‘ಸಿದ್ದರಾಮಯ್ಯ ಬಂದಿದ್ದು ವಿಶೇಷ ಅನುಸಂಧಾನದ ಸಂಕೇತ’

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಜರಾಗಿದ್ದು, ಸಿದ್ದರಾಮಯ್ಯ ಉಪಸ್ಥಿತಿಗೆ ಎಸ್.ಎಂ.ಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಈ ಸಮಾರಂಭಕ್ಕೆ ಬಂದಿದ್ದು ನನಗೆ ವಿಶೇಷ ಸಮಾಧಾನ ತಂದಿದೆ. ರಾಜಕಾರಣ ಹೀಗೆಯೇ ಇರಬೇಕು. ಭಿನ್ನಾಭಿಪ್ರಾಯಗಳಿರಬಹುದು. ಭಿನ್ನಾಭಿಪ್ರಾಯ ಹೊರತಾಗಿ ಮಾನವೀಯ ಸಂಬಂಧ, ಮೌಲ್ಯ ಮುಖ್ಯ. ಸಿದ್ದರಾಮಯ್ಯ ಬಂದಿದ್ದಕ್ಕೆ ವಿಶೇಷ ಅರ್ಥ ಇದೆ. ರಾಜಕಾರಣ ಹೊರಗೆ ಮಾತ್ರ. ಇಲ್ಲಿ ಸೇರಿರುವುದು ರಾಜ್ಯದ ಅಭಿವೃದ್ಧಿಗೆ ತನ್ನೆಲ್ಲ ಶಕ್ತಿ ಧಾರೆ ಎರೆದ ನಾಯಕನಿಗೆ ಅಭಿಮಾನ, ಗೌರವ ತೋರಲು. ಇದೇ ಕರ್ನಾಟಕದ ಸಂಪ್ರದಾಯ. ಸಿದ್ದರಾಮಯ್ಯ ಬಂದಿದ್ದು ವಿಶೇಷ ಅನುಸಂಧಾನದ ಸಂಕೇತ ಎಂದು ಎಸ್‌.ಎಂ.ಕೃಷ್ಣ ಹೇಳಿದ್ದಾರೆ.

ಅಲ್ಲದೇ, ಯಡಿಯೂರಪ್ಪ ನನಗಿಂತ ಹತ್ತು ವರ್ಷ ಚಿಕ್ಕವರು. ನಾನು ಯಡಿಯೂರಪ್ಪ ಅವರಿಗೆ ಶುಭ ಹಾರೈಸಲೂಬಹುದು. ಇದು ನನ್ನ ವಯಸ್ಸು ತಂದು ಕೊಟ್ಟಿರುವ ಸನ್ನಿವೇಶ. ಯಡಿಯೂರಪ್ಪ ಅಭಿವೃದ್ಧಿ ಕಾರ್ಯ ಹೀಗೇ ಮುಂದುವರೆಸಲಿ ಎಂದು ಎಸ್‌.ಎಂ.ಕೃಷ್ಣ ವಿಶ್ ಮಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *