ಮೃದುವಾದ, ರಸಭರಿತ ರಸಗುಲ್ಲಾ ರೆಸಿಪಿ ನಿಮಗಾಗಿ

ಬೇಕಾಗುವ ಸಾಮಗ್ರಿ: ಒಂದು ಲೀಟರ್ ಹಾಲು, 3 ಸ್ಪೂನ್ ನಿಂಬೆರಸ, ಒಂದು ಕಪ್ ಸಕ್ಕರೆ, 4 ಏಲಕ್ಕಿ ಕಾಳು, ಅಗತ್ಯಕ್ಕೆ ತಕ್ಕಷ್ಟು ನೀರು, ಒಂದು ಸ್ವಚ್ಛವಾಗಿರುವ ಚಿಕ್ಕ ಕರ್ಚೀಫ್.
ಮಾಡುವ ವಿಧಾನ: ಹಾಲು ಕಾಯಿಸಿ, ಅದಕ್ಕೆ ನಿಂಬೆರಸ ಹಾಕಿ ಹಾಲು ಒಡೆಯುವಂತೆ ಮಾಡಿ.(ನಿಂಬೆ ಬದಲು ವಿನೇಗರ್ ಬಳಸಿ. ಅಥವಾ ಹಾಲು ಒಡೆದಾಗ ರಸಗುಲ್ಲಾ ತಯಾರಿಸಿ). ಈಗ ಒಂದು ಸ್ವಚ್ಛವಾದ ಕರ್ಚಿಫ್ನಲ್ಲಿ ಒಡೆದ ಹಾಲನ್ನು ಹಾಕಿ ಸೋಸಿ, ಹಾಲಿನ ಅಂಶವನ್ನ ಕರ್ಚಿಫ್ನಲ್ಲಿ ಉಳಿಸಿ, ಕರ್ಚಿಫನ್ನು ಬಿಗಿಯಾಗಿ ಕಟ್ಟಿಡಿ. ಒಂದು ಗಂಟೆ ಬಳಿಕ ಒಡೆದ ಹಾಲಿನ ಮಿಶ್ರಣದಲ್ಲಿದ್ದ ನೀರೆಲ್ಲ ಹಿಂಡಿ ತೆಗೆದು, ಐದು ನಿಮಿಷ ಚೆನ್ನಾಗಿ ನಾದಿ. ರೆಡಿಯಾದ ಹಿಟ್ಟಿನಿಂದ ನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಡಿ.
ಈಗ ಒಂದು ಪ್ಯಾನ್ಗೆ ಸಕ್ಕರೆ, 5 ಕಪ್ ನೀರು, ಏಲಕ್ಕಿ ಕಾಳು ಹಾಕಿ ಒಂದು ಕುದಿ ಬರಿಸಿ. ನಂತರ ಹಾಲಿನ ಉಂಡೆಗಳನ್ನು ಪ್ಯಾನ್ಗೆ ಹಾಕಿ, ಪ್ಯಾನ್ ಕವರ್ ಮಾಡಿ ದೊಡ್ಡ ಉರಿಯಲ್ಲಿ 3 ನಿಮಿಷ ಕುದಿಸಿ, ನಂತರ ಮಿಡಿಯಂ ಫ್ಲೇಮ್ನಲ್ಲಿ 3 ನಿಮಿಷ ಕುದಿಸಿ, ಈಗ ಪ್ಯಾನ್ ಕವರ್ ಮಾಡದೇ, ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿ. ಅರ್ಧ ಅಥವಾ ಒಂದು ಗಂಟೆ ನಂತರ ರಸಗುಲ್ಲಾ ತಣ್ಣಗಾಗುತ್ತದೆ. ಈಗ ಫ್ರಿಜ್ನಲ್ಲಿರಿಸಿ ಚಿಲ್ ಆದ ರಸಗುಲ್ಲಾಗೆ ಕೇಸರಿ, ಪಿಸ್ತಾ, ಬದಾಮ್ ಹಾಕಿ ಸವಿಯಲು ಕೊಡಿ.