ದೇಶದ ಇತಿಹಾಸದಲ್ಲಿ ಮನೆ ಕಳೆದುಕೊಂಡ ಜನರಿಗೆ ಹಣ ಕೊಟ್ಟಿದ್ದೇವೆ – ಸಿಎಂ ಬಿಎಸ್​ವೈ

ಬೆಂಗಳೂರು: ದೇಶದ ಇತಿಹಾಸದಲ್ಲಿ ಮನೆ ಕಳೆದುಕೊಂಡ ಜನರಿಗೆ ಹಣ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಂಗಳವಾರ ಹೇಳಿದ್ದಾರೆ.

ವಿಧಾನಪರಿಷತ್​ನಲ್ಲಿಂದು ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಕ್ರಮ ಕೈಗೊಳ್ಳಲಾಗಿದೆ. ನಾನು ಅಧಿಕಾರ ಸ್ವೀಕಾರ ಮಾಡಿದಾಗ ಯಾವ ಪರಿಸ್ಥಿತಿ ಇತ್ತೋ, ಇವಾಗ್ಲೂ ನನಗೆ ಅದೇ ಪರಿಸ್ಥಿತಿ ಇದೆ ಎಂದರು.

ಇನ್ನು ಕೊರೊನಾ ನಿಯಂತ್ರಣ ಮಾಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ವೈರಾಣು ಹರಡುವುದನ್ನು ತಡೆಯಲು ಸರ್ಕಾರ ಒಂದು ಹಂತದಲ್ಲಿ ಮುಂದೆ ಇದ್ದೇವೆ. ನಾವು ಕೊರೊನಾ ಇವಾಗ ೧ ಮತ್ತು ೨ ಹಂತದಲ್ಲಿ ಇದ್ದೇವೆ. ೩ ಮತ್ತು ೪ನೇ ಹಂತಕ್ಕೆ ಹೋಗಬಾರದು ಮುಂಜಾಗ್ರತಾ ಕ್ರಮವಹಿಸಿದ್ದೇವೆ ಎಂದು ಅವರು ತಿಳಿಸಿದರು.

ವಿಪಕ್ಷ ಸದಸ್ಯರ ಧರಣಿಯಿಂದ ತನ್ನ ಭಾಷಣ ಅರ್ಧಕ್ಕೆ ಮೊಟಕು ಗೊಳಿಸಿದ ಸಿಎಂ ಬಿಎಸ್​ವೈ ಅವರು, ನಾನು ಬಜೆಟ್ ಮೇಲೆ ಉತ್ತರ ಕೊಡಬೇಕಿತ್ತು. ಅದನ್ನು ನಾನು ಕೊಟ್ಟಿದ್ದೇನೆ ಎಂದು ಅವರು ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

ಸದ್ಯ ಭಾಷಣ ಮೊಟಕು ಮುನ್ನ ಸದನ ಸಮಿತಿಗೆ ಆಗ್ರಹ ಮಾಡಿದ ವಿಪಕ್ಷ ಸದಸ್ಯರು, ಲ್ಯಾಪ್​ಟಾಪ್ ಹಗರಣದ ತನಿಖೆಗೆ ಸದನ ಸಮಿತಿ ಮಾಡಿ ಎಂದು ಧರಣಿಗೆ ಇಳಿದರು. ಇದರಿಂದ ತನ್ನ ಭಾಷಣ ಅರ್ಧಕ್ಕೆ ನಿಲ್ಲಿಸಿ, ಫೈನಾನ್ಸ್ ಬಿಲ್ ಅಂಗೀಕಾರ ಮಾಡುವಂತೆ ಸಿಎಂ ಮನವಿ ಮಾಡಿ ಕುಳಿತುಗೊಂಡರು.

Recommended For You

About the Author: user

Leave a Reply

Your email address will not be published. Required fields are marked *