‘ಸಾಲ ತೀರಿಸಲು ಅವಕಾಶ ಕೊಡಿ’ – ಉದ್ಯಮಿ ವಿಜಯ ಮಲ್ಯ

ಲಂಡನ್: ಮದ್ಯದ ದೊರೆ, ಉದ್ಯಮಿ ವಿಜಯ ಮಲ್ಯ ಅವರು ತಮ್ಮ ಒಡೆತನದಲ್ಲಿದ್ದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ ಸಂಪೂರ್ಣ ಸಾಲವನ್ನು ತೀರಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸದ್ಯ ವಿಶ್ವವನ್ನೇ ಕಂಗಾಲು ಮಾಡಿರುವ ಕೋವಿಡ್​-19 ತಡೆಗಟ್ಟಲು ಭಾರತ ಸರ್ಕಾರಕ್ಕೆ ಈ ಹಣ ಸಹಾಯ ಆಗಬಹುದು. ಭಾರತದಲ್ಲಿ ಬೀಗ ಹಾಕಿದ ಬಳಿಕ ತಮ್ಮ ಎಲ್ಲಾ ಕಂಪನಿಗಳ ಕಾರ್ಯಾಚರಣೆ ಮತ್ತು ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿವೆ ಎಂದು ಅವರು ಹೇಳಿದ್ದಾರೆ.

ಅಷ್ಟೆ ಅಲ್ಲದೇ, ಕೊರೊನಾ ವೈರಸ್​​ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆ ಭಾರತದ ಲಾಕ್‌ಡೌನ್‌ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ವಿಜಯ ಮಲ್ಯ ಸಹ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದು, ಸಂತೋಷವಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಸುಮಾರು 9,000 ಕೋಟಿ ರೂ. ವಂಚನೆ ಆರೋಪದಡಿಯಲ್ಲಿ ಭಾರತಕ್ಕೆ ಬೇಕಾಗಿರುವ ವಿಜಯ ಮಲ್ಯ ಅವರು ಸದ್ಯ ಲಂಡನ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

 

Recommended For You

About the Author: user

Leave a Reply

Your email address will not be published. Required fields are marked *