ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಕೂಲ್​ ಆಗಿ ಉತ್ತರಿಸಿದ ಸಿಎಂ ಬಿಎಸ್​ವೈ

ಬೆಂಗಳೂರು: ಹಕ್ಕಿ ಜ್ವರ, ಮಂಗನ ಖಾಯಿಲೆ, ಕೊರೊನಾ ಮನುಷ್ಯನ ಮೇಲೆ ಹಲವು ರೋಗಗಳು ದಾಳಿ ನಡೆಸುತ್ತಿವೆ. ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕಿದೆ. ಈವರೆಗೆ ಸರ್ಕಾರ ರೋಗಗಳ ತಡೆಗೆ ಏನು ಕ್ರಮ ಕೈಗೊಂಡಿದೆ ಮಾಹಿತಿ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ವಿಧಾನಸೌಧದಲ್ಲಿಂದು ಸದನದಲ್ಲಿ ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅವರಿಗೆ ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು, ಹಕ್ಕಿ ಜ್ವರ ಮೈಸೂರಿನಲ್ಲಿ ಹರಡುತ್ತಿರುವ ಬಗ್ಗೆ ಮಾಹಿತಿ ಇದೆ. ಸಚಿವ ವಿ. ಸೋಮಣ್ಣ ಮೈಸೂರಿಗೆ ತೆರಳಿ, ಕ್ರಮ ಕೈಗೊಂಡಿದ್ದಾರೆ ಎಂದರು.

ಇನ್ನು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎಲ್ಲ ಅಪಾಯಕಾರಿ ರೋಗಗಳು ಒಮ್ಮೆಲೆ ಬಂದಿವೆ. ಹಂದಿ ಜ್ವರ, ಕೊರೊನಾ, ಶಿವಮೊಗ್ಗ ಭಾಗದಲ್ಲಿ ಮಂಗನ ಖಾಯಿಲೆ, ಇಂತಹ ಸಂದರ್ಭಗಳಲ್ಲಿ ಜನರು ಆತಂಕ ಪಡಬಾರದು. ಜನರ ರಕ್ಷಣೆ ಮಾಡುವಂತದ್ದು ಸರ್ಕಾರದ ಕರ್ತವ್ಯ. ಸೂಕ್ತ ಕ್ರಮ ಕೈಗೊಳ್ಳುವ ಜವಬ್ದಾರಿ ನಮ್ಮದು ಎಂದು ಅವರು ಸಮರ್ಥನೆ ಮಾಡಿಕೊಂಡರು.

Recommended For You

About the Author: user

Leave a Reply

Your email address will not be published. Required fields are marked *