‘ಮಹದಾಯಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು ನನ್ನ ಗೆಲುವಲ್ಲ, ರೈತರ ಗೆಲುವು’

ಬೆಳಗಾವಿ: ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಗೆಜೆಟ್ ನೋಟಿಫಿಕೇಶನ್ ಬಗ್ಗೆ ಮಾತನಾಡಿದ್ದು, ಮಹದಾಯಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು ನನ್ನ ಗೆಲುವಲ್ಲ. 40 ವರ್ಷಗಳಿಂದ ಹೋರಾಟ ಮಾಡುತ್ತಿರುವ ಈ ಭಾಗದ ರೈತರ ಗೆಲುವು ಎಂದಿದ್ದಾರೆ.

ನಾನು, ಸಿಎಂ ಯಡಿಯೂರಪ್ಪನವರು ದೈವಭಕ್ತರು, ಹೀಗಾಗಿ ದೇವರ ದಯೆಯಿಂದ ಒಳ್ಳೆಯದಾಗಿದೆ. ನಾಳೆ ಮಹದಾಯಿ ಕಾಮಗಾರಿ ಪ್ರದೇಶ ಕಣಕುಂಬಿಗೆ ಭೇಟಿ ನೀಡುವೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿರೋದ್ರಿಂದ ನಾನು ಹೆಚ್ಚಿಗೆ ಏನನ್ನೂ ಮಾತನಾಡೋದಿಲ್ಲ. ಸೋಮವಾರ ಸುಪ್ರೀಂನಲ್ಲಿ ಮತ್ತೆ ವಿಚಾರಣೆ ನಡೆಯಲಿದೆ. ರೈತರು ಸಮಾಧಾನದಿಂದ ಇರಬೇಕು. ಮುಂದಿನ ದಿನಗಳಲ್ಲಿ ಸಾಧ್ಯವಾದರೆ ಸಿಎಂ ಯಡಿಯೂರಪ್ಪ ಅವರನ್ನ ಮಹದಾಯಿ ಕಾಮಗಾರಿ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *