‘ಸಿಎಂ ಯಡಿಯೂರಪ್ಪ ಮುಂಗಡ ಪತ್ರದ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ’

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಮುಂಗಡ ಪತ್ರದ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಮಾಜಿ ಸಚಿವ ಆರ್​.ವಿ.ದೇಶಪಾಂಡೆ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಿನ್ನೆ ಬಜೆಟ್ ಮಂಡಿಸಿದ್ದರು. ಆದರೆ, ಇವತ್ತು ಮತ್ತೆ ಬಜೆಟ್ ಬಿಟ್ಟು ಮತ್ತೆ ಅನುದಾನ ಕೊಟ್ಟಿದ್ದಾರೆ. ಯುಕೆಪಿ (Upper Krishna Project) ಯೋಜನೆಗೆ ಹತ್ತು ಸಾವಿರ ಕೋಟಿ ಕೊಟ್ಟಿದ್ದಾರೆ ಎಂದು ಬಿಎಸ್​ವೈ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಯುಕೆಪಿಗೆ ಅನುದಾನ ನೀಡುವ ಬಗ್ಗೆ ನನ್ನ ಆಕ್ಷೇಪವಿಲ್ಲ ಆದರೆ ಸಿಎಂ ಬಜೆಟ್​ನಲ್ಲೇ ಕೊಡಬಹುದಿತ್ತು. ರಾಜ್ಯದ ಒಟ್ಟು ಆದಾಯಕ್ಕಿಂತ 4 ಸಾವಿರ ಹೆಚ್ಚು ಅನುದಾನ ಆಗಿದೆ. ಈಗ ಹತ್ತು ಸಾವಿರ ಕೋಟಿ ಕೊಟ್ಟಿದ್ದಾರೆ, ಎಲ್ಲಿಂದ ಹತ್ತು ಸಾವಿರ ಕೋಟಿ ತರುತ್ತಾರೆ ಎಂದು ಕಾಂಗ್ರೆಸ್​ ಮುಖಂಡ ಆರ್​.ವಿ.ದೇಶಪಾಂಡೆ ಅವರ ಪ್ರಶ್ನೆ ಮಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *