Top

ಪಾನೀಪುರಿಯ ಪುರಿ ಮಾಡೋದು ಹೇಗೆ ಗೊತ್ತಾ..?

ಪಾನೀಪುರಿಯ ಪುರಿ ಮಾಡೋದು ಹೇಗೆ ಗೊತ್ತಾ..?
X

ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಯುವಕ- ಯುವತಿಯರು, ಗೃಹಿಣಿಯರು ಕೂಡ ಇಷ್ಟ ಪಟ್ಟು ತಿನ್ನುವ ತಿಂಡಿ ಪಾನೀಪುರಿ. ಪಾನೀಪುರಿಗೆ ಬೇಕಾಗುವ ಮಸಾಲೆ ಹೇಗೆ ತಯಾರಿಸೋದು ಅಂತಾ ತುಂಬಾ ಕಡೆ ನೋಡಿರ್ತಿವಿ. ಆದ್ರೆ ಪಾನೀಪುರಿಯ ಪುರಿ ತಯಾರಿಸೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ.

ಬೇಕಾಗುವ ಸಾಮಗ್ರಿ: ಅರ್ಧ ಕಪ್ ದಪ್ಪ ರವಾ, ಎರಡು ಟೇಬಲ್ ಸ್ಪೂನ್ ಮೈದಾ, ಒಂದು ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಹಿಟ್ಟು ಕಲಿಸೋಕ್ಕೆ ಬೇಕಾಗುವಷ್ಟು ಬಿಸಿ ನೀರು, ಪುರಿ ಕರಿಯಲು ಬೇಕಾಗುವಷ್ಟು ಎಣ್ಣೆ.

ಮಾಡುವ ವಿಧಾನ: ದಪ್ಪ ರವಾಗೆ, ಮೈದಾ, ಉಪ್ಪು, ಬಿಸಿ ನೀರು ಹಾಕಿ ಜಾಸ್ತಿ ಸಾಫ್ಟ್ ಆಗದೇ, ಜಾಸ್ತಿ ಗಾಢವೂ ಆಗದ ಹಾಗೆ ಹಿಟ್ಟು ಕಲಿಸಿ, ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಚಪಾತಿ ಆಕಾರದಲ್ಲಿ ಲಟ್ಟಿಸಿ, ಮುಚ್ಚಳ ಅಥವಾ ಚಿಕ್ಕ ಕಟೋರಿ ಬಳಸಿ ಚಿಕ್ಕ ಚಿಕ್ಕ ಪುರಿ ತಯಾರಿಸಿಕೊಳ್ಳಿ. ಈಗ ಪುರಿಯನ್ನು ಕಾದ ಎಣ್ಣೆಯಲ್ಲಿ ಹಾಕಿ ಗೋಲ್ಡನ್ ಬ್ರೌನ್ ಆಗೋವರೆಗೂ ಕರೆಯಿರಿ.

Next Story

RELATED STORIES