‘ಕೈ ನಾಯಕರಿಗೆ ಭಾರತದ ಮೇಲೆ ಪ್ರೀತಿ ಇಲ್ಲ, ಪಾಕಿಸ್ತಾನದ ಮೇಲೆ ಪ್ರೀತಿ’ – ಶ್ರೀರಾಮುಲು

ಬೀದರ್: ಕೈ ನಾಯಕರಿಗೆ ಭಾರತದ ಮೇಲೆ ಪ್ರೀತಿ ಇಲ್ಲ, ಅವರಿಗೆಲ್ಲ ಪಾಕಿಸ್ತಾನದ ಮೇಲೆ ಪ್ರೀತಿ, ಇದಕ್ಕಾಗಿ ವೋಟ್​ ಬ್ಯಾಂಕ್​ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದರು.

ಬೀದರ್​ನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಭಾರತದಲ್ಲಿದ್ದವರು ಭಾರತ ಮಾತೆಗೆ ಜೈ ಅನ್ನಬೇಕೇ ಹೊರತು ಪಾಕಿಸ್ತಾನಕ್ಕಲ್ಲ, ಪಾಕಿಸ್ತಾನಕ್ಕೆ ಜೈ ಎನ್ನುವರನ್ನು ನೋಡುತ್ತ ಕೈಕಟ್ಟಿ ಕುಳಿತುಕೊಳ್ಳುವರಲ್ಲ ಎಂದು ತಿಳಿಸಿದರು.

ಬೀದರ್​ನ ಶಾಹೀನ್ಶಿಕ್ಷಣ ಸಂಸ್ಥೆ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇಂತಹ ಪ್ರಕರಣ ಹಿಡಿದು ಸದನ ಬಹಿಷ್ಕಾರ ಹಾಕೋದು ಸರಿಯಲ್ಲ, ಕೈ ನಾಯಕರು ಏನು ಮಾಡಿಕೊಂಡರು ಚಿಂತೆಯಿಲ್ಲ, ಅವರು ಕೇಳುವ ಎಲ್ಲ ವಿಚಾರಗಳ ಚರ್ಚೆಗೂ ನಾವು ಸಿದ್ಧ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಅವರು ತಿಳಿಸಿದರು.

Recommended For You

About the Author: user

Leave a Reply

Your email address will not be published. Required fields are marked *