ ರೈಲ್ವೆ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿಲ್ಲ, ವಿವಿಧ ರಾಜ್ಯಗಳಿಂದ ಉಚಿತವಾಗಿ ಪ್ರಯಾಣಿಕರಿಗೆ ತೆರಳಲು ವ್ಯವಸ್ಥೆ ಮಾಡಿಕೊಡ್ತಿದ್ದಾರೆ ಎಂದರು.

ಇತರೆ ರಾಜ್ಯಗಳಲ್ಲಿ ಶ್ರಮಿಕ ರೈಲ್ವೆ ವ್ಯವಸ್ಥೆ ಇದೆ. ಇಂತಹ ಸಂದರ್ಭದಲ್ಲಿ ಹಣ ಪಡೆದು ಪ್ರಯಾಣಕ್ಕೆ ಹಣ ವಸೂಲಿ ಮಾಡ್ತಿದ್ದೀರಾ(?) ನಾನು ಕೆಪಿಸಿಸಿ ವತಿಯಿಂದ ಜನರ ಪ್ರಯಾಣಕ್ಕೆ ಹಣ ಹೊಂದಿಸುತ್ತೇನೆ, ದಯ ಮಾಡಿ ಹೇಳಿ ಎಂದು ಡಿ.ಕೆ ಶಿವಕುಮಾರ್ ಅವರು ಸಿಎಂ ಬಿಎಸ್​ವೈ ಅವರಿಗೆ ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ಕೈ ಮುಗಿದು ಸಂಘ ಸಂಸ್ಥೆಗಳ ಜನರಲ್ಲಿ ವಿನಂತಿಸುತ್ತಿದ್ದೇನೆ. ದಯಮಾಡಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನೆರೆದಿರುವ ಜನರಿಗೆ ಆಹಾರ ವ್ಯವಸ್ಥೆ ಮಾಡಿಕೊಡಿ. ನಾನು ಆಹಾರ ಕಲ್ಪಿಸುವ ವ್ಯವಸ್ಥೆ ಮಾಡಲಿದ್ದೇನೆ. ಸದ್ಯ ಮುಖ್ಯಮಂತ್ರಿಗಳು ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಜನರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ ಎಂದು ಡಿಕೆಶಿ ಅವರು ಸಿಎಂ ಮತ್ತು ರಾಜ್ಯ ಸರ್ಕಾರದ ಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಕಾರ್ಮಿಕರನ್ನು ಅವರ ಮನೆಗೆ ಕಳಿಸುವ ವ್ಯವಸ್ಥೆ ಮಾಡಿ, ಈ ಕೂಡಲೇ 100 ಬಸ್​ಗಳ ವ್ಯವಸ್ಥೆ ಮಾಡಿ. ಆ ಹಣವನ್ನು ನಾನು ನೀಡುತ್ತೇನೆ. ಅದಕ್ಕೆ ತಗುಲುವ ವೆಚ್ಚವನ್ನು ನಾನು ಚೆಕ್ ಮೂಲಕ ನೀಡುತ್ತೇನೆ ಎಂದು ಡಿಕೆಶಿ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *