Top

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ
X

ನವದೆಹಲಿ: ನಿಮ್ಮ ಮಾತನ್ನು ನಾನು ಒಪ್ಪಿಕೊಳ್ಳುತ್ತೆನೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್​ರವರೇ, ಈ ಸಮಯ ನಮ್ಮ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅಮೆರಿಕಾ-ಇಂಡಿಯಾ ಪಾಟ್ನರ್​ಶಿಪ್ ಮತ್ತಷ್ಟು ಗಟ್ಟಿಯಾಗಲಿದೆ. ಮುಂದೆಯೂ ಇದೇ ರೀತಿ ಇರಲಿದೆ. ಇಂಡಿಯಾ ಯಾವಾಗಲೂ ಮಾನವೀಯತೆಗೆ ಬೆಲೆ ನೀಡುತ್ತದೆ. ನಮ್ಮ ಆದ್ಯತೆಯೂ ಸೋಂಕಿನ ವಿರುದ್ಧ ಹೋರಾಟವಾಗಿದೆ. ನಾವು ಈ ಹೋರಾಟದಲ್ಲಿ ಜಯಗಳಿಸುವುದು ನಿಶ್ಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್​ ಮಾಡುವ ಮೂಲಕ ಅಮೆರಿಕಾ ಅಧ್ಯಕ್ಷರಿಗೆ ಬೆಂಬಲ ಸೂಚಿಸಿದ್ದಾರೆ.

ಈ ಮುಂಚೆ ಡೋನಾಲ್ಡ್​​ ಟ್ರಂಪ್​ ಅವರು ಭಾರತ ಮತ್ತು ದೇಶದ ಪ್ರಧಾನಿ ಮೋದಿ ಬಗ್ಗೆ ಟ್ವಿಟ್​ ಮಾಡಿದ್ದು, ಈ ಸಮಯದಲ್ಲಿ ಸ್ನೇಹಿತರ ನಡುವೆ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿದೆ. ಹೆಚ್​​ಸಿಕ್ಯೂ (ಹೈಡ್ರಾಕ್ಸಿಕ್ಲೋರೋಕ್ವಿನ್) ನಿರ್ಧಾರಕ್ಕಾಗಿ ಭಾರತ ಮತ್ತು ಭಾರತೀಯ ಜನರಿಗೆ ಧನ್ಯವಾದಗಳು ಇದನ್ನು ಎಂದಿಗೂ ಮರೆಯಲಾಗುವುದಿಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ಈ ಹೋರಾಟದಲ್ಲಿ ಭಾರತಕ್ಕೆ ಮಾತ್ರವಲ್ಲ, ಮಾನವೀಯತೆಗೆ ಸಹಾಯ ಮಾಡುವಲ್ಲಿ ನಿಮ್ಮ ಬಲವಾದ ನಾಯಕತ್ವದ ನಿರ್ಧಾರಕ್ಕೆ ಧನ್ಯವಾದಗಳು ಎಂದು ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

Next Story

RELATED STORIES