Top

ಊಟಕ್ಕೂ ಮೊದಲು ಕೊಡಿ ಸ್ಟಾರ್ಟರ್ಸ್, ಅತಿಥಿಗಳನ್ನ ಮಾಡಿ ಇಂಪ್ರೆಸ್..!

ಊಟಕ್ಕೂ ಮೊದಲು ಕೊಡಿ ಸ್ಟಾರ್ಟರ್ಸ್, ಅತಿಥಿಗಳನ್ನ ಮಾಡಿ ಇಂಪ್ರೆಸ್..!
X

ಮೊದಲೆಲ್ಲಾ ಯಾರದ್ದಾದ್ರೂ ಮನೆಗೆ, ಅಥವಾ ದೊಡ್ಡ ದೊಡ್ಡ ಹೊಟೇಲ್‌ಗಳಿಗೆ ಊಟಕ್ಕೆ ಹೋದ್ರೆ ಅನ್ನ, ಸಾರು, ಪಲ್ಯ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಪಾಯಸ, ಹೋಳಿಗೆ, ಕೊನೆಗೆ ಮೊಸರು ಮಜ್ಜಿಗೆ. ಇಷ್ಟಕ್ಕೇ ಭೂರೀ ಭೋಜನ ಮುಗಿದು ಹೋಗ್ತಿತ್ತು.

ಆದ್ರೀಗ ಜಮಾನ ಬದಲಾಗಿದೆ. ಈಗ ಊಟ ಏನಿದ್ರು ಸ್ಟಾರ್ಟರ್‌ನಿಂದ ಸ್ಟಾರ್ಟ್ ಆದ್ರೆ, ಐಸ್‌ಕ್ರೀಮ್‌ನಿಂದಾನೇ ಎಂಡ್ ಆಗೋದು. ಪಾನ್ ತಿನ್ನೋ ಅಭ್ಯಾಸ ಇದ್ರೆ ಅದೂ ಆ್ಯಡ್ ಮಾಡ್ಬಹುದು.

ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಂತೂ ವೆರೈಟಿ ವೆರೈಟಿ ಸ್ಟಾರ್ಟರ್ಸ್ ಇರತ್ತೆ. ವಿವಿಧ ತರಹದ ಮಂಚೂರಿ, ಕಟ್ಲೇಟ್ಸ್, ಪಕೋಡಾಗಳು, ಮಸಾಲಾ ಪಾಪಡ್, ವೆರೈಟಿ ವೆರೈಟಿ ಸೂಪ್‌ಗಳು. ಹೀಗೆ ಬಗೆ ಬಗೆಯ ಸ್ಟಾರ್ಟರ್ಸ್‌ಗಳನ್ನ ನೀವು ಸವಿಯಬಹುದು.

ಇನ್ನು ಇತ್ತೀಚೆಗೆ ಮನೆಗೆ ಅತಿಥಿಗಳು ಬರ್ತಾರೆ ಅಂತಾ ಗೊತ್ತಾದ್ರೆ ಮಹಿಳೆಯರು ಅಡುಗೆ ಏನು ಮಾಡೋದು ಅಂತಾ ಯೋಚನೆ ಮಾಡೋಕ್ಕೂ ಮೊದಲು, ಸ್ಟಾರ್ಟರ್ಸ್ ಏನು ಮಾಡೋದು ಅಂತಾ ಚಿಂತೆ ಮಾಡ್ತಾರೆ. ಈ ಚಿಂತೆಗೆ ಬ್ರೇಕ್ ಹಾಕೋಕ್ಕೆ ಅಂತಾನೇ ಇವತ್ತು ಟೇಸ್ಟಿ ಮತ್ತು ಈಸಿಯಾದ ಎರಡು ಸ್ಟಾರ್ಟರ್‌ ರೆಸಿಪಿನಾ ನಾವು ತಿಳಿಸಿಕೊಡ್ತೀವಿ.

ಮಸಾಲಾ ಪಾಪಡ್‌: ಹೆಲ್ದಿ ಮತ್ತು ಟೇಸ್ಟಿಯಾಗಿ ಮಾಡೋ ಸ್ಟಾರ್ಟರ್‌ಗಳಲ್ಲಿ ಮಸಾಲಾ ಪಾಪಡ್ ಕೂಡ ಒಂದು. ಸಾಫ್ಟ್ ಸಲಾಡ್‌ ಜೊತೆ ಕ್ರಿಸ್ಪಿ ಪಾಪಡ್ ಕಾಂಬಿನೇಷನ್ ಸಖತ್ ರುಚಿಯಾಗಿರತ್ತೆ. ಒಂದ್ಸಲಾ ನೀವೂ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿ: 2 ಉದ್ದಿನ ಹಪ್ಪಳ, ಒಂದು ಟೊಮೆಟೋ, ಒಂದು ಈರುಳ್ಳಿ, ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, ಚಿಟಿಕೆ ಉಪ್ಪು, ಚಿಟಿಕೆ ಪೆಪ್ಪರ್ ಪೌಡರ್, ಒಂದು ಚಮಚ ನಿಂಬೆಹುಳಿ, ಹುಳಿ- ಖಾರ ಹೆಚ್ಚು ಬೇಕಾದ್ದಲ್ಲಿ ಪೆಪ್ಪರ್ ಪೌಡರ್, ನಿಂಬೆ ರಸ ಹೆಚ್ಚು ಬಳಸಬಹುದು.

ಮಾಡುವ ವಿಧಾನ: ಟೊಮೆಟೋ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಪೆಪ್ಪರ್ ಪೌಡರ್, ನಿಂಬೆರಸ ಬೆರೆಸಿ ಸಲಾಡ್ ತಯಾರಿಸಿಕೊಳ್ಳಿ. ಕಾದ ಎಣ್ಣೆಯಲ್ಲಿ ಹಪ್ಪಳ ಕರೆಯಿರಿ. ಹಪ್ಪಳದ ಮೇಲೆ ಸಲಾಡ್ ಹರಡಿ, ಕ್ರಿಸ್ಪಿ - ಕ್ರಂಚಿ ಮಸಾಲಾ ಪಾಪಡ್ ತಕ್ಷಣ ಸೇವಿಸಿ(ಹೆಚ್ಚು ಹೊತ್ತು ಇಟ್ಟರೆ ಹಪ್ಪಳ ಮೆದುವಾಗಿ ರುಚಿ ಕಳೆದುಕೊಳ್ಳುತ್ತದೆ).

ವೆಜಿಟೇಬಲ್ ಸೂಪ್: ವಿಟಮಿನ್ ಸಿ ಒಳಗೊಂಡ ವೆಜಿಟೇಬಲ್ ಸೂಪ್ ಸೇವನೆ ಆರೋಗ್ಯಕ್ಕೆ ಉತ್ತಮ.

ಬೇಕಾಗುವ ಸಾಮಗ್ರಿ: 4 ಎಸಳು ಬೆಳ್ಳುಳ್ಳಿ, ಒಂದು ಈರುಳ್ಳಿ, ಸ್ವಲ್ಪ ಶುಂಠಿ, ಒಂದು ಹಸಿಮೆಣಸಿನಕಾಯಿ, ಒಂದು ಕಪ್ಪ ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ಸ್, ಸ್ವೀಟ್‌ ಕಾರ್ನ್, ಕ್ಯಾರೆಟ್, ಬೀನ್ಸ್, ಕ್ಯಾಬೇಜ್ ಮಿಕ್ಸ್, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಪೆಪ್ಪರ್ ಪೌಡರ್, ಕೊಂಚ ನಿಂಬೆ ರಸ, ಒಂದು ಸ್ಪೂನ್ ಕಾರ್ನ್ ಫ್ಲೋರ್, ಎರಡು ಕಪ್ ನೀರು.

ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್ ಹಾಕಿ ಹುರಿಯಿರಿ, ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಸ್ಪ್ರಿಂಗ್ ಆನಿಯನ್ಸ್, ಸ್ವೀಟ್ ಕಾರ್ನ್, ಕ್ಯಾರೆಟ್, ಬಿನ್ಸ್, ಕ್ಯಾಬೇಜ್ ಮಿಕ್ಸ್ ಹಾಕಿ ಹುರಿಯಿರಿ. ಇದಕ್ಕೆ ಅಗತ್ಯವಿದ್ದಷ್ಟು ಉಪ್ಪು, ನೀರು ಹಾಕಿ ಬೇಯಿಸಿ. ಈಗ ಒಂದು ಕಪ್‌ನಲ್ಲಿ ಕಾರ್ನ್ ಫ್ಲೋರ್ ಮತ್ತು ನೀರು ಹಾಕಿ ಗಂಟು ಬರದಂತೆ ಸ್ಮೂತ್ ಆದ ಪೇಸ್ಟ್ ತಯಾರಿಸಿ. ಈ ಪೇಸ್ಟನ್ನು ಕುದಿಯುತ್ತಿರುವ ಸೂಪ್‌ಗೆ ಸೇರಿಸಿ, ಚೆನ್ನಾಗಿ ಕದಡಿ. ಈ ಸೂಪನ್ನು ಬೌಲ್‌ಗೆ ಹಾಕಿ, ಪೆಪ್ಪರ್ ಪೌಡರ್, ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಷ್ ಮಾಡಿ ಸವಿಯಲು ನೀಡಿ.

Next Story

RELATED STORIES