ಮತ್ತೆ ಒಂದೇ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ದಿಗ್ಗಿ- ಆ್ಯಂಡಿ..!

ಸ್ಯಾಂಡಲ್​ವುಡ್​ ಕ್ಯೂಟ್​​ ಕಪಲ್​​ ದಿಗಂತ್​ ಮತ್ತು ಐಂದ್ರಿತಾ ರೇ. ಎರಡು ವರ್ಷಗಳ ಹಿಂದೆ ಹಸೆಮಣೆ ಏರಿದ ಈ ಪಾರಿಜಾತ ಜೋಡಿ ಮದುವೆ ನಂತ್ರ ಚಿತ್ರವೊಂದರಲ್ಲಿ ಒಟ್ಟಿಗೆ ನಟಿಸ್ತಿದ್ದಾರೆ.

ದಿಗ್ಗಿ- ಆ್ಯಂಡಿ ಹ್ಯಾಟ್ರಿಕ್​​ ಸಿನಿಮಾ ಮುಹೂರ್ತ
ದೂದ್​​ ಪೇಡಾ ದಿಗಂತ್​ ಈಗ ಅಡಿಕೆ ಬೆಳೆಗಾರ..!
ಮನಸಾರೆ ಸಿನಿಮಾ ಮೂಲಕ ದಿಗಂತ್​ ಮತ್ತು ಐಂದ್ರಿತಾ ರೇ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈ ಜೋಡಿಯನ್ನ ಸಿನಿರಸಿಕರು ಮನಸಾರೆ ಒಪ್ಪಿಕೊಂಡಿದ್ರು. ಪಾರಿಜಾತ ಸಿನಿಮಾದಲ್ಲಿ ಮತ್ತೆ ಇವ್ರು ಜೊತೆಯಾದಾಗ ಮೆಚ್ಚಿಕೊಂಡಿದ್ರು. ಸ್ಯಾಂಡಲ್‌ವುಡ್‌ನಲ್ಲಿ ಆನ್‌ಸ್ಕ್ರೀನ್ ಹಾಗು ಆಫ್‌ಸ್ಕ್ರೀನ್‌ನಲ್ಲಿಯೂ ಕ್ಯೂಟ್ ಜೋಡಿ ಎನ್ನಿಸಿಕೊಂಡಿರುವ ದಿಗಂತ್ ಮತ್ತು ಐಂದ್ರಿತಾ ರೇ ಈಗ ಮತ್ತೆ ಒಟ್ಟಿಗೆ ನಟಿಸ್ತಿದ್ದಾರೆ.

ಉಪ್ಪಿ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಇನ್ನು ಹೆಸರಿಡದ ಈ ಚಿತ್ರವನ್ನ ಸಿಲ್ಕ್ ಮಂಜು ನಿರ್ಮಿಸುತ್ತಿದ್ದಾರೆ. ದೇವೇಂದ್ರ ರೆಡ್ಡಿ ಹಾಗೂ ಎ.ಪ್ರಕಾಶ್‌ ಚಿತ್ರವನ್ನು ಅರ್ಪಿಸುತ್ತಿದ್ದು, ಈ ಚಿತ್ರದ ಮೂಲಕ ವಿನಾಯಕ ಕೋಡ್ಸರ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ಕಿರುಚಿತ್ರ ನಿರ್ದೇಶಿಸಿದ್ದ ಅನುಭವ ವಿನಾಯಕ ಕೋಡ್ಸರ ಅವರಿಗಿದೆ. ಸಿಗಂಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ಮಾರ್ಚ್‌ನಲ್ಲಿ ಸಿಗಂಧೂರು, ನಿಟ್ಟೂರು ಸುತ್ತಮುತ್ತಾ ಚಿತ್ರೀಕರಣ ನಡೆಸುವ ಉದ್ದೇಶ ಚಿತ್ರತಂಡಕ್ಕಿದೆ.

ಇದು ಮಲೆನಾಡಿನ ಬದುಕನ್ನ ಬಿಂಬಿಸೋ ಸಿನಿಮಾ. ಚಿತ್ರದಲ್ಲಿ ದಿಗಂತ್​ ಅಡಿಕೆ ಬೆಳೆಗಾರನಾಗಿ, ಗೊಬ್ಬರದ ಅಂಗಡಿ ಮಾಲೀಕನಾಗಿಯೂ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಕೀಲೆ ಪಾತ್ರದಲ್ಲಿ ಐಂದ್ರಿತಾ ದಿಗಂತ್​​ಗೆ ಸಾಥ್​ ಕೊಡ್ತಿದ್ಧಾರೆ. ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್​ ಕೂಡ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ರೊಮ್ಯಾಂಟಿಕ್​ ಕಾಮಿಡಿ ಎಂಟ್ರಟ್ರೈನರ್​ ಸಿನಿಮಾ ಇದು. ಮನಸಾರೆ, ಪಾರಿಜಾತ ನಂತ್ರ ದಿಗಂತ್​ ಮತ್ತು ಐಂದ್ರಿತಾ ಶಾರ್ಪ್​ ಶೂಟರ್​ ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ರು. ಇದೀಗ ಈ ಜೋಡಿಯ ಹ್ಯಾಟ್ರಿಕ್​​ ಸಿನಿಮಾ ಸೆಟ್ಟೇರಿದ್ದು, ಶೀಘ್ರದಲ್ಲೇ ಶೂಟಿಂಗ್​ ಮುಗಿಸಿ, ತೆರೆಗೆ ಬರಲಿದೆ.
ಎಂಟ್ರಟ್ರೈನ್​ಮೆಂಟ್​ ಬ್ಯೂರೋ, ಟಿವಿ5

Recommended For You

About the Author: user

Leave a Reply

Your email address will not be published. Required fields are marked *