Top

ಲಾಕ್‌ಡೌನ್ ರೆಸಿಪಿ: ಟೀ ಟೈಮ್ ಸ್ನ್ಯಾಕ್ಸ್ ಮಸಾಲಾ ಚಿವ್ಡಾ..

ಲಾಕ್‌ಡೌನ್ ರೆಸಿಪಿ: ಟೀ ಟೈಮ್ ಸ್ನ್ಯಾಕ್ಸ್ ಮಸಾಲಾ ಚಿವ್ಡಾ..
X

ಸಂಜೆ ಟೈಮಲ್ಲಿ ಥಟ್ ಅಂತಾ ಏನಾದ್ರೂ ಮಾಡ್ಕೊಂಡ್ ತಿನ್ಬೇಕು ಅನ್ನಿಸಿದಾಗ, ಪಿಕ್‌ನಿಕ್ ಹೋಗುವಾಗ, ಬೆಳಿಗ್ಗೆ ಉಪ್ಪಿಟ್ಟು- ಅವಲಕ್ಕಿ ಜೊತೆ ಖಾರ ಖಾರವಾಗಿ ಏನಾದ್ರು ತಿನ್ಬೇಕು ಅನ್ನಿಸಿದಾಗ ಈ ಮಸಾಲಾ ಅವಲಕ್ಕಿ ಮಾಡಿ ಸವಿಯಿರಿ.

ಒಂದು ಕಪ್ ಅವಲಕ್ಕಿ, ಒಂದು ಕಪ್ ಹುರಿದುಕೊಂಡ ಶೇಂಗಾ ಮತ್ತು ಹುರಿಗಡಲೆ, 4 ಸ್ಪೂನ್ ಎಣ್ಣೆ, 10ರಿಂದ 15 ಎಸಳು ಕರೀಬೇವು, ಒಂದು ಸ್ಪೂನ್ ಖಾರದ ಪುಡಿ ಬಳಸಿ, 10ರಿಂದ 15 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಒಣ ಕೊಬ್ಬರಿ ತುರಿ, ಚಿಟಿಕೆ ಸಕ್ಕರೆಪುಡಿ, ಚಿಟಿಕೆ ಖಾರದ ಪುಡಿ, ಚಿಟಿಕೆ ಅರಿಷಿನ, ಚಿಟಿಕೆ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪಿನ ಮಿಶ್ರಣ.

ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಕರಿಬೇವು, ಬೆಳ್ಳುಳ್ಳಿ ಹಾಕಿ ಹುರಿಯಿರಿ, ಬೆಳ್ಳುಳ್ಳಿ ಕೊಂಚ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಶೇಂಗಾ, ಹುರಿಗಡಲೆ, ಒಣ ಕೊಬ್ಬರಿ ತುರಿ, ಹಾಕಿ ಮತ್ತೆ ಕೊಂಚ ಹುರಿಯಿರಿ.

ಈಗ ಸಕ್ಕರೆಪುಡಿ, ಖಾರದ ಪುಡಿ, ಅರಿಷಿನ, ಜೀರಿಗೆ, ಉಪ್ಪಿನ ಮಿಶ್ರಣ ಹಾಕಿ ಕೊಂಚ ಹುರಿದು ಅವಲಕ್ಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, 5 ನಿಮಿಷ ಹುರಿದರೆ ಮಸಾಲೆ ಅವಲಕ್ಕಿ ರೆಡಿ.

Next Story

RELATED STORIES