ಬಿಎಸ್​ವೈ ಬಜೆಟ್​ ಒಪ್ಪಬೇಕಾದ್ರೆ ಸಿದ್ದರಾಮಯ್ಯ ಡಿಮ್ಯಾಂಡ್​​​ ​ಏನ್​ ಗೊತ್ತಾ?

ಬೆಂಗಳೂರು: ಮಹದಾಯಿಗೆ 500 ಕೋಟಿ ರೂ.ನೀಡಿದ್ದೀರಾ(?) ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಕೆಲಸ ಮಾಡಬೇಕು ಎಂದು ವಿರೋಧ ಪಕ್ಷದ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದರು.

ಗುರುವಾರ ಸದನದಲ್ಲಿ ಮಾತನಾಡಿದ ಅವರು, ನಾನು ಸಾಲಮನ್ನಾ ಮಾಡಿದಾಗ ಯಾವುದೇ ನಿಬಂಧನೆಗಳಿರಲಿಲ್ಲ, ಹೆಚ್ಡಿಕೆ ಸಾಲಮನ್ನಾ ಯೋಜನೆಯಡಿ ಸಹಕಾರ ಬ್ಯಾಂಕ್​ಗಳ 1,60,000 ಅರ್ಜಿಗಳು ಇನ್ನೂ ವಿಲೇವಾರಿ ಆಗಿಲ್ಲ, ಅವುಗಳನ್ನು ಇತ್ಯರ್ಥ ಮಾಡಬೇಕು. ರಾಷ್ಟ್ರೀಯ ಬ್ಯಾಂಕ್ ಗಳ ವ್ಯಾಪ್ತಿಯಲ್ಲಿ 35,000 ಅರ್ಜಿಗಳು ವಿಲೇವಾರಿ ಆಗಿಲ್ಲ, ಅದನ್ನೂ ಇತ್ಯರ್ಥ ಪಡಿಸಬೇಕು ಎಂದು ಆಡಳಿತ ಪಕ್ಷಕ್ಕೆ ತಿಳಿಸಿದರು.

ಇನ್ನು ಮೇಕೆದಾಟು ಯೋಜನೆಗಿರುವ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಬಾದಾಮಿ ಕ್ಷೇತ್ರದಲ್ಲಿ 525 ಕೋಟಿ ರೂ. ಯೋಜನೆಯ ಪ್ರಸ್ತಾಪ ಇತ್ತು ಅದನ್ನು ಬಜೆಟ್​ನಲ್ಲಿ ಪ್ರಸ್ತಾಪಿಸಿಲ್ಲ, ವಲಯವಾರು ಬಜೆಟ್ ಮಂಡನೆಯಿಂದ ಪಾರದರ್ಶಕತೆಯಿಂದ ಕೂಡಿಲ್ಲ, ಬಜೆಟ್ ಗೌಪ್ಯವಾಗಿದೆ. ಯಾವುದೇ ವರ್ಗದ ಜನರಿಗೆ ನ್ಯಾಯ ಕೊಟ್ಟಿಲ್ಲ, ಇದು ಅಭಿವೃದ್ಧಿ ಪೂರಕವಾದ ಬಜೆಟ್ ಅಲ್ಲ, ಈ ಆಯವ್ಯಯವನ್ನು ಒಪ್ಪಬೇಕಾದ್ರೆ, ಯಾವುದೇ ಕಾರ್ಯಕ್ರಮ ನಿಲ್ಲಿಸಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಎಸ್​ವೈ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

Recommended For You

About the Author: user

Leave a Reply

Your email address will not be published. Required fields are marked *