ಮೊನ್ನೆ ಕೆಜಿಎಫ್-2 ಶೂಟಿಂಗ್‌ಗೆ ಬಂದ ರವೀನಾ ಇಂದೇ ಫ್ಲೈಟ್ ಹತ್ತಿದ್ದು ಯಾಕೆ..?

ಮೊನ್ ಮೊನ್ನೆ , 20 ವರ್ಷದ ನಂತರ ಕೆಜಿಎಫ್ ಸಿನಿಮಾಕ್ಕಾಗಿ ಮೈಸೂರು ಫ್ಲೈಟ್ ಹತ್ತಿದ್ರು ರವೀನಾ ಟಂಡನ್. ಆದ್ರೆ ಮೊನ್ನೆ ಬಂದವರು ಆಗ್ಲೇ ಮುಂಬೈ ಫ್ಲೈಟ್ ಹತ್ತಿದ್ದಾರಂತೆ.

ಕೆಜಿಎಫ್ನಿಂದ ಮುಂಬೈಗೆ ಹಾರಿದ್ರು ರವೀನಾ ಟಂಡನ್​..!
ವೇಗವಾಗಿ ಚಿತ್ರೀಕರಣ ಮುಗಿಸಿಕೊಟ್ರು ರಮಿಕಾ ಸೇನ್..!
ಕೆಜಿಎಫ್ ಚಾಪ್ಟರ್-2.. ಇದು ಭಾರತೀಯ ಚಿತ್ರರಂಗದ ಭಾರಿ ನಿರೀಕ್ಷೆಯ ಸಿನಿಮಾ ಎಂದ್ರು ಅತಿಶಯೋಕ್ತಿಯಾಗಲ್ಲ. ಅಷ್ಟರ ಮಟ್ಟಿಗೆ ಕೆಜಿಎಫ್​​​​-2 ಭಾಷೆಯ ಗಡಿ-ನುಡಿಯನ್ನು ಮೀರಿ, ಸಖತ್ ಹೈಪ್ ಕ್ರಿಯೆಟ್ ಮಾಡಿದೆ. ಅತಿ ಜಾಗರೂಕತೆಯಿಂದ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್​. ಆದ್ರೂ ಆವಾಗೊಂದು ಇವಾಗೊಂದು ಸಣ್ಣ ಪುಟ್ಟ ಸ್ವೀಟ್ ಆಂಡ್ ಸ್ಪೈಸಿ ನ್ಯೂಸ್​​​ ಕೊಡುತ್ತಾ ಬಂದಿದೆ ಹೊಂಬಾಳೆ ಫಿಲ್ಸ್ಂ​. ಈಗ ಅದರಂತೆ ಕೆಜಿಎಫ್ ಬಳಗದಿಂದ ಹೊಸದೊಂದು ಸಮಾಚಾರ ಹೊರಬಂದಿದೆ. ಅದುವೆ ಕೆಜಿಎಫ್ ಸಿನಿಮಾದ ಪ್ರಧಾನಿ ರಮಿಕಾ ಸೇನ್​​​ ಪಾತ್ರಧಾರಿಯ ವಿಚಾರ.

 

View this post on Instagram

 

And alll “ action “it is ! Back onto the #kgfchapter2 sets . We are a serious kgf family here , with lots of masti and fun thrown in ! 😁😜

A post shared by Raveena Tandon (@officialraveenatandon) on

ರಮೀಕಾ ಸೇನ್ ಅನ್ನೋ ಪಾತ್ರವನ್ನು ಕೆಜಿಎಫ್ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಸೃಷ್ಟಿಸಿದ್ದಾರೆ. ಮೊದಲ ಭಾಗದಲ್ಲಿ ಅಷ್ಟಾಗಿ ಆ ಪಾತ್ರ ಕಾಣಿಸದಿದ್ರು ಎರಡನೇ ಭಾಗದಲ್ಲಿ ಸ್ಪಷ್ಟವಾಗಿ ರಮಿಕಾ ಸೇನ್ ಪಾತ್ರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿಯೇ ಬಾಲಿವುಡ್​​​ನ ಬೆಡಗಿ ರವೀನಾ ಟಂಡನ್ ಬಾಂಬೆಯಿಂದ ಮೈಸೂರಿನ ತನಕ ಬಂದಿದ್ದಾರೆ. ಆದ್ರೆ ಬಂದಷ್ಟೇ ವೇಗವಾಗಿ ವಾಪಸ್ ಮುಂಬೈಗೆ ಹಾರಿದ್ದಾರೆ ರವೀನಾ.

 

View this post on Instagram

 

And it’s a wrap ! #kgfchapter2 #homewardbound✈️ ♥️♥️😘

A post shared by Raveena Tandon (@officialraveenatandon) on

ರಮಿಕಾ ಸೇನ್ ಪಾತ್ರಕ್ಕಾಗಿ ಕೆಜಿಎಫ್ ಸಿನಿಮಾ ತಂಡದ ಬುಲಾವಿನ ಮೇರೆಗೆ 20 ವರ್ಷದ ನಂತರ ಸ್ಯಾಂಡಲ್​ವುಡ್​​ಗೆ ಬಲಗಾಲಿಟ್ಟಿದ್ರು ರವೀನಾ ಟಂಡನ್​. ಮೊನ್ ಮೊನ್ನೆ ಶೂಟಿಂಗ್​​ಗಾಗಿ ಕೆಜಿಎಫ್​ಗೆ ಬಂದವರು ಈಗ ವಾಪಸ್ ಹೊರಟ್ಟಿದ್ದಾರೆ. ಅದೂ ತನ್ನ ಭಾಗದ ಪೂರ್ತಿ ಕೆಲಸ ಮುಗಿಸಿಕೊಂಡು.

ಕೆಜಿಎಫ್ ಸಿನಿಮಾದ ಶೂಟಿಂಗ್ ಮುಗಿದಿರುವ ಬಗ್ಗೆ ಮತ್ತು ಶೂಟಿಂಗ್ ಅನುಭವದ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ರವೀನಾ ಟಂಡನ್.

ಕೆಜಿಎಫ್ ಚಾಪ್ಟರ್​-2 ಸಿನಿಮಾ ಶೂಟಿಂಗ್​ ಪ್ರಗತಿಯಲ್ಲಿದ್ದು, ಅದಷ್ಟು ಏಪ್ರಿಲ್ ಅಥವಾ ಮೇ ಹೊತ್ತಿಗೆ ಪ್ರೇಕ್ಷಕರ ಮುಂದೆ ಬಂದರು ಅಚ್ಚರಿ ಪಡಬೇಕಿಲ್ಲ.
ಎಂಟರ್​​​​​​​​​​ಟೈನ್ಮೆಂಟ್ ಬ್ಯೂರೋ_ಟಿವಿ5

Recommended For You

About the Author: user

Leave a Reply

Your email address will not be published. Required fields are marked *