Top

ಮನೆಯಲ್ಲೇ ಮಾಡಿ ಹೋಟೆಲ್ ಸ್ಟೈಲ್ ವೆಜ್ ಫ್ರೈಡ್ ರೈಸ್

ಮನೆಯಲ್ಲೇ ಮಾಡಿ ಹೋಟೆಲ್ ಸ್ಟೈಲ್ ವೆಜ್ ಫ್ರೈಡ್ ರೈಸ್
X

ಬೇಕಾಗುವ ಸಾಮಗ್ರಿ: ಒಂದು ಕಪ್ ಬಾಸ್ಮತಿ ಅಕ್ಕಿ, 5ರಿಂದ 6 ಕಪ್ ನೀರು, 4 ಸ್ಪೂನ್ ಎಣ್ಣೆ, ಒಂದು ಸ್ಪೂನ್ ನಿಂಬೆ ರಸ, ಚಿಕ್ಕ ತುಂಡು ಶುಂಠಿ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಖಾರ ಹೆಚ್ಚು ಬೇಕಾದಲ್ಲಿ 2 ಹಸಿಮೆಣಸು ಬಳಸಿ, ಒಂದು ಚಿಕ್ಕ ಕಪ್ ಸ್ಪ್ರಿಂಗ್ ಆನಿಯನ್, ಒಂದು ಕಪ್ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಬಟಾಣಿ ಮಿಶ್ರಣ, ಎರಡು ಸ್ಪೂನ್ ಸೊಯಾ ಸಾಸ್, ಒಂದು ಸ್ಪೂನ್ ವಿನೇಗರ್, ಅರ್ಧ ಸ್ಪೂನ್ ಪೆಪ್ಪರ್ ಪೌಡರ್, ಅಗತ್ಯವಿದ್ದಷ್ಟು ಉಪ್ಪು,

ಮಾಡುವ ವಿಧಾನ: ಬಾಸ್ಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಪಾತ್ರೆಯಲ್ಲಿ 5ರಿಂದ 6 ಕಪ್ ನೀರು ಕಾಯಲು ಇಟ್ಟು, ಅದಕ್ಕೆ ಒಂದು ಸ್ಪೂನ್ ಎಣ್ಣೆ, ಒಂದು ಸ್ಪೂನ್ ನಿಂಬೆ ರಸ, ಮತ್ತು ಅಗತ್ಯವಿದ್ದಷ್ಟು ಉಪ್ಪು ಹಾಕಿ( ಇನ್ನರ್ಧ ಭಾಗ ಉಪ್ಪನ್ನು ಮಸಾಲೆ ತಯಾರಿಸಿಕೊಳ್ಳಲು ಇರಿಸಿ) ಚೆನ್ನಾಗಿ ಕೈಯಾಡಿಸಿ, 10ರಿಂದ 15 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ನಂತರ ಸ್ಟ್ರೇನರ್ ಸಹಾಯದಿಂದ ನೀರು ಬಸೆಯಿರಿ. ನೀರು ಬಸಿದ ನಂತರ ಅದೇ ಸ್ಟ್ರೇನರ್‌ನಲ್ಲಿ ಒಂದು ಗ್ರಾಸ್ ತಣ್ಣಿರು ಹಾಕಿ, ಅನ್ನ ಬಿಡಿ ಬಿಡಿ ಮಾಡಿಕೊಳ್ಳಿ. ಈಗ ವೆಜ್ ಫ್ರೈಡ್ ರೈಸ್‌ಗೆ ಬೇಕಾಗುವ ಬಿಡಿ ಬಿಡಿ ಅನ್ನ ರೆಡಿ.

ಈಗ ಒಂದು ಪ್ಯಾನ್‌ಗೆ 3ಸ್ಪೂನ್ ಎಣ್ಣೆ ಹಾಕಿ, ಅದಕ್ಕೆ ಸಣ್ಣಗೆ ಹೆಚ್ಚಿಕೊಂಡ ಶುಂಠಿ, ಹಸಿಮೆಣಸು, ಈರುಳ್ಳಿ ಹಾಕಿ ಹುರಿಯಿರಿ. ಇದರೊಂದಿಗೆ ಸ್ಪ್ರಿಂಗ್ ಆನಿಯನ್ ಸೇರಿಸಿ ಹುರಿಯಿರಿ. ನಂತರ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಬಟಾಣಿ ಕಾಳು ಸೇರಿಸಿ 3 ನಿಮಿಷ ಹುರಿಯಿರಿ. ಆದ್ರೆ ಜಾಸ್ತಿ ಬೇಯಿಸದೆ, ಈ ತರಕಾರಿಗಳ ಕ್ರಿಸ್ಪಿನೆಸ್ ಕೆಡದಂತೆ ನೋಡಿಕೊಳ್ಳಿ.

ಇದಕ್ಕೆ ಸೊಯಾ ಸಾಸ್, ವಿನೇಗರ್ ಸೇರಿಸಿ ಒಂದು ನಿಮಿಷ ಹುರಿದು, ಮಸಾಲೆ ಮಿಶ್ರಣಕ್ಕೆ ಅಗತ್ಯವಿದ್ದಷ್ಟು ಉಪ್ಪು, ಅರ್ಧ ಸ್ಪೂನ್ ಪೆಪ್ಪರ್ ಪೌಡರ್ ಹಾಕಿ ಮಸಾಲೆ ಮಿಶ್ರಣ ಹುರಿಯಿರಿ. ಇದೀಗ ರೆಡಿ ಮಾಡಿಟ್ಟ ಅನ್ನವನ್ನ ಇದಕ್ಕೆ ಬೆರೆಸಿ 2 ನಿಮಿಷ ಹುರಿದರೆ ವೆಜ್ ಫ್ರೈಡ್ ರೈಸ್ ರೆಡಿ. ಅಗತ್ಯವಿದ್ದಲ್ಲಿ, ಕ್ರಂಚಿ ಕ್ರಂಚಿಯಾಗಿರಬೇಕು ಅನ್ನಿಸಿದಲ್ಲಿ ಮತ್ತೆ ಕೊಂಚ ಸ್ಪ್ರಿಂಗ್ ಆನಿಯನ್ ಮಿಕ್ಸ್ ಮಾಡಿಕೊಳ್ಳಿ.

ತಿಂಡಿ ಮಾಡೋಕ್ಕೆ ಅರ್ಜೆಂಟು ಅಂತಾ ಹೇಳಿ ಗ್ಯಾಸ್ ಉರಿಯನ್ನ ಹೆಚ್ಚಿಸಬೇಡಿ. ಮಂದ ಉರಿಯಲ್ಲಿ ಅಡುಗೆ ತಯಾರಿಸಿದಷ್ಟು ರುಚಿ ಹೆಚ್ಚು.

Next Story

RELATED STORIES