Top

ಮನೆಯಲ್ಲೇ ತಯಾರಿಸಿ ಟೇಸ್ಟಿ ಟೇಸ್ಟಿ ಮಂಗಳೂರು ಬನ್ಸ್..

ಮನೆಯಲ್ಲೇ ತಯಾರಿಸಿ ಟೇಸ್ಟಿ ಟೇಸ್ಟಿ ಮಂಗಳೂರು ಬನ್ಸ್..
X

ಇಡೀ ಇಂಡಿಯಾ ಲಾಕ್‌ಡೌನ್ ಆಗಿದ್ದು, ಇಂಥ ಸಮಯದಲ್ಲಿ ರುಚಿ ರುಚಿ ತಿಂಡಿಯನ್ನ ನೀವು ಮಿಸ್ ಮಾಡಿಕೊಳ್ಳುತ್ತಿರಬಹುದು. ಈ ಕಾರಣಕ್ಕೆ ನಾವಿವತ್ತು ಟೇಸ್ಟಿ ಮಂಗಳೂರು ಬನ್ಸ್‌ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡ್ತೀವಿ. ಇಷ್ಟಾ ಆದ್ರೆ ನೀವೂ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ತಿನ್ನಿ.

ಮಂಗಳೂರು ಬನ್ಸ್ ಮಾಡಲು ಬೇಕಾಗುವ ಸಾಮಗ್ರಿ

ಒಂದು ಬಟ್ಟಲು ಗೋದಿಹಿಟ್ಟು, ಒಂದು ಬಾಳೆಹಣ್ಣು, ಮೂರರಿಂದ ನಾಲ್ಕು ಸ್ಪೂನ್ ಮೊಸರು, ಒಂದು ಸ್ಪೂನ್ ಜೀರಿಗೆ, 2ರಿಂದ 3 ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಬನ್ಸ್‌ ತಯಾರಿಸುವ 6ರಿಂದ 7 ಗಂಟೆ ಮುನ್ನ ಬನ್ಸ್‌ ಹಿಟ್ಟು ರೆಡಿ ಮಾಡಿಕೊಳ್ಳಬೇಕು. ಬಾಳೆಹಣ್ಣನ್ನ ಮಿಕ್ಸಿ ಜಾರ್‌ಗೆ ಹಾಕಿ ಜೊತೆಗೆ ಮೊಸರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಗೋದಿ ಹಿಟ್ಟು, ಉಪ್ಪು, ಸಕ್ಕರೆ, ಜೀರಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಮೊಸರು ಮತ್ತು ಬಾಳೆಹಣ್ಣಿನ ಪೇಸ್ಟ್ ಸೇರಿಸಿ, ಅವಶ್ಯಕತೆ ಇದ್ದಲ್ಲಿ ಸೋಡಾ ಬಳಸಬಹುದು. ಇದಕ್ಕೆ ಸ್ವಲ್ಪ, ಸ್ವಲ್ಪ ನೀರು ಚುಮುಕಿಸ್ತಾ ಹಿಟ್ಟು ಕಲಿಸಿ. ಸ್ವಲ್ಪ ಎಣ್ಣೆ ಹಾಕಿ ನಾದಿದರೆ ಬನ್ಸ್‌ ಹಿಟ್ಟು ರೆಡಿ. ಇದನ್ನ 6ರಿಂದ 7 ಗಂಟೆಗಳ ಕಾಲ ನೆನೆಯಲು ಬಿಡಿ.

7 ಗಂಟೆಯ ಬಳಿಕ ಹಿಟ್ಟನ್ನ ಮತ್ತೆ ಐದು ನಿಮಿಷ ನಾದಿ, ಪುರಿ ಆಕಾರಕ್ಕೆ ಲಟ್ಟಿಸಿ. ಬನ್ಸ್ ಹಿಟ್ಟು ಲಟ್ಟಿಸುವಾಗ ಕೊಂಚ ದಪ್ಪವಾಗಿ ಲಟ್ಟಿಸಿದರೆ ಬನ್ಸ್ ಮೆತ್ತಗೆ, ರುಚಿಯಾಗುತ್ತದೆ. ಈಗ ಮಧ್ಯಮ ಉರಿಯಲ್ಲಿ ಎಣ್ಣೆ ಕಾಯಿಸಿ, ಬನ್ಸ್ ಕರೆಯಿರಿ. ಕಾಯಿ ಚಟ್ನಿ ಜೊತೆ ಬನ್ಸ್ ಸರ್ವ ಮಾಡಿ.

Next Story

RELATED STORIES