ಕೋವಿಡ್​ 19 ಎಫೆಕ್ಟ್​​- ಅಮೆರಿಕಾದಲ್ಲಿ ಹೆಚ್​-1ಬಿ ವಿಸಾ ನಿಯಮ ಸಡಿಲಿಕೆಗೆ ಒತ್ತಾಯ

ವಾಸಿಂಗ್ಟನ್‌ : ಕೆಲಸ ಕಳೆದುಕೊಂಡು ಎರಡು ತಿಂಗಳ (60 ದಿನಗಳು) ಒಳಗಾಗಿ ಅಮೆರಿಕ ತ್ಯಜಿಸುವ ನಿಯಮವನ್ನು ಸಡಿಲಿಸಿ 6 ತಿಂಗಳಿಗೆ (180 ದಿನಗಳು) ವಿಸ್ತರಣೆ ಮಾಡಬೇಕು ಎಂದು ಎಚ್‌-1ಬಿ ವಿಸಾ ಹೊಂದಿರುವ ವಿದೇಶಿಗರು ಡೊನಾಲ್ಡ್​​ ಟ್ರಂಪ್‌ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ವಿಶ್ವವ್ಯಾಪಿ ಆವರಿಸಿರುವ ಕೋವಿಡ್‌-19ಗೆ ಅಮೆರಿಕ ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಹಿನ್ನೆಡೆ ಉಂಟು ಮಾಡಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಏಪ್ರಿಲ್‌ ತಿಂಗಳ ಕೊನೆ ವಾರದ ವರೆಗೂ ಅಮೆರಿಕ ಸರ್ಕಾರ ಅಲ್ಲಿನ ನಾಗರಿಕರ ಮೇಲೆ ಹೇರಿರುವ ನಿರ್ಬಂಧಗಳು ಇನ್ನಷ್ಟು ಕಠಿಣಗೊಳ್ಳಲಿವೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಸದ್ಯ ಅಮೆರಿಕದ ಬಹುತೇಕ ರಾಜ್ಯಗಳು ಲಾಕ್‌ಡೌನ್‌ ಆಗಿವೆ. ಬಹುರಾಷ್ಟ್ರೀಯ ಕಂಪನಿಗಳು ಬಹಳ ದೊಡ್ಡಮಟ್ಟದ ನಷ್ಟ ಅನುಭವಿಸಲಿವೆ ಎಂದು ಅಂದಾಜಿಸಲಾಗಿದೆ.

ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ವಿದೇಶಿಗರು ಅದರಲ್ಲೂ ಏಷ್ಯಾದ ರಾಷ್ಟ್ರಗಳಾದ ಭಾರತ ಮತ್ತು ಚೀನಾದಿಂದ ವಲಸೆ ಹೋದವರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಉದ್ಯೋಗದ ಉದ್ದೇಶದಿಂದ ನೀಡಲಾಗುವ ಎಚ್‌-1ಬಿ ವಿಸಾದ ನಿಯಮವನ್ನು ಸಡಿಲಗೊಳಿಸಲು ಅಲ್ಲಿನ ವಿದೇಶಿ ನೌಕರರು ಮನವಿಗಾಗಿ ಕೋರಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಈಗಾಗಲೇ ಅಮೆರಿಕಾದಲ್ಲಿ 33 ಲಕ್ಷ ಉದ್ಯೋಗಗಳು ಕೈತಪ್ಪಿವೆ ಎಂದು ವರದಿಯಾಗಿದೆ.

Recommended For You

About the Author: user

Leave a Reply

Your email address will not be published. Required fields are marked *