‘ನನ್ನ 60ನೇ ಜನ್ಮದಿನ ಸ್ಮರಣೀಯವಾಗಿತ್ತು, ಅದನ್ನು ನಾನು ಮರೆಯಲು ಸಾಧ್ಯವೇ ಇಲ್ಲ’

ಬೆಂಗಳೂರು: ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದ್ದು, ನನ್ನ 60ನೇ ಜನ್ಮದಿನ ಸ್ಮರಣೀಯವಾಗಿತ್ತು. 60ನೇ ಜನ್ಮದಿನದಂದು ಅಟಲ್ ಬಿಹಾರಿ ವಾಜಪೇಯಿ ಆಗಮಿಸಿದ್ರು. ನನಗೂ ನನ್ನ ಶ್ರೀಮತಿಯವರಿಗೂ ವಾಜಪೇಯಿ ಸನ್ಮಾನ ಮಾಡಿದ್ರು. ಆ ಕಾರ್ಯಕ್ರಮ ಬಳಿಕ ಇವತ್ತಿನ ಕಾರ್ಯಕ್ರಮ ಸ್ಮರಣೀಯ. ರಾಜನಾಥ್ ಸಿಂಗ್ ಅವರು ಬಂದಿದ್ದು ಬಹಳ ಸಂತೋಷ ತಂದಿದೆ ಎಂದು ಹೇಳಿದ್ದಾರೆ.

ಅಲ್ಲದೇ, 60 ವರ್ಷದ ಸಂಭ್ರಮದಲ್ಲಿ ವಾಜಪೇಯಿ ಅವ್ರು ಸನ್ಮಾನಿಸಿದ್ದನ್ನ ನಾನು ಮರೆಯಲ್ಲ. ಸಿದ್ದರಾಮಯ್ಯ ಅವ್ರು ಭಾಗವಹಿಸಿರೋದೇ ಒಂದು ವಿಶೇಷ. ಅವ್ರ ಆತ್ಮೀಯತೆಗೆ ನಾನು ಋಣಿ. ಸಿದ್ದರಾಮಯ್ಯ ಹಾರೈಸಿದ್ದು ಈ ಕಾರ್ಯಕ್ರಮಕ್ಕೆ ಶೋಭೆ ತಂದಿದೆ ಎಂದು ಹೇಳಿದ್ದಾರೆ.

ನನ್ನ ಜೀವನದಲ್ಲಿ ಶಿಕಾರಿಪುರದ ಜನರನ್ನು ಮರೆಯಲು ಸಾಧ್ಯವಿಲ್ಲ. ಕೇಂದ್ರ ನಾಯಕರ ಸಹಕಾರದಿಂದ ನಾನು ಇಲ್ಲಿ ನಿಂತಿದ್ದೇನೆ. ಮೋದಿ, ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಹಿರಿಯರು ನನಗೆ ಶುಭ ಕೋರಿದ್ರು. ಮೂರುವರೆ ವರ್ಷ ಎಲ್ಲ ಸಹಕಾರದಿಂದ ನಾಡಿನ ಅಭಿವೃದ್ಧಿಗೆ ಗಮನ ಹರಿಸುತ್ತೇನೆ. ನೀರಾವರಿ, ರೈತರ ಜೀವನ ಅಭಿವೃದ್ಧಿ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ಮಾಡುತ್ತೇನೆ. ಇದಕ್ಕೆ ಸಿದ್ದರಾಮಯ್ಯರ ಸಂಪೂರ್ಣ ಬೆಂಬಲ ಇದೆ ಅಂತ ಭಾವಿಸಿದ್ದೇನೆ ಎಂದು ಹೇಳಿದ ಯಡಿಯೂರಪ್ಪ ಈ ಸಂದರ್ಭದಲ್ಲಿ ಅನಂತ್‌ಕುಮಾರ್ ಇರಬೇಕಿತ್ತು ಎಂದು ಹೇಳಿದರು.

Recommended For You

About the Author: user

Leave a Reply

Your email address will not be published. Required fields are marked *