Top

'ಪುಷ್ಪ'ರಾಜ್ ಅಲ್ಲು ಜೊತೆ ಡಿ ಬಾಸ್, ಸುನಿಲ್ ಶೆಟ್ಟಿ..?!

ಪುಷ್ಪರಾಜ್ ಅಲ್ಲು ಜೊತೆ ಡಿ ಬಾಸ್, ಸುನಿಲ್ ಶೆಟ್ಟಿ..?!
X

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸ್ಯಾಂಡಲ್ವುಡ್ ಎಂಟ್ರಿ ಕನ್ಫರ್ಮ್​ ಆಗಿದೆ. ಪುಷ್ಪರಾಜ್ ಅವತಾರದಲ್ಲಿ ಚಂದನವನಕ್ಕೆ ಕಾಲಿಡ್ತಿರೋ ಮೆಗಾ ಹೀರೋಗೆ ನಮ್ಮ ಡಿ ಬಾಸ್ ದಚ್ಚು ಸಾಥ್ ಕೊಡ್ತಾರೆ ಎನ್ನಲಾಗುತ್ತಿದೆ. ಇಷ್ಟಕ್ಕೂ ಏನೀ ಸ್ಟೋರಿ(?) ಅಂತೆ ಕಂತೆಗಳ ಹಿಂದಿರೋ ಅಸಲಿ ಮ್ಯಾಟರ್ ಆದರೂ ಏನು ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ.

ಸತತ ಒಂದೂವರೆ ದಶಕದಿಂದ ಸೌತ್ ಸಿನಿಪ್ರಿಯರಿಗೆ ಮನರಂಜನೆ ನೀಡುತ್ತಿರೋ ಕಲಾವಿದರಲ್ಲಿ ಟಾಲಿವುಡ್​​ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಒಬ್ಬರು. ಪರಭಾಷಾ ಸಿನಿಮಾಗಳನ್ನೂ ನಮ್ಮ ಸಿನಿಮಾಗಳಂತೆಯೇ ಸ್ವೀಕರಿಸೋ ನಮ್ಮ ಕರುನಾಡಲ್ಲಿ ಅಲ್ಲು ಅರ್ಜುನ್ ಚಿತ್ರಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಈಗಾಗಲೇ 19 ಸೂಪರ್ ಹಿಟ್ ಸಿನಿಮಾಗಳಿಂದ ಸೌತ್ ಸಿನಿಪ್ರಿಯರಿಗೆ ಚಿರಪರಿಚಿತರಾಗಿರೋ ಅವರು, ಇದೀಗ 20ನೇ ಚಿತ್ರದಿಂದ ಪುಷ್ಪರಾಜ್ ಅವತಾರದಲ್ಲಿ ನ್ಯಾಷನಲ್ ಸ್ಟಾರ್ ಆಗುವುದಕ್ಕೆ ಹೊರಟಿದ್ದಾರೆ.

ಇತ್ತೀಚಿಗೆ ಅಲ್ಲು ಅರ್ಜುನ್​ರ ಬರ್ತ್ ಡೇ ಪ್ರಯುಕ್ತ ಪುಷ್ಪ ಅನ್ನೋ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿತ್ತು. ಇಷ್ಟಕ್ಕೂ ಅವರನ್ನು ಪುಷ್ಪರಾಜ್ ಆಗಿ ತೋರಿಸುವುದಕ್ಕೆ ಹೊರಟಿರುವುದು ಟಾಲಿವುಡ್​ನ ಸ್ಟಾರ್ ಡೈರೆಕ್ಟರ್ ಸುಕುಮಾರ್. ತೆಲುಗಿನ ಜೊತೆ ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲೂ ಈ ಸಿನಿಮಾವನ್ನು ಏಕಕಾಲದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಮಾಡುವ ನಿರ್ದೇಶಕರು ಪ್ಲಾನ್​ನಲ್ಲಿದ್ದಾರೆ.

'ನಾನ್ನಕು ಪ್ರೇಮತೋ' ಹಾಗೂ 'ರಂಗಸ್ಥಳಂ' ಅನ್ನೋ ಬ್ಯಾಕ್ ಟು ಬ್ಯಾಕ್ ಎರಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಸುಕುಮಾರ್ ಅವರು, ಇದೀಗ ಪುಷ್ಪ ಅನ್ನೋ ಮತ್ತೊಂದು ಹೊಸ ಎಕ್ಸ್​ಪೆರಿಮೆಂಟ್​ಗೆ ಕೈ ಹಾಕಿದ್ದಾರೆ. ಈ ಹಿಂದೆ 'ಆರ್ಯ' ಹಾಗೂ 'ಆರ್ಯ 2' ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಸುಕುಮಾರ್ - ಅಲ್ಲು ಅರ್ಜುನ್ ಜೋಡಿ ಪುಷ್ಪ ಚಿತ್ರದಿಂದ ಹ್ಯಾಟ್ರಿಕ್ ಹಿಟ್ ಹೊಡೆಯೋ ಸೂಚನೆ ಕೊಟ್ಟಿದೆ.

ಅಲ್ಲು ಅರ್ಜುನ್ ಕನ್ನಡಕ್ಕೆ ಬರ್ತಿರೋದು ಸುದ್ದಿಯಲ್ಲ ಆದರೆ ಆ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸ್ತಾರೆ ಅನ್ನೋದು ಸದ್ಯ ಟಾಕ್ ಆಫ್ ದ ಟೌನ್ ಆಗಿದ್ದು. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ದಾಸ ದರ್ಶನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ ಇದಕ್ಕೆ ಪುಷ್ಠಿ ನೀಡುವಂತೆ ಈ ಹಿಂದೆ ಸುಕುಮಾರ್ ನಮ್ಮ ದರ್ಶನ್​ರನ್ನ ಭೇಟಿ ಮಾಡಿದ್ದ ಸ್ಟಿಲ್ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

ಇದರ ಜೊತೆ ಬಾಲಿವುಡ್​ನ ಯಂಗ್ ಅಂಡ್ ಎನರ್ಜಿಟಿಕ್ ಸ್ಟಾರ್ ಸುನೀಲ್ ಶೆಟ್ಟಿ ಕೂಡ ಪುಷ್ಪ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಅನ್ನೋದು ಸದ್ಯದ ಸುದ್ದಿ. ಆದರೆ ಸುಕುಮಾರ್ ಮಾತ್ರ ಅಫಿಶಿಯಲ್ ಆಗಿ ಯಾವುದನ್ನೂ ಖಾತರಿಪಡಿಸಿಲ್ಲ. ಒಂದು ವೇಳೆ ಸುನೀಲ್ ಶೆಟ್ಟಿ ಹಾಗೂ ದರ್ಶನ್ ಬನ್ನಿ ಜೊತೆ ಒಟ್ಟೊಟ್ಟಿಗೆ ನಟಿಸಿದ್ರೆ, ಪ್ಯಾನ್ ಇಂಡಿಯಾ ಮೂವಿಗೆ ಒಂದು ಧಮ್ ಬರಲಿದ್ದು, ಬ್ಯುಸಿನೆಸ್ ಕೂಡ ನಿರೀಕ್ಷೆಯ ಮಟ್ಟ ಮೀರಲಿದೆ. ಇನ್ನು ಡಿ ಬಾಸ್ ಫ್ಯಾನ್ಸ್ ಕೂಡ ಇದು ನಿಜವಾಗಲಿ ಅನ್ನೋದನ್ನೇ ಬಯಸ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಹೆಡ್, ಟಿವಿ5

Next Story

RELATED STORIES