‘ಬಿಜೆಪಿಯವರು ದಯವಿಟ್ಟು ತಿಳಿದುಕೊಳ್ಳಿ ಅಧಿಕಾರ ಶಾಶ್ವತ ಅಲ್ಲವೇ ಅಲ್ಲ’

ಬೆಂಗಳೂರು: ಕಲಬುರಗಿ, ಬೆಂಗಳೂರು ಬೇರೆಡೆ ಸಿಎಎ ವಿರುದ್ಧ ಹೋರಾಟ ನಡೆದಿತ್ತು. ಎಲ್ಲಿಯೂ ಹಿಂಸಾಚಾರ, ಅಹಿತಕರ ಘಟನೆ ನಡೆದಿಲ್ಲ ಆದರೆ ಮಂಗಳೂರಿನಲ್ಲಿ ನಡೆದಾಗ ಮಾತ್ರ ಪೊಲೀಸರು ಈ ರೀತಿ ಮಾಡಿದರು ಎಂದು ವಿಧಾನ ಪರಿಷತ್ ವಿಪಕ್ಷ​ ನಾಯಕ ಎಸ್​.ಆರ್​.ಪಾಟೀಲ್​ ಅವರು ಹೇಳಿದರು.

ವಿಧಾನಸೌಧದಲ್ಲಿ ನಡೆದ ಸದನದಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ, ಗೃಹ ಮಂತ್ರಿ ಮಾತು ಮೀರಿ ಪೊಲೀಸರ ಕ್ರಮ ತೆಗೆದುಕೊಂಡರಾ(?) ಹಾಗಾದ್ರೆ ಸಿಎಂ, ಗೃಹಮಂತ್ರಿ ಮೀರಿಸುವ ಶಕ್ತಿ ಇದೆಯಾ(?) ಹಾಗಾದ್ರೆ ಸಿಎಂ, ಗೃಹ ಮಂತ್ರಿ ಅಸಮರ್ಥರು ಎನ್ನುವುದು ನನ್ನ ಭಾವನೆ ಎಂದು ಹೇಳಿದರು.

ಇನ್ನು ನಾನು, ಎಂ.ಬಿ.ಪಾಟೀಲ್ ಮತ್ತು ರಮೇಶ್ ಕುಮಾರ್ ಮಂಗಳೂರಿಗೆ ತೆರಳಿದ್ದೆವು. ಮೃತರ ಕುಟುಂಬಕ್ಕೆ ಸಮಾಧಾನ ಹೇಳಲು ಹೋಗಿದ್ದೆವು. ಪೊಲೀಸ್ ಆಯುಕ್ತರಿಗೆ ನಾವು ಮೊದಲೇ ಮಾಹಿತಿ ನೀಡಿದ್ದೆವು. ವಿಮಾನ ನಿಲ್ದಾಣಕ್ಕೆ ಇಳಿದ ನಂತರ ನಮಗೆ ಹೋಗಲು ಬಿಡಲಿಲ್ಲ, ಅಧಿಕಾರ ಶಾಶ್ವತ ಅಲ್ಲವೇ ಅಲ್ಲ, ಬಿಜೆಪಿಯವರು ದಯವಿಟ್ಟು ತಿಳಿದುಕೊಳ್ಳಿ ಎಂದು ಎಸ್.ಆರ್​.ಪಾಟೀಲ್​ ಅವರು ಆಡಳಿತ ಪಕ್ಷದ ನಾಯಕರನ್ನು ಕುಟುಕಿದರು.

Recommended For You

About the Author: user

Leave a Reply

Your email address will not be published. Required fields are marked *