57,633 ವಾಹನಗಳು ಸೀಜ್, 4,123 ಮಂದಿ ಅರೆಸ್ಟ್​​​ – ಸಿಎಂ ಬಿಎಸ್​ ಯಡಿಯೂರಪ್ಪ

ಬೆಂಗಳೂರು: ಇವತ್ತಿನ ವರೆಗೆ 57,633 ವಾಹನಗಳನ್ನು ಸೀಜ್ ಮಾಡಲಾಗಿದ್ದು, 4,123 ಜನರನ್ನು ಅರೆಸ್ಟ್ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಮಂಗಳವಾರ ತಿಳಿಸಿದ್ದಾರೆ.

ನಗರದಲ್ಲಿರುವ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಮತ್ತಷ್ಟು ಬಿಗಿ ಕ್ರಮತೆಗೆದುಕೊಳ್ಳುತ್ತೇವೆ. ಇದಕ್ಕೆ ಜನರು ಸಹಕರಿಸಬೇಕು ಎಂದು ಸಿಎಂ ಬಿಎಸ್​ವೈ ಅವರು ರಾಜ್ಯದ ಜನರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ನಮ್ಮ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ದೇಶಕ್ಕೆ ಹೋಲಿಸಿದರೆ ಕಠಿಣವಾಗಿ ಪಾಲಿಸಿದ್ದೇವೆ. ಆರೋಗ್ಯ ಸೇತು ಆ್ಯಪ್ ಡೌನ್ ಮಾಡಿಮಾಡಿಕೊಳ್ಳಿ. ವಲಸೆ ಕಾರ್ಮಿಕರಿಗೆ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳುತ್ತೇವೆ. ಈಗಿರುವುದಕ್ಕಿಂತ ಮತ್ತಷ್ಟು ಕ್ರಮ ಬಿಗಿಗೊಳಿಸುತ್ತೇವೆ. ನಾವು ಮತ್ತಷ್ಟು ಕ್ರಮತೆಗೆದುಕೊಳ್ಳಲು ಕಾದಿದ್ದೆವು. ಪೂರಕವಾಗಿ ಪ್ರಧಾನಿಯವರು ಅದೇ ಸಲಹೆ ಕೊಟ್ಟಿದ್ದಾರೆ ಎಂದು ಅವರು ನುಡಿದರು.

ನಾಳೆ ಕೇಂದ್ರದಿಂದ ಗೈಡ್​ಲೈನ್ಸ್ ಬಂದ ನಂತರ ಮುಂದಿನ ನಿರ್ಧಾರ ಮಾಡಲಾಗುವುದು. ಗೈಡ್ ಲೈನ್ಸ್ ಬಂದ ನಂತರವೇ ಕ್ರಮ ತೆಗೆದುಕೊಳ್ಳಲಾಗುವುದು. ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ, ಏಪ್ರಿಲ್ 10ರೊಳಗೆ ಕಂಟ್ರೋಲ್ ಮಾಡುವಂತೆ ಪ್ರಧಾನಿ ಹೇಳಿದ್ದಾರೆ. ಅದರಂತೆಯೇ ನಾವು ಮಾಡುತ್ತಿದ್ದೇವೆ. ಮೇ 3 ರ ವರೆಗೆ ಲಾಕ್​ಡೌನ್ ವಿಸ್ತರಣೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಮಾತನಾಡಿದರು.

Recommended For You

About the Author: user

Leave a Reply

Your email address will not be published. Required fields are marked *