ಪರೀಕ್ಷೆ ಬಗ್ಗೆ ಡಿಫ್ರೆಂಟ್ ಆಗಿ ಹಾಡು ಬರೆತಿದ್ದಾರೆ ಯೋಗರಾಜ್ ಭಟ್ರು..!

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರವಾಗ್ತಿದ್ದು, ನಿರ್ದೇಶಕ ಯೋಗರಾಜ್​ ಭಟ್​ ‘ಪರೀಕ್ಷೆನಾ ಬಡಿಯ’ ಅನ್ನೋ ಹಾಡು ಸಿದ್ಧಪಡಿಸ್ತಿದ್ದಾರೆ. ಈಗಾಗಲೇ ಚುನಾವಣೆ, ಜಿಎಸ್​​ಟಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಸಾಹಿತ್ಯ ಬರೆದು ಸಾಂಗ್​ ಕಂಪೋಸ್​ ಮಾಡಿ ಭಟ್ರು ಗೆದ್ದಿದ್ದಾರೆ. ಸದ್ಯ ಯೋಗರಾಜ್​ ಭಟ್​ ನಿರ್ದೇಶನದ ಗಾಳಿಪಟ -2 ಚಿತ್ರ ನಿರ್ಮಾಣವಾಗ್ತಿದ್ದು, ‘ಪರೀಕ್ಷೆ ನಾ ಬಡಿಯ’ ಅನ್ನೋ ಸ್ಪೆಷಲ್​ ಸಾಂಗ್​ ರೆಡಿ ಮಾಡ್ತಿದ್ದಾರೆ.

‘ಬ್ರಹ್ಮಾಸ್ತ್ರ’ ಶೂಟಿಂಗ್​ನಲ್ಲಿ ಬಿಗ್​ಬಿ
ಬಾಲಿವುಡ್​ನ ಮೋಸ್ಟ್ ಎಕ್ಸ್​ಪೆಕ್ಡೆಡ್​ ಬ್ರಹ್ಮಾಸ್ತ್ರ ಸಿನಿಮಾದ ಲಾಸ್ಟ್​ ಶೆಡ್ಯೂಲ್​ ಶೂಟಿಂಗ್​ ಸದ್ಯ ಮುಂಬೈನಲ್ಲಿ ನಡೀತಿದೆ. ಬಿಗ್​ಬಿ ಅಮಿತಾಬ್​ ಬಚ್ಚನ್​ ಮತ್ತು ರಣ್ಬೀರ್ ಕಪೂರ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಮುಂಬೈನಲ್ಲಿ ಹಿಮಾಚಲ ಪ್ರದೇಶದ ಸೆಟ್ ಹಾಕಿದ್ದು, ಸೆಟ್​ನಲ್ಲಿ ಶೂಟಿಂಗ್​ ಮಾಡ್ತಿದೆ ಚಿತ್ರತಂಡ. ಸದ್ಯ ಚಿತ್ರೀಕರಣದ ಕೆಲ ಫೊಟೋಗಳನ್ನ ಬಿಗ್​ಬಿ ತಮ್ಮ ಇನ್ಸ್​ ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *