Top

ಮೌನಂ ರಿವ್ಯೂ ರಿಪೋರ್ಟ್: ಚಿತ್ರಕ್ಕೆ ಸ್ಟಾರ್​ಗಳಿಂದ ಸ್ಟಾರ್ ಪ್ರೇಕ್ಷಕರ ತನಕ ಮೆಚ್ಚುಗೆ

ಮೌನಂ ರಿವ್ಯೂ ರಿಪೋರ್ಟ್: ಚಿತ್ರಕ್ಕೆ ಸ್ಟಾರ್​ಗಳಿಂದ ಸ್ಟಾರ್ ಪ್ರೇಕ್ಷಕರ ತನಕ ಮೆಚ್ಚುಗೆ
X

ಅವಿನಾಶ್​​.. ಪೋಷಕ ಪಾತ್ರಗಳ ಮೂಲಕ , ಪವರ್​​ಫುಲ್​ ನೆಗೆಟಿವ್ ಶೇಡ್​​ವುಳ್ಳ​​ ಪಾತ್ರಗಳ ಮೂಲಕ ಪ್ರತಿ ಸಿನಿಮಾದಲ್ಲಿಯೂ ಕಡಿಮೆ ಸಮಯದಲ್ಲಿ ಫುಲ್ ಸ್ಕೋರ್ ಮಾಡುತ್ತ ಬಂದಿರುವ ಟ್ಯಾಲೆಂಟೆಡ್ ನಟಮಹಾಶಯ. ಆದ್ರೆ ಈಗ ಅವಿನಾಶ್​​ ಫುಲ್ ಟೈಮ್ ಸ್ಕ್ರೀನ್​ ಮೇಲೆ ನಿಂತು ಮೌನಂ ಚಿತ್ರದ ಮೂಲಕ ಫುಲ್ ಸ್ಕೋರ್ ಮಾಡ್ತಿದ್ದಾರೆ ​​. ಈ ಮೌನಂ ಸಿನಿಮಾ ಇಂದು ರಾಜ್ಯದ್ಯಂತ ತೆರೆಕಂಡಿದೆ.

ಫಸ್ಟ್ ಹಾಫ್: ಅಪ್ಪನ ಪಾಠ + ಪ್ರೀತಿಯ ಆಟ = ಮೌನಂ

2nd ಹಾಫ್ : ಅಪ್ಪನ ಪ್ರೀತಿ + ಮಗನ ಫಜೀತಿ = ಮೌನಂ

ಮೌನಂ ಚಿತ್ರಕ್ಕೆ ಸ್ಟಾರ್​ಗಳಿಂದ ಸ್ಟಾರ್ ಪ್ರೇಕ್ಷಕರ ತನಕ ಮೆಚ್ಚುಗೆ

ಅವಿನಾಶ್ ಅವರ ಅದ್ಭುತ ನಟನೆಗೆ ಸಿಕ್ತಿದೆ ಫುಲ್ ಮಾರ್ಕ್ಸ್​​..!

ಮೌನಂ.. ಅವಿನಾಶ್ ಅವರ ಸಿನಿ ಕರಿಯರ್​​ಗೆ ಇದೊಂದು ವಿಶೇಷ ಸಿನಿಮಾ. ಚಿತ್ರದೂದ್ದಕ್ಕು ಅವಿನಾಶ್ ಫುಲ್ ಮಾರ್ಕ್ಸ್​​​​​​ ಗಿಟ್ಟಿಸಿಕೊಳ್ಳುತ್ತಾ ಸೀನ್‌ನಿಂದ ಸೀನ್​ಗೆ ಅಭಿನಯದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾ ಅವಿನಾಶ್ ಪ್ರೇಕ್ಷಕರ ಮನ ಗೆಲ್ಲುತ್ತಾರೆ.

