ಸಿಎಂಗೆ ಕೊರೊನಾ ಆತಂಕ- ಸಿಎಂ ನಿವಾಸದ ಹಾಸುಪಾಸಿನಲ್ಲೇ ಹಲವರು ಕ್ವಾರಂಟೈನ್…!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇಂದು ಕಾವೇರಿ‌ಸರ್ಕಾರಿ ಬಂಗ್ಲೆಗೆ ತಮ್ಮ ವಾಸ್ತವ್ಯ ಬದಲಾಯಿಸಿದ್ದಾರೆ. ವಿಧಾನಸೌಧದಲ್ಲಿ ಪಿಎಂ ವಿಡಿಯೋಕಾನ್ಫರೆನ್ಸ್ ಮುಗಿಸಿ ನೇರವಾಗಿ ಕಾವೇರಿಗೆ ಆಗಮಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಅಂದ್ರೆ ತಮ್ಮ ಹುಟ್ಟುಹಬ್ಬದ ದಿನವೇ ಕಾವೇರಿಗೆ ಗೃಹ ಪೂಜೆಯನ್ನ ನೆರವೇರಿಸಿದರು.ಪೂಜೆ ನೆರವೇರಿಸಿದ್ರೂ ಡಾಲರ್ಸ್ ಕಾಲೋನಿ ನಿವಾಸದಲ್ಲಿಯೇ ಉಳಿದುಕೊಂಡಿದ್ರು. ಆದರೆ ಇದೀಗ ಅವರಿಗೂ ಕೊರೊನಾ ಆತಂಕ ಎದುರಾದ ಹಿನ್ನೆಲೆ ಆರೋಗ್ಯಾಧಿಕಾರಿಗಳೇ ನಿವಾಸ ಶಿಫ್ಟ್ ಮಾಡುವಂತೆ ಸಲಹೆ ನೀಡಿದ್ದರಂತೆ..

ಹೀಗಾಗಿ ಇಂದು ದಿಡೀರ್ ಕಾವೇರಿಗೆ ವಾಸ್ತವ್ಯ ಶಿಫ್ಟ್ ಮಾಡಿದ್ದಾರೆ. ಸಿಎಂ ಆತಂಕಕ್ಕೆ ಕಾರಣವೂ ಇತ್ತು.ಯಾಕಂದ್ರೆ ಅವರ ಡಾಲರ್ಸ್ ಕಾಲೋನಿ ನಿವಾಸದ ಎದುರಿನ ನಿವಾಸದಲ್ಲೇ ಮನೆಕೆಲಸದಾಕೆಗೆ ಕೊರೊನಾ ಸೋಂಕು ತಗುಲಿತ್ತು.ಅಲ್ಲದೆ ಸಿಎಂ ನಿವಾಸದ ಹಾಸುಪಾಸಿನಲ್ಲೇ ಹಲವರು ಕ್ವಾರಂಟೈನ್ ನಲ್ಲಿದ್ದಾರೆ..ಹೀಗಾಗಿ ಮನೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ.

Recommended For You

About the Author: user

Leave a Reply

Your email address will not be published. Required fields are marked *