ಬಾಹುಬಲಿ ಪ್ರಭಾಸ್ ನೆಕ್ಸ್ಟ್ ಮೂವಿ ಯಾರು ನಿರ್ಮಾಣ ಮಾಡ್ತಾರೆ ಗೊತ್ತಾ..?

ಸಾಹೋ ನಂತ್ರ ಬಾಹುಬಲಿ ಪ್ರಭಾಸ್,​​ ಜಾನ್​ ಅನ್ನೋ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ಇದೀಗ ಮತ್ತೊಂದು ಚಿತ್ರಕ್ಕೆ ಗ್ರೀನ್​ ಸಿಗ್ನಲ್​​ ಕೊಟ್ಟಿದ್ದಾರೆ. ಮಹಾನಟಿ ಅನ್ನೋ ಸೂಪರ್​ ಹಿಟ್​ ಸಿನಿಮಾ ಕೊಟ್ಟ ನಾಗ್​ ಅಶ್ವಿನ್​ ಮುಂದಿನ ಚಿತ್ರದಲ್ಲಿ ಯಂಗ್​ ರೆಬಲ್​ ಸ್ಟಾರ್​​ ನಟಿಸಲಿದ್ದಾರೆ. ವೈಜಯಂತಿ ಮೂವೀಸ್​ ಬ್ಯಾನರ್​ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೀತಿದ್ದು, ಅಧಿಕೃತ ಘೋಷಣೆ ಹೊರ ಬಿದ್ದಿದೆ.

ಪ್ರಥಮ್​ ಈಗ ‘99 ಲಕ್ಷಕ್ಕೊಬ್ಬ’
ಒಳ್ಳೆ ಹುಡುಗ ಪ್ರಥಮ್​ ಈಗ ‘99 ಲಕ್ಷಕ್ಕೊಬ್ಬ’ ಅನ್ನೋ ಹೊಸ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಕೋಟಿಗೊಬ್ಬ, ಕೋಟಿಗೊಬ್ಬ-2 ಸಿನಿಮಾಗಳು ಬಂದಿರೋದು, ಕೋಟಿಗೊಬ್ಬ-3 ಸಿನಿಮಾ ಬರ್ತಿರೋದು ಗೊತ್ತೇಯಿದೆ. ಅದಕ್ಕಿಂತ ಭಿನ್ನವಾಗಿ ಪ್ರಥಮ್​ ‘99 ಲಕ್ಷಕ್ಕೊಬ್ಬ’ ಅನ್ನೋ ಟೈಟಲ್​​ನಲ್ಲಿ ಸಿನಿಮಾ ಮಾಡೋಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅಭಿಷೇಕ್​ ಅಂಬರೀಶ್​ ಚಿತ್ರದ ಟೈಟಲ್​ ಪೋಸ್ಟರ್​ ರಿಲೀಸ್​ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *