ಬೇರ್​​​​​ ಗ್ರಿಲ್ಸ್​​​ ಜೊತೆ ರಜಿನಿ ಫಾರೆಸ್ಟ್ ಹಂಟಿಂಗ್: ಇದು ಕಿರುತೆರೆಯಲ್ಲೇ ಫಸ್ಟ್..!

ಸೂಪರ್ ಸ್ಟಾರ್ ರಜನಿಕಾಂತ್ ಕರ್ನಾಟಕದ ದಟ್ಟ ಅರಣ್ಯಗಳಲ್ಲಿ ಅಲೆದಾಡುತ್ತಾ , ಪ್ರಾಣಿ , ಪಕ್ಷಿ , ನದಿ , ಸರೋರವರಗಳನ್ನು ನೋಡುತ್ತಾ ನೋಡುತ್ತಾ ಸಾಗಿದ್ದಾರೆ. ಅಲ್ಲಿಯೂ ಅವರ್ ಸ್ಟೈಲ್​​ಗೇನು ಕೊರತೆಯಿಲ್ಲ , ರೋಚಕತೆಗೂ ಕಮ್ಮಿಯಿಲ್ಲ. ಕಡು ಕಾಡಿನಲ್ಲಿಯೂ ‘ಕಬಾಲಿ ಡಾ’ ಎಂದು ಗಹ ಗಹ ನಕ್ಕಿದ್ದಾರೆ ರಜಿನಿ.

ಕಡು ಕಾಡಿನ ನಡು ನಡುವೆ ತಲೈವಾ ಮಾರ್ಚ್​​​ ಫಾಸ್ಟ್..!
ಅರಣ್ಯದಲ್ಲಿ ರಜಿನಿ; ಇದು ಕಿರುತೆರೆಯಲ್ಲೇ ಫಸ್ಟ್..!
ವಿಶ್ವವಿಖ್ಯಾತ ಖಾಸಗಿ ಚಾನೆಲ್​​ ಡಿಸ್ಕವರಿ ಚಾನೆಲ್‌ನ​​​ಲ್ಲಿ ಪ್ರಸಾರವಾಗುವ ‘ಮ್ಯಾನ್ ವರ್ಸಸ್ ವೈಲ್ಡ್’ ಕಾರ್ಯಕ್ರಮ ಭಾರತದ ಕಿರುತೆರೆ ವೀಕ್ಷಕರ ಗಮನ ಸೆಳೆದಿದೆ. ಕಾರಣ ಒನ್ ಆಂಡ್ ಓನ್ಲಿ ತಲೈವ ಸೂಪರ್ ಸ್ಟಾರ್ ರಜಿನಿಕಾಂತ್​​.

ರಜಿನಿಕಾಂತ್ ಪ್ರೋಮೋ ನೋಡಿ ಥ್ರಿಲ್ ಆದ ಅಭಿಮಾನಿ..!
ಮಾರ್ಚ್​ 23ಕ್ಕೆ ಪ್ರಸಾರ ಕಬಾಲಿ ಕಾಡು ಸುತ್ತಿದ ಕಹಾನಿ..

ಬ್ರೇರ್​​ ಗ್ರಿಲ್ಸ್​​ ಸಾಹಸಿಯ ನಿರೂಪಣೆಯಲ್ಲಿ ಮೂಡಿಬರುವ ‘ಮ್ಯಾನ್ ವರ್ಸಸ್ ವೈಲ್ಡ್’ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಫಸ್ಟ್​​ ಟೈಮ್​​ ಸೂಪರ್ ಸ್ಟಾರ್ ರಜಿನಿಕಾಂತ್ ಕಾಣಿಸಿಕೊಂಡಿದ್ದಾರೆ. ಕಾಡು ಮೇಡುಗಳನ್ನು ಸಾಗುತ್ತಾ , ಕಾಡಿನಲ್ಲಿಯೇ ದಿನ ಪೂರ್ತಿ ಕಳೆದು ಹೊಸ ಹೊಸ ಮಾಹಿತಿಗಳನ್ನ ನೀಡುತ್ತಾ ಜೀವನ ಉತ್ಸಾಹವನ್ನ ಹೆಚ್ಚಿಸುವ ನಿರೂಪಕ ಬ್ರೇರ್ ಗ್ರಿಲ್ಸ್​. ಇಂತಿಪ್ಪ ವ್ಯಕ್ತಿ ನಡೆಸಿಕೊಡುವ ಕಾರ್ಯಕ್ರಮಕ್ಕೆ ವಿಶ್ವವ್ಯಾಪಿ ವೀಕ್ಷಕರಿದ್ದಾರೆ. ಈಗ ಮತ್ತಷ್ಟು ವೀಕ್ಷಕರ ಸಂಖ್ಯೆ ಹೆಚ್ಚಾಗೋ ಸಾಧ್ಯತೆ ಇದೆ. ಅದಕ್ಕೆ ಕಾರಣ ಭಾರತೀಯ ಚಿತ್ರರಂಗದ ಲಿವಿಂಗ್ ಲೆಜೆಂಡ್ ಸೂಪರ್ ಸ್ಟಾರ್ ರಜನಿಕಾಂತ್​​.

ಕಳೆದ ಜನವರಿ 29ರಂದು ಕರ್ನಾಟಕದ ಬಂಡಿಪುರ ಫಾರೆಸ್ಟ್​ನಲ್ಲಿ ರಜಿನಿಕಾಂತ್ ಅವರ ವಿಶೇಷ ಸಂಚಿಕೆ ಚಿತ್ರೀಕರಣವಾಗಿದೆ. ರಜಿನಿ ಕಾಡಿಗೆ ಬಂದಿದ್ದು, ಶೂಟಿಂಗ್​​​​​​ನಲ್ಲಿ ಭಾಗವಹಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಖಡಕ್ ಪ್ರೋಮೋದಿಂದ ಹಲ್​ಚೆಲ್ ಎಬ್ಬಿಸುತ್ತಿದೆ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ.

ಪ್ರಧಾನಿ ನಂತ್ರ ಬೇರ್​​​​​ ಗ್ರಿಲ್ಸ್​​​ ಜೊತೆ ರಜಿನಿ ಫಾರೆಸ್ಟ್ ಹಂಟಿಂಗ್..!
ಅಕ್ಷಯ್ ಜೊತೆ ಬೇರ್ ಮಾತುಕತೆ ಶೀಘ್ರದಲ್ಲಿಯೇ ಕಮಿಂಗ್​..! 

ರಜನಿಕಾಂತ್ ​ ಭಾಗವಹಿಸಿರುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮಕ್ಕೆ ಸರಣಿ ಭಾಗಕ್ಕೆ ‘ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಅಂಡ್ ರಜಿನಿಕಾಂತ್‘ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮ ಮುಂಬವರು ಮಾರ್ಚ್ 23ಕ್ಕೆ ಪ್ರಸಾರವಾಗಲಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಕಾಡಿನ ಅತಿಥಿಯಾಗಿದ್ದರು. ಬೇರ್ ಗ್ರಿಲ್ಸ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ರಜಿಕಾಂತ್ ಅವರಂತೆ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಆ ಕಾರ್ಯಕ್ರಮವೂ ಕೂಡ ಪ್ರಸಾರವಾಗಲಿದೆ.
ಶ್ರೀಧರ್ ಶಿವಮೊಗ್ಗ _ ಎಂಟರ್​​ಟೈನ್ಮೆಂಟ್ ಬ್ಯೂರೋ_ಟಿವಿ5

Recommended For You

About the Author: user

Leave a Reply

Your email address will not be published. Required fields are marked *