Top

ಐದು ಸಾಮಗ್ರಿ ಬಳಸಿ, ಮನೆಯಲ್ಲೇ ತಯಾರಿಸಿ ಡಾಲ್ಗೋನಾ ಕಾಫಿ

ಐದು ಸಾಮಗ್ರಿ ಬಳಸಿ, ಮನೆಯಲ್ಲೇ ತಯಾರಿಸಿ ಡಾಲ್ಗೋನಾ ಕಾಫಿ
X

ಕೊರೊನಾ ಭೀತಿಯಿಂದ ಲಾಕ್‌ಡೌನ್ ಆದ ನಂತರ ಇಂಟರ್‌ನೆಟ್‌ನಲ್ಲಿ ಒಂದು ರೆಸಿಪಿ ಸಖತ್ ವೈರಲ್ ಆಗಿತ್ತು. ತುಂಬಾ ಜನ ಈ ರೆಸಿಪಿ ಹೆಸರನ್ನ ಮೊದಲ ಬಾರಿ ಕೇಳಿದ್ದರು. ಆ ರೆಸಿಪಿನೇ ಡಾಲ್ಗೋನಾ ಕಾಫಿ.

ಐದು ವಸ್ತುಗಳನ್ನ ಬಳಸಿ, ಡಾಲ್ಗೋನಾ ಕಾಫಿ ತಯಾರಿಸಬಹುದು. ಹಾಗಾದ್ರೆ ಯಾವುದು ಆ ಐದು ವಸ್ತುಗಳು..? ಡಾಲ್ಗೋನಾ ಕಾಫಿ ಹೇಗೆ ತಯಾರಿಸುವುದು ಅನ್ನೋದನ್ನ ನೋಡೋಣ ಬನ್ನಿ.

ಬೇಕಾಗುವ ಸಾಮಗ್ರಿ: 2 ಸ್ಪೂನ್ ಇನ್‌ಸ್ಟಂಟ್ ಕಾಫಿ ಪುಡಿ, 2 ಸ್ಪೂನ್ ಸಕ್ಕರೆ, 2 ಸ್ಪೂನ್ ಬಿಸಿ ನೀರು, ಒಂದು ಕಪ್ ಹಾಲು ,3ರಿಂದ 4 ಐಸ್ ಕ್ಯೂಬ್ಸ್.

ಮಾಡುವ ವಿಧಾನ: ಒಂದು ಬೌಲ್‌ನಲ್ಲಿ ಕಾಫಿ ಪುಡಿ, ಸಕ್ಕರೆ, ಬಿಸಿ ನೀರು ಹಾಕಿ 5 ನಿಮಿಷ ಸತತವಾಗಿ ವ್ಹಿಸ್ಕ್ ಮಾಡಿ. ಹೀಗೆ ಮಾಡಿದಾಗ ಈ ಮೂರು ಮಿಶ್ರಣ ಸೇರಿ ಕ್ರೀಮ್ ಆಗಿ ಬದಲಾಗುತ್ತದೆ.

ಈಗ ಒಂದು ಕಪ್‌ಗೆ ಹಾಲು ಮತ್ತು ಐಸ್ ಕ್ಯೂಬ್ಸ್‌ ಹಾಕಿ, ರೆಡಿ ಮಾಡಿಟ್ಟುಕೊಂಡ್ ಕಾಫಿ ಕ್ರೀಮ್ ಹಾಕಿ ಸರ್ವ್ ಮಾಡಿ. ಕಾಫಿ ಕ್ರೀಮ್ ಮತ್ತು ಹಾಲನ್ನು ಮಿಕ್ಸ್ ಮಾಡಿ ಕೋಲ್ಡ್, ಕ್ರೀಮೀ ಡಾಲ್ಗೋನಾ ಕಾಫಿ ಸವಿಯಿರಿ.

Next Story

RELATED STORIES