ಆಡಳಿತ ಯಂತ್ರ ಚುರುಕುಗೊಳಿಸಲು ಉನ್ನತ ಮಟ್ಟದ ಅಧಿಕಾರಿಗಳ ಸಭೆ

ತುರ್ತು ಸಭೆ
ಕೋವಿಡ್ 19 ರ ನಂತರ ಅಭಿವೃದ್ಧಿ ಕಾರ್ಯಗಳು ಗತಿ ಕಳಿದುಕೊಂಡಿರುವುದನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಯಂತ್ರ ಚುರುಕುಗೊಳಿಸಲು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಯಿತು

ಸಭೆಯ ಮುಖ್ಯಾಂಶಗಳು

ರೈತರು ಬೆಳೆದ ತರಕಾರಿಗಳು ಕೋವಿಡ್ನಿಂದಾಗಿ ಬೆಲೆ‌ ಕಳೆದುಕೊಂಡಿದ್ದು ಅದನ್ನು ನಾವೇ ಕೊಂಡುಕೊಂಡು ಕೋಲ್ಟ್ ಸ್ಟೋರೇಜ್ ನಲ್ಲಿ ಇಟ್ಟು ತದ‌ನಂತರ‌ ಮಾರಾಟ ಮಾಡುವಂತೆ ಸೂಚನೆ

ಹೆಚ್ಚುದಿನ‌ ಇಡೋದಕ್ಕೆ‌ ಸಾದ್ಯವಾಗದ ತರಕಾರಿಗಳು ಹಣ್ಣುಗಳು ಸೇರಿದಂತೆ ರೈತರು‌ ಬೆಳೆಯುವ ಬೆಳೆಗಳನ್ನು ಇತರೆ ರಾಜ್ಯಗಳಿಗೆ ಮತ್ತು ಹೊರದೇಶಗಳಿಗೆ ಕಳುಹಿಸಿ‌ ಮಾರಾಟ‌‌ ಮಾಡುವಂತೆ ಸೂಚನೆ‌‌ ನೀಡಿಲಾಯಿತು

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎಲ್ಲೆಲ್ಲಿ ನೀರಿನ ಅಭಾವವಿದೆಯೋ ಅಲ್ಲೆಲ್ಲ ತುರ್ತಾಗಿ ನೀರಿನ‌ ಸರಬರಾಜು ಮಾಡುವಂತೆ ಸೂಚನೆ‌ ನೀಡಲಾಯಿತು

ಅದರಲ್ಲೂ ಕೋವಿಡ್ ಭೀತಿ ಇರುವುದರಿಂದ ಗುಣಮಟ್ಟದ ನೀರನ್ನು ಸರಬರಾಜು ಮಾಡುವಂತೆ ಸೂಚನೆ‌ ನೀಡಲಾಯಿತು.

ಕೋವಿಡ್ ಬಗ್ಗೆ ಗ್ರಾಮ ಮಟ್ಟದಲ್ಲಿ ಟಾಸ್ಟ್ ಪೋರ್ಸ್ ರಚನೆ‌ ಮಾಡಲಾಗಿದ್ದು ಅದನ್ನು ಇನ್ನಷ್ಟು ಚುರುಕುಗೊಳಿಸಲು ಸೂಚನೆ‌ ನೀಡಲಾಯಿತು.

ಮಾನ್ಯ ಮುಖ್ಯಮಂತ್ರಿ ಗಳು ಕೇಂದ್ರ ಸಚಿವರಾದ ಸದಾನಂದಗೌಡ ರಿಗೆ ಕರೆ‌ಮಾಡಿ ಗೊಬ್ಬರಕ್ಕೆ ಸಂಬಂಧಿಸಿದಂತೆ ಮಾಹಿತಿ‌ ಪಡೆದರು

ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ‌‌ ಕಡಿಮೆ‌ ಇರೋದರಿಂದ ಇರುವ ಬೆಲೆಗಿಂತ ರೈತರಿಗೆ ಕಡಿಮೆ ಬೆಲೆಗೆ ಗೊಬ್ಬರು ಮಾರಾಟ ಮಾಡಲಾಗುವುದು ಅನ್ನೋದನ್ನ ಕೇಂದ್ರ ಸಚಿವರು ಮನದಟ್ಟು‌ ಮಾಡಿದರು ಇದನ್ನು ರೈತರಿಗೆ ಮನವರಿಕೆ ಮಾಡಿ ಆತಂಕ ದೂರು ಮಾಡಲು ಸೂಚನೆ‌ ನೀಡಲಾಯಿತು

ನಗರಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಸರ್ಕಾರಿ‌ ಜಾಗವನ್ನು ಲೀಸ್ ಗೆ ಪಡೆದು ಇದುವರೆಗು ಕೆಲಸ ಶುರು‌ ಮಾಡದೆ ಲೀಸ್ ಕಂಡಿಷನ್ ಉಲ್ಲಂಘನೆ‌ ಮಾಡಿದ ಜಾಗಗಳನ್ನು ಸರ್ಕಾರಕ್ಕೆ ವಾಪಸ್ ಪಡೆಯಲು ಸೂಚನೆ‌ ನೀಡಲಾಯಿತು

ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಡ್ಯಾಮ್ ಗಳಲ್ಲಿ ಹೆಚ್ಚು ನೀರು‌ ಸಂಗ್ರಹವಾಗಿದ್ದಾರೆ ಅದನ್ನು ರೈತರ ಬೆಳೆಗಳಿಗೆ‌‌ ಮತ್ತು‌ ಕುಡಿಯುವ ನೀರಿಗೆ ಹರಿಸಲು ಸೂಚನೆ‌ ನೀಡಲಾಯಿತು

ಕಳೆದ ವರ್ಷ ಆದ ಅನಾಹುತ ಮತ್ತೆ‌‌ ಮರುಕಳಿಸದಂತೆ ಡ್ಯಾಮ್ ಗಳಲ್ಲಿ ಪ್ರತಿನಿತ್ಯ ಲಭ್ಯವಿರುವ ನೀರಿನ‌ ಮಾಹಿತಿಯನ್ನು‌ ಪಡೆಯಲು ಸೂಚನೆ ನೀಡಲಾಯಿತು

ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೋವಿಡ್ ನಿಂದಾಗಿ ಅಂತರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಾಗೋದರಿಂದ ದೇಶಿಯ ಪ್ರವಾಸಿಗರನ್ನು ಆಕರ್ಷಣೆ‌ ಮಾಡುವತ್ತ ಗಮನ ಹರಿಸಲು ಸೂಚನೆ ನೀಡಲಾಯಿತು

ಇದರ ಜೊತೆಗೆ ಅಲ್ಲಿ ಕೋವಿಡ್ ಇಲ್ಲ ಅನ್ನೋದನ್ನು‌ ಪ್ರವಾಸಿಗರಿಗೆ‌ ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು ಅಂತ ಸೂಚನೆ‌ ನೀಡಲಾಯಿತು

ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಆನ್ ಲೈನ್ ತರಭೇತಿ ನೀಡಲು ಸೂಚನೆ‌ ನೀಡಲಾಯಿತು

ದೂರದರ್ಶನದ ಮೂಲಕ ಮಕ್ಕಳಿಗೆ ಪಾಠ ಸೇರಿದಂತೆ ಇತರೆ ಚಟುವಟಿಕೆ ಗಳನ್ನು ಶಾಲೆ ತೆರೆಯುವವರೆಗು ಮಕ್ಕಳಿಗೆ ನೀಡಲು ಸೂಚನೆ‌ ನೀಡಲಾಯಿತು

ಸಾರಿಗೆ ಇಲಾಖೆಯಲ್ಲಿ‌ ಕೋವಿಡ್ ನಿಂದ ಬಸ್ ಸಂಚಾರ ಕಡಿಮೆ ಇರುವುದರಿಂದ ಕೆಎಸ್ ಅರ್ಟಿಸಿ ನೂರಾರು ಕೋಟಿ ನಷ್ಟ ದಲ್ಲಿದೆ . ಹಾಗಾಗಿ ಬಸ್ ಗಳನ್ನ ಗೂಡ್ಸ್ ಸಾರಿಗೆಯಾಗಿ ಬಳಸಿಕೊಂಡು ಅದರ ಮೂಲಕ ಆದಾಯ ಪಡೆಯಲು ಸೂಚನೆ ನೀಡಲಾಯಿತು

ಖಾಸಿಗಿ‌ ಕಂಪನಿಗಳಿಗೆ ಬಸ್ ಗಳನ್ನು ಗುತ್ತಿಗೆ ಆದಾರದ ಮೇಲೆ ನೀಡಲು ತೀರ್ಮಾನ‌ ಮಾಡಲಾಯಿತು

ಕಲ್ಯಾಣ ಕರ್ನಾಟಕ ಮತ್ತು ಇತರೆ ಅಭಿವೃದ್ಧಿ ಮಂಡಳಿಗೆಳ ಭಾಗದಲ್ಲಿ ಭಾಗದಲ್ಲಿ ತುರ್ತಾಗಿ ಆಗಬೇಕಾಗಿರೋ ಕೆಲಸ ಕಾರ್ಯಗಳನ್ನು ಮಾಡಲು ಸೂಚನೆ ನೀಡಲಾಯಿತು (ಆಸ್ಪತ್ರೆ ಶಿಕ್ಷಣ ಕುಡಿಯುವ ನೀರು ಇತರೆ)

ಕೋವಿಡ್ ಗಾಗಿ ಹಗಲಿರುಳು ದುಡಿಯುತ್ತಿರುವ ಗುತ್ತಿಗೆ ವೈದ್ಯರ ಸಂಬಳವನ್ನು ಗಣನೀಯವಾಗಿ ಹೆಚ್ವಿಸಲು ನಿರ್ಧಾರ ಮಾಡಲಾಯಿತು

4 ಗಂಟೆಗಳಿಗು ಹೆಚ್ಚು ಕಾಲ ಸಭೆ ನಡೆಸಲಾಯಿತು

Recommended For You

About the Author: user

Leave a Reply

Your email address will not be published. Required fields are marked *