‘ಬೈಸಿಕಲ್​ ಕೊಡುವ ಬದಲು ಅಕೌಂಟ್​ಗೆ ಹಣ ಹಾಕಿ’ – ಶಿವಲಿಂಗೇಗೌಡ

ಬೆಂಗಳೂರು: ಸರ್ಕಾರ ಹೈಸ್ಕೂಲು ವಿದ್ಯಾರ್ಥಿಗಳಿಗೆ ಮುರುಕಲು ಬೈಸಿಕಲ್ ಕೊಡ್ತಿದೆ, ಆ ಸೈಕಲ್ ಮೂರು ದಿನವೂ ಬಾಳಿಕೆ ಬರಲ್ಲ ಎಂದು ಜೆಡಿಎಸ್​ನ ಸದಸ್ಯ ಶಿವಲಿಂಗೇಗೌಡ ಅವರು ಹೇಳಿದರು.

ವಿಧಾನಸೌಧದಲ್ಲಿ ನಡೆದ ವಿಧಾನ ಪರಿಷತ್​ ಕಲಾಪದಲ್ಲಿಂದು ಬೈಸಿಕಲ್​ ವಿಷಯ ಪ್ರಸ್ತಾಪ ಮಾಡಿ ಮಾತನಾಡಿದ ಅವರು, ಹುಡುಗರು ಸರ್ಕಾರವನ್ನು ಬೈದುಕೊಳ್ಳುತ್ತಿದ್ದಾರೆ. ಅದಕ್ಕೆ ಬದಲಾಗಿ ಅವರ ಅಕೌಂಟ್​ಗೆ ಹಣವನ್ನು ಹಾಕಿ, ಅವರಿಗೆ ಬೇಕಾದ ಕಂಪನಿಯ ಸೈಕಲ್ ತೆಗೆದುಕೊಳ್ತಾರೆ ಎಂದು ಸರ್ಕಾರದ ಬೈಸಿಕಲ್ ಯೋಜನೆಗೆ ಶಿವಲಿಂಗೇಗೌಡ ಅವರು ವ್ಯಂಗ್ಯವಾಡಿದರು.

ಇನ್ನು ಇದೇ ವೇಳೆ ಮಾತಿಗಿಳಿದ ಬಿಜೆಪಿ ಸದಸ್ಯ ಹರತಾಳು ಹಾಲಪ್ಪ ಅವರು, ಯಡಿಯೂರಪ್ಪನವರು ಮೊದಲ ಬಾರಿಗೆ ಸೈಕಲ್ ಕೊಟ್ಟರು, ಈಗಲೂ ಅಲ್ಲೊಂದು-ಇಲ್ಲೊಂದು ಬೈಸಿಕಲ್ ಕಾಣಿಸುತ್ತವೆ. ಯಡಿಯೂರಪ್ಪ ಹುಡುಗಿಯರಿಗೆ ಬೈಸಿಕಲ್ ಕಲಿಸುತ್ತಾರಾ ಅಂತಿದ್ದರು. ಬೈಸಿಕಲ್ ಬಗ್ಗೆ ಜನ ಆಡಿಕೊಳ್ಳುತ್ತಿದ್ದರು. ಹೆಣ್ಣು ಮಕ್ಕಳು ಸೈಕಲ್ ಹೊಡೆಯೋದನ್ನೂ ಕಲಿತರು, ಶಾಲೆಗಳಲ್ಲಿ ಹೆಣ್ಣು ಮಕ್ಕಳ ಹಾಜರಾತಿಯೂ ಹೆಚ್ಚಾಯ್ತು. ಶೇ. 65ರಷ್ಟು ಹೆಣ್ಣು ಮಕ್ಕಳು ಪದವಿ ಪಡೆಯುತ್ತಿದ್ದಾರೆ ಎಂದು ಜೆಡಿಎಸ್​ ಸದಸ್ಯ ಶಿವಲಿಂಗೇಗೌಡ ಅವರ ವ್ಯಂಗ್ಯದ ಮಾತಿಗೆ ಹರತಾಳು ಹಾಲಪ್ಪ ಅವರು ತಿರುಗೇಟು ನೀಡಿದರು.

ಶೂನ್ಯ ವೇಳೆಯಲ್ಲಿ ತೆಂಗಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದ ಶಿವಲಿಂಗೇಗೌಡ ಅವರು, ತೆಂಗಿನ ಬೆಲೆ ಕ್ವಿಂಟಲ್​ಗೆ 9,500 ಕುಸಿದಿದೆ. 18,000 ರೂ. ನಿರೀಕ್ಷಿಸಿದ್ದ ತೆಂಗು ಬೆಳೆಗಾರರಿಗೆ ಆಘಾತವಾಗಿದೆ. ನಾಫೆಡ್ ಮೂಲಕ ಬೆಂಬಲ ಬೆಲೆಯಲ್ಲಿ ತೆಂಗು ಖರೀದಿ ಮಾಡಬೇಕು. ಬೆಂಬಲ ಬೆಲೆ ಘೋಷಿಸದಿದ್ದರೆ ರೈತರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ರಾಗಿ ಬೆಳೆಗೂ ಇದೇ ರೀತಿ ಬೆಲೆ ಕುಸಿತವಾಗಿದೆ ಎಂದು ವಿಧಾನ ಪರಿಷತ್​ ಕಲಾಪದಲ್ಲಿ ಜೆಡಿಎಸ್​ ಸದಸ್ಯ ಶಿವಲಿಂಗೇಗೌಡ ಅವರು ಮಾತನಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *