Top

ಹವ್ಯಕ ಶೈಲಿಯ ಸೌತೇಕಾಯಿ ಹಸಿ ಎಂದಾದರೂ ತಿಂದಿದ್ದೀರಾ..?

ಹವ್ಯಕ ಶೈಲಿಯ ಸೌತೇಕಾಯಿ ಹಸಿ ಎಂದಾದರೂ ತಿಂದಿದ್ದೀರಾ..?
X

ಬೋರ್ ಬರ್ತಿದೆ. ಮನೇಲಿದ್ರೆ ಸಖತ್ ಹೊಟ್ಟೆ ಹಸಿವಾಗತ್ತೆ. ಅದ್ಕೆ ಅಂತಾನೇ ತಿನ್ನೋಕ್ಕೆ ಭರ್ಜರಿ ಜಂಕ್ ಫುಡ್ ತರಿಸಿಕೊಂಡಿರ್ತೀರಾ. 21 ದಿನ ಮನೇಲೆ ಕೂತು, ವಾಕ್ ಮಾಡದೇ, ಜಂಕ್‌ ಫುಡ್ ತಿಂದ್ರೆ ನಿಮ್ ಪರಿಸ್ಥಿತಿ ಏನಾಗ್ಬೇಡಾ ಹೇಳಿ..?.. ಈ ನಿಮ್ಮ ಕೆಲಸ ಬೊಜ್ಜು, ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂಗಾಗತ್ತೆ. ಅದ್ಕೆ ಊಟದ ಟೈಮಲ್ಲಾದ್ರೂ ಹೆಲ್ದಿ ಫುಡ್ ತಿನ್ನೋದನ್ನ ರೂಢಿಸಿಕೊಳ್ಳಿ.

ಕೆಲಸಕ್ಕೆ ಹೋಗೋ ಟೈಮಲ್ಲಿ ಸರಿಯಾಗಿ ಊಟ ಮಾಡಕ್ಕಾಗಲ್ಲ. ಪಟಾ ಪಟಾ ಅಂತಾ ಸಿಕ್ಕಿದ್ದನ್ನ ಬೇಯಿಸಿಕೊಂಡು ಬಾಕ್ಸಿಗೆ ಹಾಕಿಕೊಂಡು ಹೋಗ್ತೀರಾ. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ. ಆರಾಮಾಗಿ ಕೂತು ಊಟಾ ಮಾಡುವಷ್ಟು ಟೈಮಿದೆ. ಇರೋ ಟೈಮಲ್ಲಿ ಆರೋಗ್ಯಕರವಾದ ಊಟ ಮಾಡಬಹುದು. ಅದ್ಕೆ ನಾವಿವತ್ತು ಹವ್ಯಕ ಶೈಲಿಯ ಹೆಲ್ದಿ ರಾಯ್ತಾ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡ್ತೀವಿ. ಈ ಬೇಸಿಗೆಯಲ್ಲಿ ದೇಹವನ್ನ ತಂಪಾಗಿರಿಸೋ ಈ ರಾಯ್ತಾ ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು. ಹಾಗಾದ್ರೆ, ರಾಯ್ತಾ ಮಾಡೋಕ್ಕೆ ಬೇಕಾಗಿರೋ ಸಾಮಗ್ರಿನಾ ನೋಟ್ ಮಾಡ್ಕೊಳ್ಳಿ.

ಒಂದು ಕಪ್ ಮೊಸರು, ಒಂದು ಸೌತೇಕಾಯಿ, ಅರ್ಧ ಕಪ್ ಕೊಬ್ಬರಿ ತುರಿ, ಚಿಕ್ಕ ತುಂಡು ಹಸಿ ಶುಂಠಿ, ಒಗ್ಗರಣೆಗೆ, ಕೊಂಚ ಎಣ್ಣೆ, ಚಿಟಿಕೆ ಸಾಸಿವೆ, ಜೀರಿಗೆ, ಒಂದು ಒಣ ಮೆಣಸು, 5-6 ಎಸಳು ಕರಿಬೇವಿನ ಎಲೆ, ಸ್ವಲ್ಪ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಸೌತೇಕಾಯಿಯನ್ನ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಒಂದು ಬೌಲ್‌ಗೆ ಹಾಕಿ. ಮಿಕ್ಸಿ ಜಾರ್‌ಗೆ ಮೊಸರು ಕಾಯಿ ತುರಿ, ಚಿಕ್ಕ ತುಂಡು ಹಸಿ ಶುಂಠಿ ಹಾಕಿ ರುಬ್ಬಿ, ಸೌತೆಕಾಯಿಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಒಗ್ಗರಣೆ ಹಾಕಿ, ಉಪ್ಪು, ಕೊತ್ತೊಂಬರಿ ಸೊಪ್ಪು ಸೇರಿಸಿದರೆ ಹವ್ಯಕ ಶೈಲಿಯ ರಾಯ್ತಾ ರೆಡಿ. ನಿಮಗೆ ಬೇಕಾದಲ್ಲಿ ಈರುಳ್ಳಿ, ಟೊಮೆಟೋ ಬಳಸಬಹುದು.

ಇದನ್ನ ಸೌತೇಕಾಯಿ ಹಸಿ ಅಂತಾನೂ ಕರೀತಾರೆ. ಕೊಬ್ಬರಿ ತುರಿ ಮತ್ತು ಒಗ್ಗರಣೆ ಹಾಕುವುದರಿಂದ ಈ ರಾಯ್ತಾ ಬೇರೆ ರಾಯ್ತಾಗಿಂತ ಕೊಂಚ ಡಿಫ್ರೆಂಟ್ ಅನ್ನಿಸುತ್ತೆ. ಅನ್ನದ ಜೊತೆಗೆ ಈ ರಾಯ್ತಾ ಸೂಪರ್ ಕಾಂಬಿನೇಷನ್ ಆಗಿರತ್ತೆ. ಇಷ್ಟಾ ಆದ್ರೆ ನೀವೂ ಟ್ರೈ ಮಾಡಿ.

Next Story

RELATED STORIES