ಮೌನಂ ಒನ್ ಲೈನ್ ಸ್ಟೋರಿ

ತಂದೆ ಮತ್ತು ಅವನ ಮುದ್ದಿನ ಮಗ. ಮಗನಿಗೆ ತಾಯಿ ಇರೋಲ್ಲ , ಅಪ್ಪನಿಗೆ ಹೆಂಡತಿ ಇರೋದಿಲ್ಲ. ಆದ್ರೆ ಅಪ್ಪನಿಗೆ ಮಗ, ಮಗನಿಗೆ ಅಪ್ಪನೇ ಪ್ರೀತಿಯ ಪ್ರಪಂಚ. ಮಗ ದೊಡ್ಡವನಾದ ಮೇಲೆ ಗೂಡು ಬಿಟ್ಟು ಮರಿ ಹಕ್ಕಿ ಹಾರಿದಂತೆ, ಮಗನೂ ಅಪ್ಪನಿಂದ ದೂರ ಆಗುತ್ತ , ಪ್ರೇಯಸಿಯ ಪ್ರೀತಿಗೆ ಹತ್ತಿರವಾಗುತ್ತಾನೆ. ಆಗ ತಂದೆ ಮಗ ಪ್ರೀತಿಯ ನಿರೀಕ್ಷೆಯಿಂದ ಬೇಸರವಾಗುತ್ತಾನೆ. ಮಗನಿಗಾಗಿ ತನ್ನ ಜೀವನದ ಅಮೂಲ್ಯ ಸಮಯ ಹಾಳು ಮಾಡಿಕೊಂಡನೆಲ್ಲ ಎಂದು ಕೊರಗುತ್ತಾನೆ. ಆಗ ಅಪ್ಪನಲ್ಲಿ ವ್ಯಾಪಕ ಬದಲಾವಣೆ ಕಂಡುಬರುತ್ತದೆ. ಹೀಗೆ ಕಥೆ ಸಾಗುವಾಗ ಆಕಸ್ಮಿಕವಾಗಿ ತಂದೆಯೇ ಮಗನ ಪ್ರೇಯೆಸಿಯನ್ನು ಪ್ರೀತಿಸುತ್ತಾನೆ..! ಆಮೇಲೆ ಏನಾಗುತ್ತೆ ಅನ್ನೋದಕ್ಕೆ ಮೌನಂ ಸಿನಿಮಾವನ್ನು ಥಿಯೇಟರ್​​ಗೆ ಹೋಗಿ ನೋಡಬೇಕು.

ಅವಿನಾಶ್ ಅವರ ಅದ್ಭುತ ನಟನೆ ಈ ಚಿತ್ರದ ಜೀವಾಳವಾದ್ರೆ ಇನ್ನುಳಿದ ಪಾತ್ರಗಳು ಚಿತ್ರದ ಭಾವಾಳ. ನಾಯಕನಾಗಿ ಹೊಸ ಪ್ರತಿಭೆ ಬಾಲಾಜಿ ಶರ್ಮಾ ಮಿಂಚಿದ್ದಾರೆ. ಬೋಲ್ಡ್​ ಅಂಡ್ ಬ್ಯೂಟಿಫುಲ್​ ರೋಲ್​​ನಲ್ಲಿ ಇಷ್ಟಕಾಮ್ಯದ ಬೆಡಗಿ ಮಯೂರಿ ಮಿನುಗಿದ್ದಾರೆ. ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ , ನಿತೇಶ್ , ಹನುಮಂತೇ ಗೌಡ , ಕೆಂಪೇಗೌಡ ಸೇರಿದಂತೆ ಅನೇಕ ಪ್ರತಿಭಾವಂತರು ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಪೋಷಕ ನಟ ಅವಿನಾಶ್ ತಮ್ಮಗೆ ಸಿಕ್ಕ ಅನನ್ಯ ಅವಕಾಶವನ್ನು ಅದ್ಭುತವಾಗಿ ಬಾಚಿಕೊಂಡಿದ್ದಾರೆ. ಆದ್ರೆ ಸಿನಿಮಾದ ಮೇಕಿಂಗ್ ಶೈಲಿಯಲ್ಲಿ ಕೊಂಚ ಬದಲಾವಣೆ ಬೇಕಿತ್ತು , ಕೊಂಚ ವೇಗ ಹೆಚ್ಚಿಸಬೇಕಿತ್ತು. ಆದ್ರೆ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಆಗಿರೋ ಕಾರಣ ಡೈರೆಕ್ಟರ್ ನಿರ್ಧಾರ ಸರಿ ಅನ್ನಿಸುತ್ತದೆ. ಫೈನಲಿ ಒಂದೊಳ್ಳೆ ಮನರಂಜನೆ ಸಿನಿಮಾ ಮೌನ ಎಂದು ಗಟ್ಟಿಗೆಯಾಗಿ ಹೇಳಬಹುದು.

3.5 / 5

ಶ್ರೀಧರ್ ಶಿವಮೊಗ್ಗ _ಎಂಟರ್​​​​ಟೈನ್ಮೆಂಟ್ ಬ್ಯೂರೋ_ಟಿವಿ5

Next Story

RELATED STORIES