ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಯಡಿಯೂರಪ್ಪ ಸಾಥ್

ತವರು ಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ಮೋದಿ ಇಂದು 30 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಪೈಕಿ ವಾರಾಣಸಿ ಮತ್ತು ಇಂದೋರ್ ನಡುವೆ ಚಲಿಸುವ ಕಾಶಿ ಮಹಾಕಲ್ ರೈಲು ಕೂಡ ಒಂದಾಗಿದೆ. ಈ ರೈಲು ಉತ್ತರಪ್ರದೇಶದಲ್ಲಿರುವ ಮೂರು ಜ್ಯೋತಿರ್ಲಿಂಗ ಹೊಂದಿರುವ ವಾರಾಣಸಿ, ಉಜ್ಜೈನಿ ಮತ್ತು ಓಂಕಾರೇಶ್ವರ ಕ್ಷೇತ್ರ ನಡುವೆ ಸಂಪರ್ಕ ಕಲ್ಪಿಸಲಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ 430 ಹಾಸಿಗೆಯುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ 74 ಬೆಡ್‌ಗಳ ಮನೋವೈದ್ಯಶಾಸ್ತ್ರ ವಿಭಾಗಕ್ಕೆ ಚಾಲನೆ ಸಿಕ್ಕಿತು.

ಕಾಶಿ ಏಕ್, ರೂಪ್ ಅನೇಕ್ ಶೀರ್ಷಿಕೆಯಡಿ ಮೋದಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದಕ್ಕೂ ಮೊದಲು ಭಾರತೀಯ ಜನಸಂಘ ಮುಖಂಡರಾದ ಪಂಡಿತ್ ದೀನ್ ದಯಾಳ್ ಉಪಾದ್ಯಾಯ ಅವರ 63 ಅಡಿ ಎತ್ತರದ ಪಂಚಲೋಧ ಪ್ರತಿಮೆ ಲೋಕಾರ್ಪಣೆಗೊಳಿಸಿದರು. ಚಂಡೌಲಿಯಲ್ಲಿರುವ ಪಂಡಿತ್ ದೀನ್ ದಾಯಾಳ್ ಉಪಾದ್ಯಾಯ ಸ್ಮಾರಕ ಕೇಂದ್ರದಲ್ಲಿ ಈ ಪ್ರತಿಮೆ ನಿರ್ಮಿಸಲಾಗಿದೆ.

ಪ್ರಧಾನಿ ಮೋದಿ ವಾರಾಣಸಿಯಲ್ಲಿರುವ ಜಂಗಮವಾಡಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನಮಂತ್ರಿಗಳಿಗೆ ಕರ್ನಾಟಕ ಸಿಎಂ ಯಡಿಯೂರಪ್ಪ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಜಾರಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ. ಜಮ್ಮ-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ದೃಷ್ಟಿಯಲ್ಲಿ ಅತ್ಯಂತ ಮುಖ್ಯ ಎನಿಸಿದೆ. ಯಾರು ಎಷ್ಟೇ ಒತ್ತಡ ಹೇರಿದರೂ ಹಿಂದೆ ಸರಿಯೋ ಮಾತೇ ಇಲ್ಲ. ರಾಜೀಯೂ ಇಲ್ಲ ಎಂದಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವೂ ಶರವೇಗದಲ್ಲಿ ಸಾಗುತ್ತಿದೆ ಅಂತಲೂ ಹೇಳಿದ್ದಾರೆ.

10 ಸಾವಿರ ಕಲಾವಿದರು ಭಾಗವಹಿಸಿರೋ ಸಾಂಸ್ಕೃತಿಕ ಕಲೆ ಮತ್ತು ಕರಕುಶಲ ವಸ್ತುಪ್ರದರ್ಶನ ಹೆಸರಿನ ಕಾಶಿ ಏಕ್, ರೂಪ್ ಅನೇಕ್ ಉದ್ಘಾಟಿಸಿದ ಮೋದಿ, ಸಣ್ಣ ಪ್ರಮಾಣಗಳ ಕೈಗಾರಿಕೆಗಳ ಬಲವರ್ಧನೆ ಭರವಸೆ ನೀಡಿದ್ದಾರೆ. ಇನ್ವೆಸ್ಟ್‌ಮೆಂಟ್ ಕ್ಲಿಯರೆನ್ಸ್ ಸೆಲ್‌ ಮೂಲಕ ಬಂಡವಾಳ ಹೂಡಿಕೆಗೆ ಸಲಭ ದಾರಿ ಮಾಡಿಕೊಡಲಾಗುತ್ತದೆ. ಕರಕುಶಲ ವಸ್ತುಪ್ರದರ್ಶನದಲ್ಲಿ ಮೋದಿ ಸುತ್ತಾಡಿ, ಕಲಾವಿದರೊಂದಿಗೆ ಸಮಾಲೋಚನೆ ನಡೆಸಿದರು. ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾದಿಂದಲೂ ಕಲಾವಿದರೂ ಬಂದಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *